ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, June 4, 2018

CRIME INCIDENTS 04-06-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:04-06-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ ಗಂಡನಾದ ವೆಂಕರೆಡ್ಡಿ ಕೆಂಚರೆಡ್ಡಿ ಕೊನ್ನೂರ ವಯಾ: 56 ವರ್ಷ ಸಾ:ಸೊಟಕನಾಳ ಈತನು ಸೊಟಕನಾಳ ಗ್ರಾಮದಲ್ಲಿ ಇರುವ ಆತ್ಮನಂದ ಆಶ್ರಮಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 119/2018 ಕಲಂ ಮನುಷ್ಯಾಕಾಣೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಹದ್ದಿನಗುಡ್ಡ ಲಾರಿ ನಂ KA-25-C-7295 ನೇದರ ಚಾಲಕನು ತನ್ನ ಲಾರಿಯನ್ನು ಬೆಳಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಲಾರಿಯ ವೇಗ ನಿಯಂತ್ರಣ ಮಾಡಲಾಗದೇ ಲಾರಿಯನ್ನು ರಸ್ತೆ ಎಡಸೈಡಿನ ತೆಗ್ಗಿನಲ್ಲಿ ಪಲ್ಟಿ ಮಾಡಿ ಕೆಡವಿ  ಜಖಂಗೊಳಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 146/2018 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್  ಠಾಣಾ ವ್ಯಾಪ್ತಿಯ:ಕರಡಿಕೊಪ್ಪಾ ಗ್ರಾಮದ ಸದರಿ ನೀಲವ್ವಾ  ಹೊಸಮಠ ಇವರು ಮನೆ ಬಿಟ್ಟು ಹೋದ ಸಂದರ್ಬದಲ್ಲಿ ಆತನ ಹೆಸರನ್ನು ಬಳಿಸಿಕೊಂಡು ತನ್ನ ಗಂಡನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲ ಮಾಡಿ ಆತನ ಮರಣ ನಂತರ ಫಿರ್ಯಾದಿದಾರನ ಹೆಸರಲ್ಲಿ ಮರಣ ಪ್ರಮಾಣ ಪತ್ರ ಪಡೆದುಕೊಂಡು ಫಿರ್ಯಾದಿದಾರನೇ ತನ್ನ ಗಂಡನೆಂದು ಹೇಳಿ ಖೋಟ್ಟಿ ಪ್ರಮಾಣ ಪತ್ರ ಮಾಡಿ ಹೆಸ್ಕಾಂ ಇಲಾಖೆಗೆ ನೀಡಿ ಮೋಸದಿಂದ ಅನುಕಂಪದ ಆಧಾರತ ಕೆಲಸ ಮಾಡುತ್ತಿದ್ದು ಈ ಬಗ್ಗೆ  ಪಿರ್ಯಾದಿದಾರನು  ದಿನಾಂಕಃ 27/10/2011 ರಂದು ಸಂಜೆ 04-00 ಗಂಟೆ ಸುಮಾರಕ್ಕೆ  ಇದರಲ್ಲಿಯ ಆರೋಪಿತಳು ಪಿರ್ಯಾದಿಯ ವಾಸದ ಊರಾದ ಕುರಡಿಕೊಪ್ಪ ಗ್ರಾಮಕ್ಕೆ ಬಂದಗ ಹಿರಿಯರು ಸದರಿ ಆರೋಪಿತಳಿಗೆ ಅವಳ ಕೆಲಸ ಮಾಡುತ್ತಿರುವ ಸೇವೆಯ ಬಗ್ಗೆ ವಿಚಾರಣೆ ಮಾಡಲಾಗಿ ಸದರಿ ಫಿರ್ಯಾದಿದಾರನು ಏಕೆ ಅತ್ತಿಗೆಯವರೇ ನಾನು ಜೀವಂತ ಇರುವಾಗಲೇ ನನ್ನ ಹೆಸರಿನಲ್ಲಿ ಮರಣ ಪ್ರಮಾಣ ಪತ್ರವನ್ನು ಪಡೆದು ಹೆಸ್ಕಾಂ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ನನ್ನ ಹೆಸರಿನಲ್ಲಿ ಏಕೆ ಕೆಲಸ ಮಾಡುತ್ತಿರುವಿರಿ ಇದರಿಂದ ನನಗೂ ತೊಂದರೆಯಾಗುತ್ತದೆ ಅಂತಾ ಕೇಳಲಾಗಿ ಸದರೀ ಆರೋಪಿತಳು ಗ್ರಾಮದ ಹಿರಿಯರ ಮುಂದೆ ಅವಾಚ್ಯ ಬೈದಾಡಿ  ನನ್ನ ಕೆಲಸದ ಬಗ್ಗೆ ವಿಚಾರಣೆ ಮಾಡಿದರೇ ನಿನನ್ನು ಜೀವ ಸಹಿತ ಬಿಡುವದಿಲ್ಲಾ ನಿನ್ನನ್ನು ಕೊಲೆ ಮಾಡಿಸಿ ಸಾಯಿಸಿ ಬಿಡುತ್ತೇನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 162/2018 ಕಲಂ 506.34.406.504.420 ನೇದ್ದರಲ್ಲಿಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮನಗುಂಡಿ ಗ್ರಾಮದ ಮೃತ ನೀಲವ್ವ ತಂದೆ ನಿಂಗಪ್ಪ ಹೊನ್ನಾಪುರ ವಯಾ 18 ವರ್ಷ ಜಾತಿ ಹಿಂದು ವಾಲ್ಮೀಕಿ ಉದ್ಯೋಗ ಮನೆ ಕೆಲಸ ಸಾ:ಮನಗುಂಡಿ ಇತಳು ತನ್ನ ಎಮ್ಮೆಯನ್ನು ಹೊಡೆದುಕೊಂಡು ತಮ್ಮ ಜಮೀನ ಹತ್ತಿರ ಇರುವ ಹಳ್ಳದಲ್ಲಿ ಎಮ್ಮೆಯ ಮೈಯನ್ನು ತೊಳೆಯುತಿದ್ದಾಗ ಒಮ್ಮೆಲೆ ಮಳೆಯು ನೀರು ಬಂದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ  ಮೃತ ಪಟ್ಟಿದ್ದು ಇರುತ್ತದೆ ಸದರಿ ನನ್ನ ಮಗಳ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತಳ ತಂದೆಯು ಕೊಟ್ಟ ವರದಿಯನ್ನು ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 18/2018 ಕಲಂ 174 ಸಿ.ಆರ.ಪಿ.ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.