ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, June 23, 2018

CRIME INCIDENTS 23-06-2018

 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:23-06-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಧಾರವಾಡ ರಸ್ತೆ ಹಿರೇಹೊನ್ನಳ್ಳಿ ಗ್ರಾಮದ ಹತ್ತಿರ ರಸ್ತೆಯ ಹತ್ತಿರ ಆರೋಪಿತನಾದ ಯೋಗೇಶ ನಾಯಕ ಸಾ: ಕಲಘಟಗಿ ೀತನು ತನ್ನ ಮೊಟಾರ ಸೈಕಲ್ಲ ನಂ KA47/Q 5650 ನೇದ್ದನ್ನು ಧಾರವಾಡ ಕಡೆಯಿಂದ ಕಲಘಟಗಿ ಕಡೆಗೆ ಅತಿಜೋರು ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಪಿರ್ಯಾದಿದಾರನು ತನ್ನ ಮೊಟಾರ ಸೈಕಲ್ಲ ನಂ KA25/EX 9046 ನೇದ್ದರ ಮೇಲೆ ಬಸವರಾಜ ಹಂಪಣ್ಣವರ ಸಾ: ಕಮಲಾಪೂರ ಧಾರವಾಡ ಈತನಿಗೆ ಕೂಡ್ರಿಸಿಕೊಂಡು ಕಲಘಟಗಿ ಕಡೆಯಿಂದ ಧಾರವಾಡ ಕಡೆಗೆ ಹೊರಟವನಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಭಾರಿ ಪ್ರಮಾಣದ ಗಾಯಪಡಿಸಿ ಗಾಯಾಳು ಬಸವರಾಜ ಹಂಪಣ್ಣವರ ಸಾ: ಧಾರವಾಡ ಈತನು ಉಪಚಾರ ಪಲಿಸದೇ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಮರಣಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 168/2018 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಉಪ್ಪಿನಬೇಟಗೇರಿ ಗ್ರಾಮದ  ಮೃತ ಮಂಜುಳಾ ಕೊಂ ಜೈಲಾಪ ಅಷ್ಟಗಿ ವಯಾ 47 ವರ್ಷ ಸಾಃ ಉಪ್ಪಿನ ಬೆಟಗೇರಿ ಇವರು ದಿನಾಂಕ 23-06-2018 ರಂದು ಮುಂಜಾನೆ 11-45 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ ನೀರು ಏರಿಸುವ ಮೋಟಾರಸ ಪ್ಲಗ್ಅನ್ನು ತೆಗೆಯುವಾಗ ಅದರಿಂದಾ ಕರೆಂಟ ತಾಗಿ ತೀವ್ರ ಅಸ್ವಸ್ಥಳಾಗಿದ್ದು ಅವಳಿಗೆ ಉಪಚಾರೆಕ್ಕೆ ಅಂತಾ ಉಪ್ಪಿನ ಬೆಟಗೇರಿ ಆಸ್ಪತ್ರೆಯಲ್ಲಿ ಉಪಚರಿಸಿ ಹೇಚ್ಚಿನ ಉಪಚಾರಕ್ಕೆ ಅಂತಾ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯ ಜಿಲ್ಲಾ ಆಸ್ಪತ್ರೆಯ ಸಮೀಪ್ 12-55 ಗಂಟೆಗೆ ಮೃತಪಟ್ಟಿರುತ್ತಾಳೆ ವಿನಃ ಅವಳ ಮರಣದಲ್ಲಿ ಬೇರೆ ಏನು ಸಂಶಯ ಇರುವದಿಲ್ಲಾ ಅಂತಾ ಮೃತಳ ಗಂಡಾ  ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 20/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕನವನ್ನು ದಾಖಲಿಸಿದ್ದು ಇರುತ್ತದೆ.