ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, June 19, 2018

CRIME INCIDENTS 19-06-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:19-06-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಯಮನೂರ ಗ್ರಾಮದ  ಮನೆಯ ಪಕ್ಕದ ಖುಲ್ಲಾ ಜಾಗೆಯ ಸಂಭಂದ ತಂಟೆ ತಕರಾರುಗಳು ಇದ್ದು ಫಿರ್ಯಾದಿಯ ತಮ್ಮ ಮನೆಯ ಗೋಡೆಗೆ ಉಗುಳಿದ ಎಲೆ ಅಡಿಕೆ ಒರಿಸಿ ಮಣ್ಣು ಹಾಕುತ್ತಿದ್ದಾಗ ಆರೋಪಿತರಾದ ಮಂಜು ಹಳ್ಳಿಕೇರಿ ಹಾಗೂ ಇನ್ನೂ ಇಬ್ಬರು ಕೊಡಿಕೊಂಡು ಇಲ್ಲಿ ಯಾಕೆ ಮಣ್ಣು ಹಾಕುತ್ತಿ ಮತ್ತು ಮನೆ ಕಿಡಕಿ ಯಾಕೆ ತೆರೆದಿರುತ್ತಿ ಅಂತಾ ಅವಾಚ್ಯ ಬೈದಾಡುತ್ತಿದ್ದು ಆಗ ಬಾಯಿ ಸಪ್ಪಳ ಕೇಳಿ ಫಿರ್ಯದಿಯ ಅತ್ತೆ ಮನೆಯಿಂದ ಹೊರಗೆ ಫಿರ್ಯಾದಿಗೆ ಸೀರೆ ಹಿಡಿದು ಎಳೆದಾಡಿ ಕೈಯಿಂದ ಹೊಡಿ ಬಡಿ ಮಾಡಿದ್ದು ಫಿರ್ಯಾದಿಯ ಅತ್ತೆಗೆ ಕೈಯಿಂದ ಹೊಡಿ ಬಡಿ ಮಾಡಿ ಅವಾಚ್ಯ ಬೈದಾಡಿ ಜೀವಧ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 123/2018 ಕಲಂ 323.354.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಳ್ನಾವರ ಪೊಲೀಸ್ ಠಾಣ ವ್ಯಾಪ್ತಿಯ: ಅಳ್ನಾವರದ ಆಜಾದರೋಡದ ಬಾಜು ಇರುವ ಇದರಲ್ಲಿಯ ಮುಸ್ತಾಪ ಬೆಲೂರ ಇವರ ಮನೆಯ ಮುಂದೆ ನಿಲ್ಲಿಸಿದ ಪಿರ್ಯಾದಿಯ ಬಾಬತ್ತ ಹಿರೋ ಹೊಂಡಾ ಸ್ಟ್ರೀಟ ಕಂಪನಿಯ ಮೋಟರ ಸೈಕಲ್ಲ ನಂ ಕೆ.ಎ25/ಎಲ್-5932 ಅ||ಕಿ|| 20.000/- ರೂ ಕಿಮ್ಮತ್ತಿನ ಮೋಟರ ಸೈಕಲ್ಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 68/2018 ಕಲಂ 379 ನೇದ್ದರಲ್ಲಿ ಪ್ರಕರಣವನ್ನುದಾಖಲಿಸಿದ್ದು ಇರುತ್ತದೆ.
 
3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಶಹರದಲ್ಲಿರುವ ಸರಕಾರಿ ಆಸ್ಪತ್ರೆಯ ಎದುರಿಗೆ ಇರುವ ಬಸ್ಟ್ಯಾಂಡ ಹತ್ತೀರ ಆರೋಪಿನಾದ ಮಂಜುನಾಥ ಲಮಾಣಿ ಇತನು  ತನ್ನ ಸ್ವಂತ ಪಾಯ್ದೆಗೋಸ್ಕರ ಯಾವುದೆ ಪಾಸು ವ ಪರ್ಮೀಟ ಇಲ್ಲದೆ ಓರಿಜಿನಲ್ ಚಾಯ್ಸ ವಿಸ್ಕೀ ತುಂಬಿದ 90 ML ದ 92 ಟೆಟ್ರಾ ಪಾಕೀಟುಗಳು & ಓಲ್ಡ ಟಾವರ್ನ ವಿಸ್ಕೀ ತುಂಬಿದ 180 ML ದ 12  ಟೆಟ್ರಾ ಪಾಕೀಟುಗಳನ್ನು ಒಟ್ಟು ಅ..ಕಿ..3581/- ರೂ ಕಿಮ್ಮತ್ತಿನವುಗಳನ್ನು ತನ್ನ ತಾಬಾದಲ್ಲಿ ಇಟ್ಟುಕೊಂಡು ಮಾರಾಟ ಮಾಡುವ ಕುರಿತು ಸಾಗಾಟ ಮಾಡುತ್ತಿರುವಾಗ ಸಿಕ್ಕಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 162/2018 ಕಲಂ 32 ಅಬಕಾರಿ ಕಾಯ್ದೆ ಪ್ರಕಣದಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ತಾವರಗೇರಿ ಗ್ರಾಮದ ಶಾಂತವ್ವಾ ಕೋಂ ಬಸಪ್ಪ ರೇವಡ್ಯಾಳ ಸಾ..ತಾವರಗೇರಿ ಇವರು ಗಂಡನಾದ ಬಸಪ್ಪ ತಂದೆ ಶಿದ್ದಪ್ಪ ರೇವಡ್ಯಾಳ 40 ವರ್ಷ ಸಾ..ತಾವರಗೇರಿ ಇವನು ದಿ..13-02-2018 ರಂದು ಮುಂಜಾನೆ 08-00 ಗಂಟೆಯಿಂದಾ ಸಂಜೆ 18-00 ಗಂಟೆಯ ನಡುವಿನ ಅವಧಿಯಲ್ಲಿ ವಾಸದ ಮನೆಯಿಂದಾ ಡ್ರೈವರ ಕೆಲಸಕ್ಕೆ ಹೋಗಿ ಬರುವದಾಗಿ ಹೇಳಿ ಹೋದವನು ಈವರೆಗೂ ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಅವನಿಗೆ ಪತ್ತೆ ಮಾಡಿಕೊಡಬೇಕು ಅಂತಾ ಪಿರ್ಯಾಧಿಯ  ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 163/2018 ಕಲಂ ಮನುಷ್ಯಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅದರಗುಂಚಿ ಗ್ರಾಮದ ಬಿಜವಾಡ ರವರ ಸೈಟ್ ಹತ್ತಿರ ಯಾರೋ ಆರೋಪಿತರು ಅಕ್ಷಯ ಶ್ರೀನಿವಾಸ ಕಾಟಿಗಾರ ಸಾ!! ಹುಬ್ಬಳ್ಳಿ ಇವರ ಹಿರೋ ಹೊಂಡಾ ಹಂಕ್ ಕಂಪನಿಯ ಮೋಟಾರ್ ಸೈಕಲ್ ನಂಬರ ಕೆಎ-30/ಕ್ಯೂ-5158 ನೇದ್ದು ಅ!!ಕಿ!! 30000/- ರೂ ಕಿಮ್ಮತ್ತಿನದ್ದನ್ನು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 174/2018 ಕಲಂ 379 ನೇದ್ದರಲ್ಲಿ ಪ್ರಕರಣವನ್ನುದಾಖಲಿಸಿದ್ದು ಇರುತ್ತದೆ.

6.  ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ: ವರೂರ ಗ್ರಾಮ, ಸೂರಶೆಟ್ಟಿಕೊಪ್ಪ ರಸ್ತೆಯ ಮೇಲೆ, ಪಾಲಿಕೊಪ್ಪ ಕ್ರಾಸ್ ಹತ್ತಿರ, ಆರೋಪಿ ಚಂದ್ರಶೇಖರ ವಿರುಪಾಕ್ಷಪ್ಪ ಮುದ್ಲಿಂಗಣ್ಣವರ ಸಾ. ಸೂರಶೆಟ್ಟಿಕೊಪ್ಪ ತಾ. ಕಲಘಟಗಿ ಇವನು ಮೋಟರ ಸೈಕಲ್ ನಂಬರ ಕೆಎ-47-ಜೆ-3938 ನೇದ್ದನ್ನು ವರೂರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ನಾಗನೂರ ಕಡೆಯಿಂದೆ ವರೂರ ಕಡೆಗೆ ಪಿರ್ಯಾದಿಯ ತಂದೆ ಬಸಪ್ಪ ಮಲ್ಲಪ್ಪ ಗುಡಿಹಾಳ ಸಾ. ನಾಗನೂರ ತಾ. ಕಲಘಟಗಿ ಇವನು ಚಾಲನೆ ಮಾಡಿಕೊಂಡು ಹೊರಟಿದ್ದ ಮೋಟರ ಸೈಕಲ್ ನಂಬರ ಕೆಎ-25-ಇ.ಎನ್-2972 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಬಸಪ್ಪ ಮಲ್ಲಪ್ಪ ಗುಡಿಹಾಳ ಇವನಿಗೆ ಬಲಗಾಲ ಹೆಬ್ಬೆರಳಿಗೆ, ಮೈಕೈಗೆ ತೀವ್ರ ಗಾಯಪಡಿಸಿದ್ದಲ್ಲದೇ, ಮೋಟರ ಸೈಕಲ್ ನಂಬರ ಕೆಎ-47-ಜೆ-3938 ನೇದ್ದರ ಹಿಂಬದಿ ಸವಾರ ಮಲ್ಲೇಶಪ್ಪ ಫಕ್ಕಿರಪ್ಪ ಛಬ್ಬಿ ಸಾ. ಸೂರಶೆಟ್ಟಿಕೊಪ್ಪ ತಾ. ಕಲಘಟಗಿ ಇವರಿಗೆ ತೀವ್ರ ಗಾಯಪಡಿಸಿ, ತಾನೂ ಕೂಡ ತೀವ್ರ ಗಾಯ ಹೊಂದಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 175/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

7. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಭರದ್ವಾಡ ಗ್ರಾಮದ ಮೃತನ ಮನೆಯಲ್ಲಿ ಇದರಲ್ಲಿಯ ಮೃತ ಇಮಾಮಸಾಬ ಶರೀಫಸಾಬ ನಲವಡಿ ವಯಾ: 32 ವರ್ಷ, ಸಾ : ಭರದ್ವಾಡ ತಾ : ಕುಂದಗೋಳ ಈತನು ತನ್ನ ಮದುವೆಯಾಗಿ ಒಂದೂವರೆ ವರ್ಷ ಆದರೂ ಮಕ್ಕಳು ಆಗದೇ ಇರುವುದಕ್ಕೆ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ಪಡಸಾಲೆಯಲ್ಲಿ ಮೇಲ್ಛಾವಣಿ ಜಂತಿಗೆ ಹಗ್ಗವನ್ನು ಕಟ್ಟಿ ತನ್ನ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಇದರ ಹೊರತಾಗಿ ಅವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಅಂತಾ ಮೃತನ ತಾಯಿ ವರದಿ ಫಿಯಾಱಧೀ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 28/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ .
8.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಳವಟಗಿ ಗ್ರಾಮದ  ಮೃತ ಕಸ್ತೂರಿವ್ವ ಕರಿಗಾರ ಮನೆಯ ಕಟ್ಟಿಯ ಮೇಲೆ ಕುಳಿತಾಗ ಆಕಸ್ಮಿಕವಾಗಿ ಕಟ್ಟಿಯ ಮೇಲಿಂದ ಬಿದ್ದು ತಲೆಗೆ ಬಾರಿ ಪೆಟ್ಟಾಗಿ ಅವಳನ್ನು ಉಪಚಾರಕ್ಕೆ ಅಂತಾ ಕಿಮ್ಸ ಆಸ್ಪತ್ರಗೆ ತಂದು ದಾಖಲು ಮಾಡಿದಾಗ ಉಪಚಾರ ಫಲಿಸದೇ ದಿನಾಂಕ:19-06-2018 ರಂದು ರಾತ್ರಿ 10-15 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ಸದರಿ ನನ್ನ ಮಗಳ ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ಇರುವದಿಲ್ಲಾ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 27/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರನವನ್ನು ದಾಖಲಿಸಿದ್ದು ಇರುತ್ತದೆ.