ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, July 20, 2018

CRIME INCIDENTS 20-07-2018



 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:20-07-2018 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ತಡಸ ರಸ್ತೆಯ ಮೇಲೆ ಗಂಜಿಗಟ್ಟಿ ಕ್ರಾಸ್ ಹತ್ತಿರ ಆರೋಪಿತನಾದ ಸುಹಾಸ ಹಡಪದ ಇತನು ತನ್ನ ಹತ್ತಿರ ಯಾವುದೆ ಪಾಸುವ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ  Original choice Deluxe whiskey 180   ML.    30 Tetra pockets ಅ..ಕಿ..1688/- ಕಿಮ್ಮತ್ತಿನೇದ್ದವುಗಳನ್ನು ಒಂದು ಚೀಲದಲ್ಲಿ ಇಟ್ಟುಕೊಂಡು ಮಾರಾಟ ಮಾಡುವ ಉದ್ದೆದಿಂದ ಸಾಗಾಟ ಮಾಡುತ್ತಿದ್ದಾಗ ಮಾಲ ಸಮೇತ ಸಿಕ್ಕಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 186/2018 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Thursday, July 19, 2018

CRIME INCIDENTS 19-07-2018



 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:19-07-2018 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಪಿ.ಬಿ ರಸ್ತೆ ಬದಿಯ ಕೋಟೂರ ಕ್ರಾಸ ಹತ್ತಿರ ಆರೋಪಿತನಾದಃ ಅಬ್ದುಲರಜಾಕ ತಂದೆ ದಾದಾಫೀರ ದೇವರಮನಿ. ಸಾಃ ಕೋಟೂರ. ತಾಃ ಧಾರವಾಡ ಇತನು ತನ್ನ ಫಾಯಿದೇಗೋಸ್ಕರ ಜನರಿಗೆ ಕಲ್ಯಾಣಿ ಮಾರ್ಕೆಟದ ಅಂಕಿ ಸಂಖ್ಯೆಗಳ ಆಧಾರದ ಮೇಲೆ 1 ರೂಪಾಯಿಗೆ 80 ರೂಪಾಯಿಗಳನ್ನು ಕೊಡುವದಾಗಿ ಹೇಳಿ ಓ.ಸಿ. ಎಂಬ ಜೂಜಾಟವನ್ನು ಆಡಿಸುತ್ತಾ ಓ. ಸಿ. ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುವಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 109/2018 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2 ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕಬ್ಬೆನೂರ ಗ್ರಾಮದ ಆರೋಪಿತನಾದ ಸಂಗಣ್ಣಗೌಡ್ರ  ಇವನು ಬಸ್ಡಾಂಡ ಸಾರ್ವಜನಿಕ ರಸ್ತಯೆ ಮೇಲೆ ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಮತ್ತು ಹೆಂಗಸರೂಂದಿಗೆ ಅಸಭ್ಯವಾಗಿ ವರ್ತಿಸುತ್ತಾ ನಿಂತಿದ್ದು ಸದರಿಯವನಿಗೆ ಅಲ್ಲಿಯೇ ಬಿಟ್ಟರೆ ಯಾವುದಾದರು ಸಂಜ್ಞೆಯ ಅಪರಾದ ಎಸಗುವ ,ಹಾಗೂ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವ  ಸಾರ್ವಜನಿಕ ಆಸ್ತೀ ಪಾಸ್ತೀಗೆ ಹಾಣಿಯನ್ನುಂಟು ಮಾಡುವ ಸಂಭವ ಇರುವದರಿಂದ ಸದರಿಯವನ ಮೇಲೆ ಗುನ್ನಾನಂ 186/2018 ಕಲಂ 110(ಇ) (ಜಿ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಗರಗ ಮೃತ ವಿಕ್ರಮ.ತಂದೆ ಇಮಾಮ.ಗುಡಿಮನಿ.ವಯಾ-21 ವರ್ಷ.ಸಾಃಲಕ್ಷ್ಮಿಸಿಂಗನಕೇರಿ ಧಾರವಾಡ ಇತನು ಈ ಬೆಲೂರ ಕೈಗಾರಿಕಾ ಪ್ರದೇಶದಲ್ಲಿರುವ ಕೂಲಿಕೆಲಸಕ್ಕೆ ಅಂತಾ ಹೋದಾಗ ಹುಲಕುಂದ ಇವರ ಗುಡೌನದಲ್ಲಿ ಕಬ್ಬಿಣದ ಎಂಗ್ಲರ ಪಟ್ಟಿಗಳನ್ನು ಎತ್ತಿ ಮೇಲೆ ಇಡುತ್ತಿದ್ದಾಗ ಆಕಸ್ಮಾತವಾಗಿ ಕಬ್ಬಿಣದ ಎಂಗ್ಲರ ಗುಡೌನದ ಹತ್ತಿರ ಹಾಯ್ದು ಹೋದ ಕೆ.ಇ.ಬಿ.ವಿದ್ಯುತ್ತ ಲೈನಿಗೆ ತಾಗಿ ವಿದ್ಯುತ್ತಸ್ಪರ್ಷದಿಂದ ಮೃತ ಪಟ್ಟಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 22/2018 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, July 18, 2018

CRIME INCIDENTS 18-07-2018



 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-07-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಗಿರಿಯಾಲ ಗ್ರಾಮದ ಪಿರ್ಯಾದಿ ಮನೆಯ ಮುಂದೆ ಆರೋಪಿತರೆಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆ, ಚಪ್ಪಲಿ ಹಿಡಿದುಕೊಂಡು ಬಂದು ಸಾಕ್ಷಿದಾರ ರಾಮು ಹನಮಂತಪ್ಪ ಹಾನಗಲ್ ಸಾ. ಗಂಗಾಧರ ಇವರೊಂದಿಗೆ ಹಣದ ವ್ಯವಹಾರದ ಸಲುವಾಗಿ ಅವರಿಗೆ ಹೊಡೆಯುವ ಕಾಲಕ್ಕೆ ಬಿಡಿಸಲು ಹೋದ ಪಿರ್ಯಾದಿ ಶ್ರೀಮತಿ ಮಂಜುಳಾ ಕೋಂ ಗೂಳೇಶ ವಾಲ್ಮೀಕಿ ಸಾ. ಗಿರಿಯಾಲ ಇವರಿಗೆ ಅವಾಚ್ಯ ಶಬ್ದಗಳಿಂದ ಜಾತಿ ಎತ್ತಿ ಬೈಯ್ದಾಡಿ ಜಾತಿ ನಿಂದನೆ ಮಾಡಿ ದೌರ್ಜನ್ಯವೆಸಗಿ ಕೈಯಿಂದ, ಬಡಿಗೆಗಳಿಂದ ಹೊಡೆದು ಗಾಯಪಡಿಸಿ ಚಪ್ಪಲಿಯಿಂದ ಹೊಡೆದು ಅವಮಾನಪಡಿಸಿ ಜೀವದ ಬೆದರಿಎ ಹಾಕಿ, ಜಾತಿ ನಿಂದನೆ ಮಾಡಿ ದೌರ್ಜನ್ಯವೆಸಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 196/2018 ಕಲಂ SC AND THE ST  (PREVENTION OF ATTROCITIES) ACT, 1989 (U/s-3(1)(r),3(1)(s)); IPC 1860 (U/s-355,143,506,504,148,147,149,323,324)

2.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 66/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

Tuesday, July 17, 2018

CRIME INCIDENTS 17-07-2018



 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:17-07-2018 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಕೋಟೂರ ಗ್ರಾಮದ ಉಡಚಮ್ಮನ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕುಳಿತುಕೊಂಡು  ಆರೋಪಿತನಾದ ಈಮಾಮ ರಾಜೇಸಾಬ 2.ಮೌನೇಶ ಬಡಗೇರ  ಇವರು ತನ್ನ ಪಾಯ್ದೆಗೋಸ್ಕರ ಓ ಸಿ ಅಂಬುವ ಜೂಜಾಟವನು ಆಡಿಸುತ್ತಾ ಅಂಕಿ ಸಂಖೆಗಳನ್ನು ಬರೆದುಕೊಡುವಾಗ ಸಿಕ್ಕಿದ್ದು ಅವರಿಂದ ರೂ 430—00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 107/2018 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಬೋಗನೂರ ಗ್ರಾಮದ ಮೃತ ರೇಶ್ಮಾ ಕೋಂ ಬಸವರಾಜ ಕುಲಕರ್ಣಿ ಈತಳು ಕೆಲವು ದಿನಗಳಿಂದ ತನ್ನ ಮೈದುನ ವೀರಪ್ಪ ಕುಲಕರ್ಣಿ ಈತನೊಂದಿಗೆ ಬಹಳ ಸಲುಗೆಯಿಂದ ಇದ್ದಳು.  ಅದಕ್ಕೆ ನನ್ನ ಮಗಳ ಗಂಡ ಸಂಶಯ ಮಾಡುತ್ತಿದ್ದನು ಈ ವಿಷಯ ಸಲುವಾಗಿ ನಾನು ಮತ್ತು ನನ್ನ ಮನೆಯ ಜನರು ನನ್ನ ಮಗಳಿಗೆ ಬುದ್ದಿವಾದ ಹೇಳಿದ್ದೇವು. ಇದನ್ನೆ ನನ್ನ ಮಗಳು ಮನಸ್ಸಿಗೆ ಹಚ್ಚಿಕೊಂಡು ನಿನ್ನೆ ದಿವಸ ದಿನಾಂಕ: 16/07/2018 ರಂದು ತನ್ನ ಗಂಡನ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ತನ್ನಷ್ಟಕ್ಕೆ ತಾನೇ ಉರುಲು ಹಾಕಿಕೊಂಡಿದ್ದು ಇರುತ್ತದೆ.  ಆದರೂ ಕೂಡ ನನ್ನ ಮಗಳು ಯಾವ ಕಾರಣಕ್ಕೆ ಉರುಲು ಹಾಕಿಕೊಂಡಿದ್ದಾಳೆ ಅನ್ನುವುದು ತಿಳಿಯುತ್ತಿಲ್ಲ ಅದಕ್ಕಾಗಿ ಮರಣೋತ್ತರ ಪರೀಕ್ಷೇಯಿಂದ ತಿಳಿಯಬೇಕು ಅಂತಾ ವರದಿಗಾರನು  ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 30/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

Saturday, July 14, 2018

CRIME INCIDENTS 14-07-2018



 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:14-07-2018 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ ಠಾಣಾ ವ್ಯಾಪ್ತಿಯ: ಬಸಾಪುರ ಗ್ರಾಮದ ಹತ್ತಿರ ಆರೋಪಿಗಳಾದ 1.ಹನಮಂತಪ್ಪಾ ಹಳ್ಳಿ 2.ಸಿದ್ದಪ್ಪಾ ಕಂಬಳಿ ಹಾಗೂ ಇನ್ನೂ 03 ಜನರು ಕೊಡಿದಕೊಂಡು  ಹೊಸ ಪ್ಲಾಟಿನ ಖುಲ್ಲಾ ಜಾಗೆಯಲ್ಲಿ ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ್ ಅಂಬುವ ಇಸ್ಪೀಟ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 1020-00 ಗಳನ್ನು ವಶಪಡಿಸಿಕೊಂಡು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 76/2018 ಕಲಂ 87  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
 
2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಜಾವುರ  ಗ್ರಾಮದ  ಹತ್ತಿರ ಜಮೀನು ರಿ.ಸಂ.ನಂ.131/1 ಕ್ಷೇತ್ರ, 12 ಎಕರೆ 30 ಗುಂಟೆ ಜಮೀನದಲ್ಲಿ ತನ್ನ ಪಾಲಿನ ಜಮೀನದಲ್ಲಿ ಉಳಿಮೆ ಮಾಡುತ್ತಿರುವಾಗ ಕೃಪ್ಣ ರೇಡ್ಡಿ ಇನತು ಕೆಲವು ಪುಂಡು ಜನರನ್ನು ಕರೆದುಕೊಂಡು ಬಂದು ಫಿರ್ಯಾದಿದಾರನ ಉಳಿಮೆಗೆ ಹರಕತ್ ಮಾಡಿ ಜಮೀನುಗಳ ಮಧ್ಯ ಇರುವ ಹದ್ದಿನ ಒಡ್ಡನ್ನು ಕಿತ್ತು ಹಾಕಿ ಅಪಾರವಾದ 20,000=00 ರೂ.ಗಳನ್ನು ಲುಕ್ಸಾನ ಮಾಡಿದ್ದು ಅಲಲ್ದೆ ಆರೋಪಿತನು ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ ಹೊಡಿ ಬಡಿ ಮಾಡಿ ಕಾಲಿನಿಂದ ಒದ್ದು ಫಿರ್ಯಾದಿಗೆ ನಿನ್ನನ್ನು ಜೀವಂತ ಬಿಡುವುದಿಲ್ಲ ಅಂತಾ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 135/2018 ಕಲಂ 447.427.323.504.506.34. ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದ ಇರುತ್ತದೆ.