ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, June 11, 2018

CRIME INCIDENTS 11-06-2018ಧಾರವಾಡ ಜಿಲ್ಲೆಯಲ್ಲಿ ದಿನಾಂಕ:11-06-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣಪೊಲೀಸ್ ಠಾಣಾ ವ್ಯಾಪ್ತಿಯ: ಅಮ್ಮಿನಭಾವಿ ಗ್ರಾಮದ ಚಿಕ್ಕಲಗಾರ ಓಣಿಯ ಸರಕಾರಿ ಉರ್ದು ಶಾಲೆ ಹತ್ತಿರ ಸಾರ್ವಜನಿಕ ರಸ್ತೆ ಹತ್ತಿರ ಆರೋಪಿತನಾದ ಫಕ್ಕೀರಪ್ಪ ತಂದೆ ಶಿವಪ್ಪ ಹುಬ್ಬಳ್ಳಿ  ವಯಾ-28 ವರ್ಷ. ಜಾತಿ-ಹಿಂದು ವಾಲ್ಮೀಕಿ ಉದ್ಯೋಗ-ಚಾಲಕ  ಸಾ: ಅಮ್ಮಿನಭಾವಿ ಗ್ರಾಮದ ಚಿಕ್ಕಲಗಾರ ಓಣಿ ಇವನು ತನ್ನ ಸ್ವಂತ ಪಾಯ್ದೆ ಗೋಸ್ಕರ ಯಾವುದೆ ಪಾಸು ವ ಪರ್ಮಿಟ ಇಲ್ಲದೆ ಸರಕಾರದ ಬೋಕ್ಕಸಕ್ಕೆ ನಷ್ಠವನ್ನುಂಟು ಮಾಡುವ ಉದ್ದೇಶದಿಂದ ಒಂದು ಸ್ಟಾರ ಗುಟಕಾ ಕೈ ಚೀಲದಲ್ಲಿ ಒಟ್ಟು 26  ಹೈವರ್ಡ್ಸ ಚಿಯರ್ಸ್ ವಿಸ್ಕಿ ತುಂಬಿದ 90 ಎಂ.ಎಲ್  ಅಳತೆಯ ಮದ್ಯದ ಟೆಟ್ರಾ ಪಾಕೀಟಗಳು ಅ:ಕಿ: 780/--ರೂ  02) ಒಟ್ಟು 6 ಓಲ್ಡ ಟವರನ್ ವಿಸ್ಕಿ ತುಂಬಿದ 180 ಎಂ.ಎಲ್ ಅಳತೆಯ ಮದ್ಯದ ಟೆಟ್ರಾ ಪಾಕೀಟಗಳು ಅ:ಕಿ: 438/-ರೂ   ನೇದ್ದವುಗಳನ್ನು ಅಕ್ರಮವಾಗಿ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುವಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 151/2018 ಕಲಂ ಅಬಕಾರಿ ಕಾಯ್ದೆ 32.34 ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..

2.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 55/2018,56/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಡ್ನೂರ ಗ್ರಾಮದ ಬಸವರಾಜ ಇತನು ಆರೋಪಿತನು ಹಳ್ಳಿಕೇರಿ ಗ್ರಾಮದ ಅಡ್ನೂರ ಗ್ರ್ರಾಮದ ಕಡೆಗೆ ಹೋದ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಹೋಗಿ ಬರುವ ಸಆರ್ವಜನಿಕರಿಗೆ ಜೋರಾಗಿ ಬಾಯಿ ಮಾಡುತ್ತಾ ಯಾರು ನನಗೆ ಏನು ಮಾಡುತ್ತಾರೆ ಪ್ಲಾಟಿನಲ್ಲಿ ಇರುವ ನನ್ನ ಶೆಡ್ಡಿನ ಹತ್ತಿರ ಯಾರಾದರೂ ಬಂದರೆ ಸುಮ್ಮನೆ ಬಿಡುವುದಿಲ್ಲ ಅಂತಾ ವಗೈರೆ ಬೈದಾಡುತ್ತಾ ಸಾರ್ವಜನಿಕ ಶಾಂತತಾ ಭಂಗ ಹಾಹು ನೆಮ್ಮದಿ ಹಾಳು ಮಾಡುತ್ತಿದ್ದು ಸದರೀಯವನು ಕ್ರೂರನಿದ್ದು ಯಾವುದಾದರೂ ಸಂಜ್ಞೆಯ ಅಪರಾಧ ಎಸಗುವ ಸಾಧ್ಯತೆ ಇರುವುದರಿಂದ ಸದರಿಯವನ ಮೇಲೆ ಗುನ್ನಾನಂ 67/2018 ಕಲಂ 110(ಇ)(ಜಿ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

 4.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮುಗದ ಮೃತ ನಾಗರಾಜ ತಂದೆ ಹನಮಂತಪ್ಪ ಬಂಡಿವಡ್ಡರ ವಯಾ-36 ವರ್ಷ ಇವನಿಗೆ  ಈಗ ಸುಮಾರು 03- 04 ತಿಂಗಳಿಂದ ತಲೆಗೆ ಪೆಟ್ಟಾಗಿ ಮಾನಸಿಕವಾಗಿ ಅಸ್ಥಿಗೊಂಡಿದ್ದು ಅದೇ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ 11-06-2018 ರಂದು 1200 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದಾಗ ತನ್ನಷ್ಟಕ್ಕೆ ತಾನೇ ವಾಯರದಿಂದ ಮನೆಯ ಪಡಸಾಲೆಯಲ್ಲಿರುವ ಜಂತಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನಃ ಇವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ  ಫಿಯಾಱಧಿ ಕೊಟ್ಟಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣಪ ಪೊಲೀಸ್ ಠಾಣೆಯಲ್ಲಿ ಯುಡಿನಂ 19/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.