ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, June 23, 2018

CRIME INCIDENTS 23-06-2018

 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:23-06-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಧಾರವಾಡ ರಸ್ತೆ ಹಿರೇಹೊನ್ನಳ್ಳಿ ಗ್ರಾಮದ ಹತ್ತಿರ ರಸ್ತೆಯ ಹತ್ತಿರ ಆರೋಪಿತನಾದ ಯೋಗೇಶ ನಾಯಕ ಸಾ: ಕಲಘಟಗಿ ೀತನು ತನ್ನ ಮೊಟಾರ ಸೈಕಲ್ಲ ನಂ KA47/Q 5650 ನೇದ್ದನ್ನು ಧಾರವಾಡ ಕಡೆಯಿಂದ ಕಲಘಟಗಿ ಕಡೆಗೆ ಅತಿಜೋರು ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಪಿರ್ಯಾದಿದಾರನು ತನ್ನ ಮೊಟಾರ ಸೈಕಲ್ಲ ನಂ KA25/EX 9046 ನೇದ್ದರ ಮೇಲೆ ಬಸವರಾಜ ಹಂಪಣ್ಣವರ ಸಾ: ಕಮಲಾಪೂರ ಧಾರವಾಡ ಈತನಿಗೆ ಕೂಡ್ರಿಸಿಕೊಂಡು ಕಲಘಟಗಿ ಕಡೆಯಿಂದ ಧಾರವಾಡ ಕಡೆಗೆ ಹೊರಟವನಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಭಾರಿ ಪ್ರಮಾಣದ ಗಾಯಪಡಿಸಿ ಗಾಯಾಳು ಬಸವರಾಜ ಹಂಪಣ್ಣವರ ಸಾ: ಧಾರವಾಡ ಈತನು ಉಪಚಾರ ಪಲಿಸದೇ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಮರಣಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 168/2018 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಉಪ್ಪಿನಬೇಟಗೇರಿ ಗ್ರಾಮದ  ಮೃತ ಮಂಜುಳಾ ಕೊಂ ಜೈಲಾಪ ಅಷ್ಟಗಿ ವಯಾ 47 ವರ್ಷ ಸಾಃ ಉಪ್ಪಿನ ಬೆಟಗೇರಿ ಇವರು ದಿನಾಂಕ 23-06-2018 ರಂದು ಮುಂಜಾನೆ 11-45 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ ನೀರು ಏರಿಸುವ ಮೋಟಾರಸ ಪ್ಲಗ್ಅನ್ನು ತೆಗೆಯುವಾಗ ಅದರಿಂದಾ ಕರೆಂಟ ತಾಗಿ ತೀವ್ರ ಅಸ್ವಸ್ಥಳಾಗಿದ್ದು ಅವಳಿಗೆ ಉಪಚಾರೆಕ್ಕೆ ಅಂತಾ ಉಪ್ಪಿನ ಬೆಟಗೇರಿ ಆಸ್ಪತ್ರೆಯಲ್ಲಿ ಉಪಚರಿಸಿ ಹೇಚ್ಚಿನ ಉಪಚಾರಕ್ಕೆ ಅಂತಾ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯ ಜಿಲ್ಲಾ ಆಸ್ಪತ್ರೆಯ ಸಮೀಪ್ 12-55 ಗಂಟೆಗೆ ಮೃತಪಟ್ಟಿರುತ್ತಾಳೆ ವಿನಃ ಅವಳ ಮರಣದಲ್ಲಿ ಬೇರೆ ಏನು ಸಂಶಯ ಇರುವದಿಲ್ಲಾ ಅಂತಾ ಮೃತಳ ಗಂಡಾ  ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 20/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕನವನ್ನು ದಾಖಲಿಸಿದ್ದು ಇರುತ್ತದೆ.

Friday, June 22, 2018

CRIME INCIDENTS 22-06-2018
ಧಾರವಾಡ ಜಿಲ್ಲೆಯಲ್ಲಿ ದಿನಾಂಕ:22-06-2018 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶಿ ಗ್ರಾಮದ ಪಿರ್ಯಾದಿ  ಮನೆ ಹತ್ತಿರ ಇರುವ ಗಾಳೆಮ್ಮನ ಗುಡಿಯ ಗರ್ಭ ಗುಡಿಯೊಳಗೆ ಆರೋಪಿತನಾದ ಬಸವರಾಜ ನೀಲಪ್ಪ ದೊಡ್ಡಮನಿ. ವಯಾ: 20 ವರ್ಷ, ಸಾ: ಸಂಶಿ, ತಾ: ಕುಂದಗೋಳ ಈತನು ಮಹಾದೇವಿ ದೊಡ್ಡಮನಿ ಇವರ ಮೊಮ್ಮಗಳಿಗೆ ವಯಾ: 4 ವರ್ಷ ಇವಳು ಅಲ್ಪವಯಸ್ಕಳೆಂದು ಗೊತ್ತಿದ್ದರೂ ಸಹಿತ, ತನ್ನ ಕಾಮಬಯಕೆಯನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದ ಅವಳ ಮೇಲೆ ಲೈಂಗಿಕವಾಗಿ ಹಲ್ಲೆ ಮಾಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 104/2018 ಕಲಂ (U/s-376); PROTECTION OF CHILDREN FROM SEXUAL OFFENCES ACT 2012 (U/s-6,18)ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕರಡಿಗುಡ್ಡ ಗ್ರಾಮದಲ್ಲಿ ದಿನಾಂಕ 28-06-2018 ರಿಂದ ಗ್ರಾಮ ದೇವತೆ ಜಾತ್ರೆ ಆರಂಭವಾಗುತ್ತಿದ್ದು ಜಾತ್ರೆ ಕಾಲಕ್ಕೆ  ಭೀತ್ತಿಪತ್ರಗಳನ್ನು ಪ್ರಿಂಟ ಮಾಡಿಸಿದ್ದು ಇರುತ್ತದೆ  ಬಿತ್ತಿ ಪತ್ರದಲ್ಲಿ ಹಾಕಿದ ಊರಿನ ಪ್ರಮುಖರ ಹೆಸರಿನ ಸಲುವಾಗಿ ಸಹೋದರ ಸುಭಾಷ ಕುರಗುಂದ ಇವನೊಂದಿಗೆ ಮೈಮನಸ್ಸು ಬೆಳಸಿಕೊಂಡು ಅದೇ ವೈಮನಸ್ಸಿನಿಂದ ದಿನಾಂಕ 21-06-2018 ರಂದು 2030 ಗಂಟೆಗೆ ಸುಭಾಷ ಕುರಗುಂದ ಇವನು ದ್ಯಾಮವ್ವನ ಗುಡಿ ಮುಂದೆ ಸಾರ್ವಜನಿಕ ರಸ್ತೆ ಮೆಲೆ ಒಬ್ಬಂಟಿಯಾಗಿ ಸಿಕ್ಕಾಗ ಆರೋಪಿರಾದ 1.ಮಹಾತೇಶ ಕಬ್ಬೂರ ಹಾಗೂ ಇನ್ನೂ 05 ಜನರು  ಒಟ್ಟಿಗೆ ಕರೆದುಕೊಂಡು  ಬಂದ ಜಗಳ ತೆಗೆದು ಹೊಡಿ ಬಡಿ ಮಾಡುತ್ತಿರುವಾಗ ಜಗಳ ಬಿಡಿಸಲು ಬಂದ ಪಿರ್ಯಾದಿಗೆ ಅವಾಚ್ಯವಾಗಿ ಬೈಯ್ದಾಡಿ  ಎಳೆದಾಗಿ ಎಡೆಕುಂಟೆಯ ಕುಳದಿಂದ ತಲೆಗೆ ಹೊಡೆದು ಭಾರಿ ಗಾಯಪಡಿಸಿದ್ದಲ್ಲದೇ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 160/2018 ಕಲಂ 143.147.148.323.326.504.506.149 ಐಪಿಸಿ ನೇದ್ದರಲ್ಲಿ ಪ್ರಕರನವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕರಡಿಗುಡ್ಡ ಗ್ರಾಮದಲ್ಲಿ ದಿನಾಂಕ 28-06-2018 ರಿಂದ ಗ್ರಾಮ ದೇವತೆ ಜಾತ್ರೆ ಆರಂಭವಾಗುತ್ತಿದ್ದು ಜಾತ್ರೆ ಕಾಲಕ್ಕೆ  ಭೀತ್ತಿಪತ್ರಗಳನ್ನು ಪ್ರಿಂಟ ಮಾಡಿಸಿದ್ದು ಇರುತ್ತದೆ  ಬಿತ್ತಿ ಪತ್ರದಲ್ಲಿ ಪಿರ್ಯಾದಿದಾರನ ಹೆಸರು ಹಾಕಿಸಿದ್ದಕ್ಕೆ ಅಸಮದಾನಗೊಂಡ ಆರೋಪಿ ನಂ 01 ನೇದವನು ಪಿರ್ಯಾದಿಯೊಂದಿಗೆ ಮೈಮನಸ್ಸು ಬೆಳಸಿಕೊಂಡು ಅದೇ ವೈಮನಸ್ಸಿನಿಂದ ದಿನಾಂಕ 21-06-2018 ರಂದು 2030 ಗಂಟೆಗೆ ಪಿರ್ಯಾದಿಯು ದ್ಯಾಮವ್ವನ ಗುಡಿ ಮುಂದೆ ಸಾರ್ವಜನಿಕ ರಸ್ತೆ ಮೆಲೆ ಒಬ್ಬಂಟಿಯಾಗಿ  ಆರೋಪಿತರಾದ ಸುಭಾಸ ಕುರುಗುಂದ ಹಾಗೂ ಇನ್ನೂ 04 ಜನರು ಕೊಡಿಕೊಂಡು ಕರೆದುಕೊಂಡು  ಬಂದ ಪಿರ್ಯಾದಿಯೊಂದಿಗೆ ಜಗಳ ತೆಗೆದು ಹೊಡಿ ಬಡಿ ಮಾಡಿ ಕಾಲಿನಿಂದ ಒದೆಯುತ್ತಿರುವಾಗ ಪಿರ್ಯಾದಿಯು ತಪ್ಪಿಸಿಕೊಂಡು ತಮ್ಮ ಮನೆಯ ಮುಂದೆ ಹೋಗಿದ್ದು ಆಗ ಪಿರ್ಯಾದಿಯ ಸಹೋದರನ ಹೆಂಡತಿ ಸಾವಿತ್ರಿ ಬನಪ್ಪಗೌಡ ಕಬ್ಬೂರ ಇವಳು ಜಗಳ ಬಿಡಿಸಲು ಬಂದಾಗ ಬಡಿಗೆಯಿಂದ  ಅವಳ ಮುಖಕ್ಕೆ ಹೊಡೆದು ಭಾರೀ ಗಾಯಪಡಿಸಿದ್ದಲ್ಲದೇ  ಉಳಿದ ಆರೋಪಿತರು ಅವಳ ಮೈಮೇಲಿನ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿ. ಪಿರ್ಯಾದಿಯ ಮನೆಯ ಕದಕ್ಕೆ ಕಲ್ಲನ್ನು ಒಗೆದು ಲುಕ್ಸಾನ ಪಡಿಸಿ ಅವಾಚ್ಯವಾಗಿ ಬೈಯ್ದಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 161/2018 ಕಲಂ 143.147.148.326.326.354.427.504.506.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Thursday, June 21, 2018

CRIME INCIDENTS 21-06-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:21-06-2018 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ:ನಾಗಲಾವಿ ಗ್ರಾಮದ ವಸಂತ ಕಲಕೇರಿ ಇವರ ಮಗಳಾದ ಕುಮಾರಿ ದೀಪಾ ತಂದೆ ಗುರು ಕಲಕೇರಿ @ ವಡ್ಡರ, ವಯಾ 15 ವರ್ಷ, ಸಾ: ಗೌಂಟಾನ, ವಡ್ಡರ ಓಣಿ, ನಾಗಲಾವಿ, ತಾ:ಜಿ:ಧಾರವಾಡ ಇವಳು ಧಾರವಾಡದ ಎತ್ತಿನಗುಡ್ಡಕ್ಕೆ ಗಾರ್ಡನ್ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದು, ಅವಳಿಗೆ ಮುಗದ ಗ್ರಾಮದ ಆನಂದ ಮಹಾದೇವಪ್ಪ ಬೆಳ್ಳಿಗಟ್ಟಿ ಇವನು ಯಾವುದೋ ಉದ್ದೇಶದಿಂದ ಏನೋ ಆಮೀಶ ಒಡ್ಡಿ ಎಲ್ಲಿಯೋ ಅಪಹರಿಸಿಕೊಂಡು ಹೋಗಿದ್ದು ಇರುತ್ತದೆ.ಈ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 05/2018 ಕಲಂ 363 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಪುರ ಗ್ರಾಮದ ಸರ್ವೆ ನಂ. 286/2, 286/3, ನೇ ಜಮೀನುಗಳನ್ನುಚಂದ್ರಗೌಡ ದಾನಪ್ಪಣವರ ಇವರಿಗೆ 9 ಜನ ಆರೋಪಿತರ ಸಂಬಂಧಿಕರಿಂದ ಖರೀದಿ ಮಾಡಿಕೊಂಡಿದ್ದು ಆರೋಪಿತರು ವಿನಾಃಕಾರಣ ತಂಟೆ ತಕರಾರು ಮಾಡುತ್ತಾ ಬಂದು ದಿನಾಂಕ : 07/01/2018 ರಂದು ಮಧ್ಯಾಹ್ನ1-00 ಗಂಟೆಗೆ ಸದರ ಜಮೀನುಗಳಲ್ಲಿ ಸಂಗನ ಮತದಿಂದ ಅತಿಕ್ರಮ ಪ್ರವೇಶ ಮಾಡಿ  ಅಡ್ಡಗಟ್ಟಿ ತರುಬಿ ಅವ್ಯಾಚ ಬೈದಾಡಿ ಎದೆ ಮೇಲಿನ ಅಂಗಿ ಹಿಡಿದು ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ ಗುನ್ನಾನಂ 101/2018 ಕಲಂ 323.341.504.506.149 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಚಿಕ್ಕನತಿಱ ಗ್ರಾಮದ ಆರೋಪಿ ಹನಮಂತಪ್ಪ ಮಲ್ಲಿಕಾರ್ಜುನ ದೊಡ್ಡಮನಿ, ಸಾ : ಚಿಕ್ಕನರ್ತಿ, ಈತನು ಚಿಕ್ಕನರ್ತಿ ಗ್ರಾಮದಲ್ಲಿ ಹಾಗೂ ತಾನು ಕೆಲಸ ಮಾಡುತ್ತಿದ್ದ ಮೈಸೂರಿನಲ್ಲಿ ತನ್ನ ಹೆಂಡತಿ ಹಣದ ಸಲುವಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಹೆಚ್ಚಿನ ವರದಕ್ಷಿಣೆ ಆಸೆಗಾಗಿ ಗೊತ್ತಿಲ್ಲದಂತೆ ವಿಚ್ಛೇದನ ಪತ್ರಗಳಿಗೆ ಸಹಿ ಪಡೆದು ಪಿರ್ಯಾದಿಗೆ ಮೋಸ ಮಾಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 102/2018 ಕಲಂ 468(ಎ)305.504.506 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, June 20, 2018

CRIME INCIDENTS 20-06-2018
 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:20-06-2018 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ವರೂರ ಗ್ರಾಮದ ವಿ.ಆರ್.ಎಲ್. ಕಂಪನಿಯ ವಿಶ್ರಾಂತಿ ಗೃಹದಲ್ಲಿ, ಮೃತ ರಾಮಘನ ತಂದೆ ಪಾರೀಖಸಿಂಗ್ ಯಾದವ ಸಾ. 35 ವರ್ಷ ಸಾ. ಲೋಹಾರಾ ರಾಜ್ಯ ಬಿಹಾರ ಇವನು ಯಾವುದೋ ರೋಗದಿಂದ ಬಳಲಿ ಉಪಚಾರಕ್ಕೆ ಎಸ್.ಡಿ.ಎಂ. ಸತ್ತೂರಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 35/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕೊಟಗೊಂಡಹುಣಸಿ ಹದ್ದಿಯ ಕುಂದಗೋಳ ಕ್ರಾಸ್ ಹತ್ತಿರ ಆರೋಪಿತನಾದ ಮೈಕಲ್ @ ಡೇವಿಡ್ ತಂದೆ ಪ್ರಾನ್ಸಿಸ್ ಪೋಪಟ್ ವಯಾ 31 ವರ್ಷ ಸಾ!! ನೇಕಾರನಗರ ರಸ್ತೆ, ಟಿಪ್ಪುನಗರ, ಖಾದ್ರಿ ಆಸ್ಪತ್ರೆ ಹತ್ತಿರ ಹಳೆಹುಬ್ಬಳ್ಳಿ ಇತನು ಸಣ್ಣ ಪುಟ್ಟ ಕಳ್ಳತನ ಮಾಡುವ ಇರಾಧೆಯಿಂದ ಕುಳಿತುಕೊಂಡಿದ್ದಾಗ ಸಿಕ್ಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 176/2018 ಕಲಂ 109 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.