ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, June 12, 2018

CRIME INCIDENTS 12-06-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:12-06-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ತುಮರಿಕೊಪ್ಪ ರಸ್ತೆಯ  ಬೇಗೂರು ಕ್ರಾಸ್ ಹತ್ತಿರ ಮೋಟಾರ ಸೈಕಲ್ ನಂ ಕೆಎ-25-ಎವೈ-7483ನೇದ್ದರ ಚಾಲಕ ಇವನು ಕಲಘಟಗಿಯಿಂದಾ ತುಮರಿಕೊಪ್ಪ ಕಡೆಗೆ ಅತೀ ಜೀರಿನಿಂದ &ನಿಷ್ಕಾಳಜಿತನದಿಂದ ನೇಡಿಸಿಕೊಂಡು ಬಂದವನೆ ಬೇಗೂರು ಕ್ರಾಸ್ ಹತ್ತಿರ ರಸ್ತೆಯ ಸೈಡಿನಲ್ಲಿ ನೆಡೆಸಿಕೊಂಡು ಹೊರಟ ಮೋಟಾರ ಸೈಕಲ್ ನಂ ಕೆಎ- 25-ಎಎಚ್ 8141ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ ಸೈಕಲ್ ಸವಾರನಾದ ಪಿರ್ಯಾದಿ ಬಲಗೈಗೆ ಹಾಗೂ ಅವನ ಹೆಂಡತಿಯ  ಬಲಗೈಗೆ ಮತ್ತು ಅವನ ಮಗಳ ಬಲಗಾಲಿಗೆ ಸಾದಾ ವ ಭಾರಿ ಗಾಯಾಪಡಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 155/2018 ಕಲಂ 279.337.338. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶಿ ಗ್ರಾಮದ ಬ್ರಹ್ಮಾನಂದ ಮಠದ ಹತ್ತಿರ ಇರುವ ಕುಡಿ ಕೆರೆಯಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವರದಿದಾರನ ಅಜ್ಜಿ ಅಮೀನಾಬಿ ಕೋಂ ಹುಸೇನಸಾಬ ಬರದ್ವಾಡ, ವಯಾ : 85 ವರ್ಷ ಸಾ : ಸಂಶಿ ತಾ : ಕುಂದಗೋಳ ಇವಳು ನೀರು ಕುಡಿಯಲು ಹೋಗಿ ಆಕಸ್ಮಾತ ಕಾಲು ಜಾರಿ ಕೆರೆಯಲ್ಲಿ ಬಿದ್ದು ನೀರು ಕುಡಿದು ಮರಣ ಹೊಂದಿದ್ದು ಇರುತ್ತದೆ. ಅವಳ ಮರಣದಲ್ಲಿ ಯಾವುದೇ ರೀತಿಯ ಸಂಶಯ ಇರುವುದಿಲ್ಲವಾಗಿ  ಅಂತಾ ಫಿಯಾಱಧೀ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 27/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ತಿರ್ಲಾಪೂರ ಗ್ರಾಮದ ಮೃತ ಶಿದ್ದಲಿಂಗಪ್ಪ ಭೀಮಪ್ಪ ಸೂರಿನ ವಯಾ:26 ವರ್ಷ ಸಾ:ತಿರ್ಲಾಪೂರ ಈತನು ತನ್ನ ತಂದೆಯು ಈಗ ಸುಮಾರು 8 ವರ್ಷ ಗಳ ಹಿಂದೆ ಹುಬ್ಬಳ್ಳಿಯ ಎಕ್ಸಿಸ್ ಬ್ಯಾಂಕಿನಲ್ಲಿ ಬೆಳೆ ಸಾಲ 7 ಲಕ್ಷ 60 ಸಾವಿರ ರೂಪಾಯಿಗಳು ಮತ್ತು ಮ್ಯಾಗ್ಮಾ ಫೈನಾನ್ಸದಲ್ಲಿ ರೂ. 6 ಲಕ್ಷ 20 ಸಾವಿರ ರೂಪಾಯಿಗಳನ್ನು ಸಾಲವನ್ನು ಮಾಡಿದ್ದು 3-4 ವರ್ಷಗಳಿಂದ ಸರಿಯಾಗಿ ಮಳೆ ಬೆಳೆ ಬಾರದ್ದರಿಂದ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಮನಸ್ಸಿಗೆ ಹಚ್ಚಿಕೊಂಡು ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೆ ತನ್ನ ಮನೆಯ ಮುಂದೆ ಇರುವ ಎತ್ತುಗಳ ಶೆಡ್ಡಿನಲ್ಲಿ ಕಟ್ಟಿಗೆಯ ಬೆಲಗಿಗೆ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಮೃತನ ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವುದಿಲ್ಲ ಅಂತಾ ಪೋತಿಯ ತಂದೆಯು ಫಿಯಾಱಧೀ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 26/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.