ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, June 3, 2018

CRIME INCIDENTS 03-06-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:03-06-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕಃ 16/12/2014 ರಂದು ಸಾಯಂಕಾಲ  17-30 ಗಂಟೆ ಸುಮಾರಿಗೆ ತಾರಿಹಾಳ ಗ್ರಾಮದ ಪಿರ್ಯಾದಿ ಮಹಾದೇವಿ ಹುಲಕೊಪ್ಪ ಇವರ ಮನೆಯ ಹತ್ತಿರ ಆರೋಪಿತರು ಸಂಗನಮತ ಮಾಡಿಕೊಂಡು ಬಂದು ಆಸ್ತಿ ತಂಟೆಯ ಹಿನ್ನಲೆಯಲ್ಲಿ ಇದರಲ್ಲಿಯ ಸಾಕ್ಷೀದಾರ ಸಹದೇವಪ್ಪ ಕಲ್ಲಪ್ಪ ಹುಲಕೊಪ್ಪ  ಇವನಿಗೆ ಕೆಳಗೆ ಕೆಡವಿ ಆ.ಶೇ.ನಂ 1 ನೇ ಆರೋಪಿನಾದ ಬಸಪ್ಪ ಪರಪ್ಪ ಹುಲಕೊಪ್ಪ ಇತನು ಆ.ಶೇ.ನಂ. 2 ನೇ ಆರೋಪಿತನಾದ ಮಲ್ಲಪ್ಪ ಪರಪ್ಪ ಹುಲಕೊಪ್ಪ ಇವನು  ಒಳಪೆಟ್ಟಾಗುವಂತೆ  ಹೊಟ್ಟೆಗೆ ಹಾಗೂ ಬೆನ್ನಿಗೆ ಗುದ್ದಿ ತೀವ್ರ ತರನವಾದ ಒಳಪೆಟ್ಟಾಗುವಂತೆ ಮಾಡುತ್ತಿದ್ದಾಗ ಇದರಲ್ಲಿಯ ಪಿರ್ಯಾದಿ ಮಾಹಾದೇವಿ ಕೋಂ ಸಹದೇವಪ್ಪ ಹುಲಕೊಪ್ಪ ಇವರು ಮಧ್ಯ ಹೋದಾಗ ಸದರಿ ಆ.ಶೇ.ನಂ.1 & 2 ಹಾಗೂ 3 ನೇಆರೋಪಿತಳಾದ  ಪಾರವ್ವ ಕೋಂ ಬಸಪ್ಪ ಹುಲಕೊಪ್ಪ ಎಲ್ಲರೂ ಕುಡಿ ಲೇ ಬೊಸಡಿ ನಮ್ಮ ವಿರುದ್ದ ಸಾಕ್ಷಿ ಹೇಳತ್ತಿಯಾ ಅಂತಾ ಅವಾಚ್ಯ ಬೈದಾಡಿದ್ದಲ್ಲದೇ ಇದರಲ್ಲಿಯ ಎರಡ ನೇ ಆರೋಪಿತನು ಪಿರ್ಯಾದಿದಾರಳ ಮೈ ಮೇಲೆ ಏರಿ ಬಂದು ಕೈ ಹಾಕಿ ಎಳೆದು ಸೀರೆಯನ್ನು ಜಗ್ಯಾಡಿದನು ಮತ್ತು ನೀನು ಊರಿನ ಜನರ ಜೊತೆ ಮಕ್ಕೊಂತಿಯಾ ನನ್ನ ಜೊತೆ ಮಲಗು ಬಾ, ಅಂತಾ ಜೋರಾ ಕುಗ್ಗಿ ಹೇಳಿ ನಿಮ್ಮನ್ನು ಬಿಡುವುದಿಲ್ಲಾ, ಒಂದು ಕೈ ನೋಡಿಕೊಳ್ಳುತ್ತೇವೆ ಹಾಗೂ ನಿಮ್ಮಬ್ಬರನ್ನು ಜೀವ ಸಹಿತಾ ಊಳಿಸುವುದಿಲ್ಲಾ ಅಂತಾ ಕೂಗಾಡುತ್ತಾ ಜೀವ ಬೇದರಿಕೆ ಹಾಕಿ ಹೋದ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 160/2018 ಕಲಂ IPC 1860 (U/s-506, 34, 323, 354, 504,324) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕಃ10/04/2016 ರಂದು ಸಂಜೆ 05-00 ಗಂಟೆ ಸುಮಾರಿಗೆ ಶಿರಗುಪ್ಪಿ ಗ್ರಾಮದ ಜೈನ (ಪಾರ್ಶ್ವನಾಥ) ಬಸದಿಯಲ್ಲಿ ಆರೋಪಿತರಾದ 1.ಧ್ಯಾನಕುಮಾರ ಅಂಗಡಿ, 2.ಮಹಾವೀರ ಅಂಗಡಿ, 3.ಮಹಾವೀರ ಪಾಟೀಲ, 4.ಜಯಪಾಲ ಕಣವಿ ಮತ್ತು 5.ಶಾಂತಪ್ಪಾ ಕಣವಿ ಸಂಗನಮತ ಮಾಡಿಕೊಂಡು ಬಸದಿಯ ಹಣ ವನ್ನು ದುರುಪಯೋಗ ಪಡಿಸಿಕೊಂಡು ಲೆಕ್ಕ ಪತ್ರಕೊಡದೆ ವಿಶ್ವಾಸ ದ್ರೋಹ ಬಗೆದು ಕೇಳಲು ಹೋದ ಪಿರ್ಯಾದಿ ದೇವೆಂದ್ರಪ್ಪ ಗುಗ್ಗರಿ ಇವರಿಗೆ ಅವಾಚ್ಯ ಬೈದಾಡಿ ಮರಣಾತಿಂಕ ಹಲ್ಲೆ ಮಾಡಲು ಪ್ರಯತ್ನಿಸಿದ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 161/2018 ಕಲಂ IPC 1860 (U/s-34, 406, 420, 415, 405, 307, 416)
ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.