ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, July 2, 2018

CRIME INCIDENTS 02-07-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:02-07-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಬ್ಯಾಹಟ್ಟಿ ಗ್ರಾಮದ ಮಂಗಳಾ ಸೋಗಿ ಇವರ ಮನೆಯ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ಶೇಕರಗೌಡ ನಿಂಗನಗೌಡ ಹಿರೇಗೌಡ್ರ 2) ಸುಮಂಗಲಾ ಕೊಂ ಶೇಖರಗೌಡ ಹಿರೇಗೌಡ್ರ 3) ಪ್ರದೀಪಗೌಡ ಶೇಖರಗೌಡ ಹಿರೇಗೌಡ್ರ ಎಲ್ಲರೂ ಸಾ!! ಬ್ಯಾಹಟ್ಟಿ ಇವರುಗಳು ಪಿರ್ಯಾಧಿ ಖುಲ್ಲಾ ಜಾಗೆಯಲ್ಲಿ ಅತೀಕ್ರಮಣ ಪ್ರವೇಶ ಮಾಡಿ ಮನೆಯ ಕಂಪೌಂಡ ಗೋಡೆ, ಮನೆಯ ಮುಂದಿನ ಬಾಗಿಲು, ದುರಸ್ಥಿ ಮಾಡಿಸಿದ ಗೋಡೆಯನ್ನು ಕೆಡವಿ ಲೂಕ್ಷಾಣಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 186/2018 ಕಲಂ 427.34.447 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಗುಡಗೇರಿ ಗ್ರಾಮದ ಮೃತ ತನ್ನ ಗಂಡಃ ಫಕ್ಕೀರಪ್ಪ ಬೋಜಪ್ಪ ಲಮಾಣಿ, ವಯಾಃ 45  ಇವರು ದಿನಾಂಕಃ 01-07-2018 ರಂದು ಬೆಳಿಗ್ಗೆ 09-00 ಗಂಟೆಯಿಂದ ದಿನಾಂಕಃ 02-07-2018 ರಂದು ಬೆಳಿಗ್ಗೆ 06-00 ಗಂಟೆ ನಡುವಿನ ಅವಧಿಯಲ್ಲಿ ಗುಡಗೇರಿಗೆ ಹೋಗಿ ದವಾಖಾನೆಗೆ ತೋರಿಸಿಕೊಂಡು ಬರುತ್ತೇನೆ ಅಂತಾ ಬಂದವರು ಗುಡಗೇರಿಯ ರವಿ ಬೆಟದೂರ ಇವರ ದನ ಕಟ್ಟುವ ಮನೆಯ ಮುಂದೆ ಮೈಯಲ್ಲಿ ಹುಸ್ಯಾರ ಇಲ್ಲದ್ದರಿಂದ ಹೊಟ್ಟೆಗೆ ಸರಿಯಾಗಿ 2-3 ದಿನಗಳಿಂದ ಊಟವನ್ನು ಮಾಡದ್ದರಿಂದ ಹಮೇಶ್ಯಾ ಕುಡಿಯುವ ಚಟವನ್ನು ಹೊಂದಿದ್ದರಿಂದ ಅವರು ಮೋರ್ಚ ಹೋಗಿ ಬಿದ್ದು ಮರಣ ಹೊಂದಿರಬಹುದು ಇದರಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವುದಿಲ್ಲ ಅಂತಾ ವಗೈರೆ ಫಿಯಾಱಧೀ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 08/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಗುಡಗೇರಿ ಗ್ರಾಮದ ಮೃತ ಸುರೇಶ ಸುಭಾರಗಟ್ಟಿ ಇವನು ತನ್ನ ಅಣ್ಣನು ಅಲ್ಲಲ್ಲಿ ಕೈಗಡ ಅಂತಾ ಸುಮಾರು 5 ಲಕ್ಸ ರೂಪಾಯಿ ಸಾಲ ಮಾಡಿದ್ದು ಅದನ್ನು ತೀರಿಸಲು ಅಂತಾ 4 ಲಕ್ಷ 50 ಸಾವಿರಕ್ಕೆ ತನ್ನ ಹೊಲವನ್ನು ಬಡ್ಡಿ ತರೀಖ ಕೊಟ್ಟಿದ್ದು ಅದನ್ನು ಹೇಗೆ ಬಿಡಿಸಿಕೊಳ್ಳಬೇಕು ಅಂತಾ ಮಾನಸಿಕ ಮಾಡಿಕೊಂಡು ದಿನಾಂಕಃ 30-06-2018 ರಂದು ಸಂಜೆ 7-00 ಗಂಟೆ ಸುಮಾರಿಗೆ ತನ್ನ ಹೊಲದಲ್ಲಿ ವಿಷ ಸೇವನೆ ಮಾಡಿದ್ದು ಉಪಚಾರಕ್ಕೆ ಅಂತಾ ಕಿಮ್ಸ್ ಹುಬ್ಬಳ್ಳಿಯಲ್ಲಿ ದಾಖಲಿಸಿದಾಗ ಉಪಚಾರ ಫಲಿಸದೇ ಈ ದಿವಸ ದಿನಾಂಕಃ 02-07-2018 ರಂದು ಬೆಳಗಿನ ಜಾವ 02-20 ಗಂಟೆ ಸುಮಾರಿಗೆ ಮೃತ ಪಟ್ಟಿದ್ದು ಅದೆ ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ವಗೈರೆ ಫಿಯಾಱಧೀ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 09/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣ ವ್ಯಾಪ್ತಿಯ:ಮುಕ್ಕಾಳ ಗ್ರಾಮದ  ಮೃತಳಾದ ಶಾಂತವ್ವ ಮುದ್ದಣಗೌಡ್ರ ಮುಂಜಾನೆ ನೀರೆತ್ತುವ ಮಷಿನದಿಂದ ಮನೆಯ ಮುಂದಿನ ನಳದಿಂದ ನೀರು ತುಂಬಿದ ನಂತರ 07.30 ಗಂಟೆ ಸುಮಾರಿಗೆ ಕರೆಂಟ್ ಬಟನ್ ಬಂದ್ ಮಾಡದೇ ಮಷಿನಿನ ಸ್ವಿಚ್ ತೆಗೆಯುವಾಗ ಅಕಸ್ಮಾತಾಗಿ ಅವಳಿಗೆ ಕರೆಂಟ್ ಶಾಕ್ ಹೊಡೆದು ಬಿದ್ದವಳಿಗೆ ಉಪಚಾರಕ್ಕೆ ಅಂತಾ 108 ಅಂಬುಲೆನ್ಸದಲ್ಲಿ ತರುವಾಗ ದಾರಿಯಲ್ಲಿ ಮುಂಜಾನೆ 08.00 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಅವಳ ಸಾವಿನಲ್ಲಿ ಬೇರೆ ಯಾವ ಮತ್ತು ಯಾರ ಮೇಲೆಯೂ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತಳ ಗಂಡ ಇರುವುದಿಲ್ಲಾ ಅಂತಾ ವಗೈರೆ ಫಿಯಾಱಧೀ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 38/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.