ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, June 27, 2018

CRIME INCIDENTS 27-06-2018
 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-06-2018 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಮೋಟಾರು ಸೈಕಲ್ ನಂ.KA-25/EV-1059 ಇದೆ ಚೆಸ್ಸಿನಂ.MBLHA10BWFHJ73694 ಇಂಜಿನ ನಂ.HA10EWFHJ13054 ನೇದ್ದರ ಮೋಟಾರು ಸೈಕಲ್ಲನ್ನು ಇನಾಯತ ಇಮಾಮಹುಸೇನ ಕರ್ಣಾಚಿ ಈತನು ನವಲಗುಂದ ಸೆಂಟ್ರಿಗೆ ಕೆಲಸ ಇದೆ ಅಂತಾ ತೆಗೆದುಕೊಂಡು ಹೋಗಿದ್ದು 20-00 ಗಂಟೆಯ ಸುಮಾರಿಗೆ ನವಲಗುಂದದದ ಶಿಕ್ಷಕರ ಭವನದ ಮುಂದೆ ಮೋಟಾರು ಸೈಕಲ್ ನ್ನು ನಿಲ್ಲಿಸಿ ಊಟಕ್ಕೆ ಅಂತಾ ನವಲಗುಂದ ಮಾರ್ಕೆಟಿಗೆ ಹೋಗಿ ಬರುವಷ್ಟರಲ್ಲಿ ಯಾರೋ ಕಳ್ಳರು ಮೋಟಾರು ಸೈಕಲ್ಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 125/2018 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. ಅಪರಾಧ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಕಲಘಟಗಿ ರಸ್ತೆ ಕಣವಿಹೊನ್ನಾಪೂರ ಗ್ರಾಮದ ತಾರಿಹಾಳ ಕ್ರಾಸ ಅಶೋಕ ಲೈಲ್ಯಾಂಡ ಮಿನಿ ಗೂಡ್ಸ ವಾಹನ ನಂ KA-25-D-5042 ನೇದರ ಚಾಲಕನು ತನ್ನ ವಾಹನವನ್ನು ಕಲಘಟಗಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಒಮ್ಮೇಲೆ ತನ್ನ ರಾಂಗ ಸೈಡಿಗೆ ನಿಷ್ಕಾಳಜೀತನದಿಂದ ತಾರಿಹಾಳ ಕ್ರಾಸ ಕಡೆಗೆ ವಾಹನವನ್ನು  ತೆಗೆದುಕೊಂಡು ಧಾರವಾಡ ಕಡೆಯಿಂದ ಕಲಘಟಗಿ ಕಡೆಗೆ ರಸ್ತೆ ಎಡಸೈಡಿನಲ್ಲಿ ಹೋಗುತ್ತಿದ್ದ ಪಿರ್ಯಾದಿದಾರನ ಮೋಟರ್ ಸೈಕಲ್ ನಂ KA-25-EU-8015 ನೇದಕ್ಕೆ ತನ್ನ ವಾಹನದ ಎಡಭಾಗವನ್ನು ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಪಿರ್ಯಾದಿಗೆ ಹಾಗೂ ಮೋಟರ್ ಸೈಕಲ್ ನಂ KA-25-EU-8015 ನೇದರ ಚಾಲಕ ಗಂಗಾಧರ ಬಸವರಾಜ ಬಂಡಿವಡ್ಡರ ಇವನಿಗೆ ಸಾದಾ ವ ಬಾರೀ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 169/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರ ಧಾರವಾಡ ರಸ್ತೆಯ ಬದಿಯಲ್ಲಿರುವ ಕತ್ರಿದಡ್ಡಿ ಕ್ರಾಸ ಹತ್ತಿರ ಸರಕಾರಿ ಅರಣ್ಯ ಪ್ರದೇಶದಲ್ಲಿ  ಮೃತನಾದ ಪ್ರಭೂ ತಂದೆ ಕಾಡಪ್ಪ ುಪಾಸೆ ವಯಾ 27 ವರ್ಷ ಸಾ|| ಬಂಬಲವಾಡ ತಾ|| ಚಿಕ್ಕೋಡಿ ಜಿ|| ಬೆಳಗಾಂವ ಅವನು ತನ್ನ ಮನೆಯತನದ ವಿಷಯವಾಗಿ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸಗೊಂಡು ತನ್ನಷ್ಟಕ್ಕೆ ತಾನೆ ಯಾವುದೋ ವಿಷಕಾರಕ ಎಣ್ಣೀ ಸೇವಣೆ ಮಾಡಿ ಅದರ ಬಾದೆಯಿಂದ ಉಪಚಾರ ಕುರಿತು ದಾರವಾಡ ಜಿಲ್ಲಾ ಆಸ್ಪತ್ರೆಗೆ 108 ಅಂಬ್ಯುಲೆನ್ಸದಲ್ಲಿ ಹೋಗುವಾಗ ದಾರಿಯ ಮದ್ಯದಲ್ಲಿ ಮುಗದ ಕ್ರಾಸ ಹತ್ತಿರ ಸಾಯಂಕಾಲ 7-00 ಗಂಟೆಗೆ ಮರಣ ಹೊಂದಿದ್ದು ಇರುತ್ತದೆ ವಿನ: ಅವನ ಮರಣದಲ್ಲಿ ಬೇರೆ ಎನೂ ಸಂಶಯ ವಗೈರೆ ಇರುವದಿಲ್ಲಾ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಯುಡಿನಂ 08/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.