ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, July 1, 2018

CRIME INCIDENTS 01-07-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:01-07-2018 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಹುಬ್ಬಳ್ಳಿ ರಸ್ತೆ ಉಗ್ನಿಕೇರಿ ಕ್ರಾಸ್ ಸಮಿಫ ರಸ್ತೆ ಆರೋಪಿ ಸಂತೋಷಸಿಂಗ್ ತಂದೆ ಲಕ್ಷ್ಮಣಸಿಂಗ್ ಠಾಕೂರ ವಯಾ 32 ವಷ್ ಸಾ: ಹುಬ್ಬಳ್ಳಿ ಈತನು  ತಾನು ನಡೆಸುತ್ತಿದ್ದ ಮೊಟಾರ ಸೈಕಲ್ಲ ನಂ KA63/E 2076 ನೇದ್ದನ್ನು ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿಜೋರು ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ ರಸ್ತೆ ಬದಿಯ ಹುಣಸಿಮರಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿಕೊಂಡು ತಾನೇ ಬಲವಾದಗಾಯಗೊಂಡು ಸ್ಥಳದಲ್ಲಿಯೇ ಮರಣಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 175/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಶಿರಗುಪ್ಪಿ ಗ್ರಾಮದ, ಪಂಡಿತ ನೆಹರೂ ಪ್ರೌಢ ಶಾಲೆಯ ಹತ್ತಿರ, ಸಾರ್ವಜನಿಕ ಸ್ಥಳದಲ್ಲಿ, ಆರೋಪಿ ರಿಯಾಜ ಮೀರಾಸಾಬ ಕೋಲಕಾರ ಸಾ. ಶಿರಗುಪ್ಪಿ ತಾ. ಹುಬ್ಬಳ್ಳಿ ಇವನು ತನ್ನ ಫಾಯ್ದೆಗೋಸ್ಕರ ಯಾವುದೇ ಪಾಸ ವ ಪರ್ಮಿಟ್ ಇಲ್ಲದೇ, ಒಟ್ಟು 84 ಹೈವರ್ಡ್ಸ ವಿಸ್ಕಿ 90 ಎಂ. ಎಲ್. ಟೆಟ್ರಾ ಪೌಚಗಳು ಅ.ಕಿ. 2352/- ರೂ. ನೇದ್ದವುಗಳನ್ನು ಮಾರಾಟ ಮಾಡುತ್ತಿದ್ದಾಗ, ಮಾಲ ಸಹಿತ ಸಿಕ್ಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 184/2018 ಕಲಂ 34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.