ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, June 1, 2018

CRIME INCIDENTS 01-06-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:01-06-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಹುಬ್ಬಳ್ಳಿ ರಸ್ತೆಯ ಮೇಲೆ ತಡಸ ಕ್ರಾಸ್ ಸಮೀಪ ಮೋಟಾರ್ ಸೈಕಲ್ ನಂ KA-27-EH-1671 ನೇದ್ದರ ಸವಾರನಾದ ಚಂದ್ರಕಾಂತ ವಾಸಪ್ಪ ಶೇಶಪ್ಪನವರ ಸಾ..ಶಿಂಗನಹಳ್ಳಿ ತಾ..ಮುಂಡಗೋಡ ಇವನು  ಕಲಘಟಗಿ ಕಡೆಯಿಂದಾ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ತನ್ನ ಮುಂದೆ ಹೊರಟ ಲಾರಿಗೆ ಓವರಟೇಕ್ ಮಾಡಿಕೊಂಡು ರಾಂಗ್ ಸೈಡಿನಲ್ಲಿ ಹೋಗಿ ದಾಸ್ತಿಕೊಪ್ಪದಿಂದ ಕಲಘಟಗಿ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ KA-25-EN-2956 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ್ ಸೈಕಲ್ ಸವಾರನಾದ ನಾಗಪ್ಪ ಹುಬ್ಬಳ್ಳಿ & ಹಿಂದೆ ಕುಳಿತ ಮಂಜುನಾಥ ಟವಳಿ ಇವರಿಗೆ ತಲೆಗೆ ಮೈಕೈಗಳಿಗೆ ಗಾಯಪಡಿಸಿದ್ದಲ್ಲದೆ ತಾನೂ ಸಹಾ ತಲೆಗೆ ಮೈಕೈಗೆ ಭಾರಿ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 153/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.  ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ನವಲಗುಂದ ರಸ್ತೆಗೆ ಹೊಂದಿಕೊಂಡಿರುವ ಕುಸುಗಲ್ ಹದ್ದಿಯ ಹುಂಡೈ ಶೋ ರೂಮ್ ಸಮೀಪದ ಪಿರ್ಯಾಧಿ ಜಮೀನದಲ್ಲಿ ಇದರಲ್ಲಿಯ ಆರೋಪಿತಾದ 1) ಗಂಗಾಧರ ಸುಭಾಷ ಬೆಂಗೇರಿ 2) ಪ್ರವೀಣ ಬಸಪ್ಪ ಬೆಂಗೇರಿ 3) ನವೀನ ಗುರುಶಿದ್ದಪ್ಪ ಬೆಂಗೇರಿ ಎಲ್ಲರೂ ಸಾ!! ಕುಸುಗಲ್ ಇವರುಗಳು ಹಿಂದಿನ ದ್ವೇಶದ ಸಿಟ್ಟಿನಿಂದ ಪಿರ್ಯಾಧಿ ಜಮೀನದಲ್ಲಿ ಅತೀಕ್ರಮಣ ಪ್ರವೇಶ ಮಾಡಿ ಜಮಿನದಲ್ಲಿ ಕೆಲಸ ಮಾಡುತ್ತಿದ್ದ ಪಿರ್ಯಾಧಿಗೆ ಹಾಗೂ ಪಿರ್ಯಾಧಿ ಅಣ್ಣ ಚನ್ನಬಸಪ್ಪ ವೀರುಪಾಕ್ಷಪ್ಪ ಪಟ್ಟಣಶೆಟ್ಟಿ ಇವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಬಡಿಗೆಗಳಿಂದ ಹೊಡೆದು ಗಾಯಪಡಿಸಿದ್ದು ಇರುತ್ತದೆ. ಈ ಬಗ್ಗೆ ದಿನಾಂಕ: 31-05-2018 ರಂದು 20-30 ಗಂಟೆ ಸುಮಾರಕ್ಕೆ ಪಿರ್ಯಾಧಿ ತಂದೆ ವೀರುಪಾಕ್ಷಪ್ಪ ಈಶ್ವರದಪ್ಪ ಪಟ್ಟಣಶೆಟ್ಟಿ ಹಾಗೂ ಪಿರ್ಯಾಧಿ ಅಣ್ಣ ಶಿವಾನಂದ ವೀರುಪಾಕ್ಷಪ್ಪ ಪಟ್ಟಣಶೆಟ್ಟಿ ಇವರುಗಳು ಪಿರ್ಯಾಧಿ ಮನೆಯ ಮುಂದೆ ಯಾಕ ಜಮೀನದಲ್ಲಿ ಹೊಡಿದಿರಿ ಅಂತಾ ಕೇಳುವಷ್ಟರಲ್ಲಿ, ಇವರುಗಳು ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಬಡಿಗೆ ಹಾಗೂ ಕಬ್ಬಿಣದ ರಾಡಿನಿಂದ ಹೊಡೆದು ಗಾಯಪಡಿಸಿ ಜೀವದ ಬೆಧರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 155/2018  ಕಲಂ 506.34.447.504.324. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಮಾದನಬಾವಿ ಗ್ರಾಮದ  ಮೃತಃ ಮಹಾನಿಂಗಪ್ಪ ತಂದೆ ಗಂಗಪ್ಪ ದೊಡ್ಡವಾಡ ವಯಾ  14 ವರ್ಷ. ಸಾಃ ಮಾದನಭಾವಿ ಇವನು ಈ ದಿವಸ ದಿನಾಂಕ 01-06-2018 ರಂದು ಮುಂಜಾನೆ 11-00 ಗಂಟೆಗೆ ತಮ್ಮ ದನಕರುಗಳಿಗೆ ನೀರು ಕುಡಿಸಲು ಅಂತಾ ಮುಗಳಿ ಕರೆಗೆ ಹೋಗಿ ಅಲ್ಲಿ ನೀರು ಕುಡಿಸಿ ದನಕರುಗಳ ಮೈ ತೊಳೆಯಲು ಅಂತಾ ತನ್ನ ಅರಿವೆಗಳನ್ನು ಕಳೆದು ಕೆರೆಯ ದಂಡೆಯ ಮೇಲೆ ಇಟ್ಟು ನೀರಿಗೆ ಇಳಿದಾಗ, ಅಕಸ್ಮಾತಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಅವನಿಗೆ ಈಜು ಬಾರದ್ದರಿಂದ ಮೃತ ಪಟ್ಟಿರುತ್ತಾನೆ  ವಿನಾಃ ಸದರಿಯವನ ಸಾವಿನಲ್ಲಿ ಬೇರೆ ಸಂಶಯ ವಗೈರೆ ಇರುವುದಿಲ್ಲ ೀ ಘಟನೆಯು ಮುಂಜಾನೆ 11-00 ಗಂಟೆಯಿಂದಾ ಮದ್ಯನ್ಹ 14-00 ಗಂಟೆಯ ನಡುವೆ ಆಗಿರುತ್ತದೆ,  ಅಂತಾ ಮೃತ ತಂದೆ ವರದಿಯಲ್ಲಿ ಕೋಟ್ಟಿದ್ದು ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 16/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ.