ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, June 26, 2018

CRIME INCIDENTS


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:26-06-2018 ರಂದು ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕಮಡೊಳ್ಳಿ ಗ್ರಾಮದ ಬಸ್ಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ರಸ್ತೆ ಆರೋಪಿತನಾದ ದಾವಲಸಾಬ ರಾಯೇಸಾಬ ಶೇಖಮಾನವರ, ಸಾ : ಕಮಡೊಳ್ಳಿ, ತಾ : ಕುಂದಗೋಳ ಈತನು ಓಸಿ ಅಂಕಿ ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಓಸಿ ಆಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 590-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 106/2018 ಕಲಂ 78(3) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಕುಂದಗೋಳ ಶಹರದ ರೇಲ್ವೇ ಸ್ಟೇಷನ್ ಹತ್ತಿರ ಸಾರ್ವಜನಿಕ ರಸ್ತೆ ಬದಿಗೆ ಆರೋಪಿತನಾದ ಹನಮಂತಪ್ಪ ಫಕ್ಕೀರಪ್ಪ ದೊಡ್ಡಮನಿ ವಯಾ : 36 ವರ್ಷ, ಸಾ : ಅಂಬೇಡ್ಕರ ನಗರ, ಕುಂದಗೋಳ, ಈತನು ತನ್ನ ಲಾಭಕ್ಕೋಸ್ಕರ ಓಸಿ ಅಂಕಿ ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಚ್ಚಿಸಿಕೊಂಡು ಓಸಿ ಆಟ ಆಡುತ್ತಿದ್ದಾಗ ಅವನಿಂದ ರೂ 610-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 107/2018 ಕಲಂ 78(3) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ ಕ್ರಾಸ್ ಹತ್ತಿರ, ಸರ್ವಿಸ್ ರಸ್ತೆಯ ಪಕ್ಕದಲ್ಲಿ ಮೋಟರ ಸೈಕಲ್ ನಂಬರ ಕೆಎ-26-ಯು-3789 ಚಾಸ್ಸಿ ನಂಬರ MBLHA10ALEHC95648 ಇಂಜಿನ್ ನಂಬರ HA10EJEHC63838 ಅ.ಕಿ. 25000/- ರೂ. ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 181/2018 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.