ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, July 3, 2018

CRIME INCIDENTS 03-07-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:03-07-2018 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಹಳಿಯಾಳ ದಾರವಾಡ ರಸ್ತೆಯ ನಿಗದಿ ಗ್ರಾಮದ ಸಮೀಪ ಕೆ.ಇ.ಬಿ ಗ್ರಿಡ್ ಹತ್ತಿರ ರಸ್ತೆಯ ಮೇಲೆ ಮೋಟರ ಸೈಕಲ್ಲ ನಂಬರ ಕೆ.ಎ 25/ವ್ಹಿ- 6300 ನೇದ್ದರ ಚಾಲಕನಾದ ಸುರೇಶ ತಂದೆ ಶಿದ್ದರಾಮ ತಂಬೂರ ಸಾ|| ಶಿವಪುರ ತಾ|| ಹಳಿಯಾಳ ಅವನು ತಾನು ನಡೆಯಿಸುತ್ತಿದ್ದ ಮೋಟರ ಸೈಕಲ್ಲನ್ನು ದಾರವಾಡ ಕಡೆಯಿಂದ ಹಳಿಯಾಳ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಎದುರಿನಿಂದ ಹಳಿಯಾಳ ಕಡೆಯಿಂದ ದಾರವಾಡ ಕಡೆಗೆ ಹೊರಟ ಸರಕಾರಿ ಬುಲೇರೋ (ಜೀಪ) ನಂ ಕೆ.ಎ 31/ಜಿ-176 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತಾನು ಭಾರಿ ದುಖಾಪತ್ತ ಹೊಂದಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 70/2018 ಕಲಂ 279.338. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪುನಾ ಬೆಂಗಳೂರ ರಸ್ತೆ ಮೇಲೆ ಪಾಲಿಕೊಪ್ಪ ಕ್ರಾಸ್ ಸಮೀಪ ವಿ.ಆರ್.ಎಲ್ ಕಂಪನಿ ಬಸ್ ನಂಬರ ಕೆಎ-25/ಸಿ-8857 ನೇದ್ದನ್ನು ಅದರ ಚಾಲಕನಾದ ಚಂದ್ರಶೇಖರ ಬರಮಪ್ಪ ಮಡಿವಾಳರ ಸಾ!! ಅಕ್ಕಿಆಲೂರ ತಾ!! ಹಾನಗಲ್ ಇತನು ಬಸ್ಸನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬಹಳ ಜೋರಿನಿಂದ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಗಾಡಿ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲಸೈಡ್ ಬಲಹೋಳು ಮಗ್ಗಲಾಗಿ ಕೆಡವಿ ಅಪಘಾತಪಡಿಸಿ ಬಸ್ಸಿನಲ್ಲಿದ್ದ ಪ್ರಯಾಣಿಕರಾದ ಲಾಬಸಂಗ ಡೋಲ್ಮಾ ತಂದೆ ತಾಶಿ ವಯಾ 31 ವರ್ಷ ಸಾ!! ಕ್ಯಾಂಪ್ ನಂ. 4 ಮುಂಡಗೋಡ ಕಾಲೋನಿ ಇವರಿಗೆ ಭಾರಿ ಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿದ್ದಲ್ಲದೇ, ಪಿರ್ಯಾಧಿಗೆ ಹಾಗೂ ಇನ್ನೂಳಿದ ಪ್ರಯಾಣಿಕರಾದ ಶ್ರೀಮತಿ ಗಂಗಾ ಕೊಂ ಶಿವಾನಂದ ಎಂಟ್ರೂವಿ ಸಾ!! ಹುಬ್ಬಳ್ಳಿ, ಶಿವಾನಂದ ಬಸಪ್ಪ ಎಂಟ್ರೂವಿ ಸಾ!! ಹುಬ್ಬಳ್ಳಿ ಹಾಗೂ ಬಸ್ಸಿನ ಇನ್ನೊಬ್ಬ ಚಾಲಕ ಬಾಬು ಲಕ್ಷ್ಮಣ ಪಾತ್ರೋಟಿ ಸಾ!! ಹೊಸೂರ ಹುಬ್ಬಳ್ಳಿ ಇವರಿಗೆ ಸಾಧಾ ವ ಭಾರಿ ಗಾಯಪಡಿಸಿದ್ದಲ್ಲದೇ, ತಾನೂ ಸಹಾ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು  ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 187/2018 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕೊಟಗುಣಿಸಿ ಗ್ರಾಮದ ಹತ್ತಿರ ಲಾರಿ ನಂ ಕೆಎ-22/ಎ-7005 ನೇದ್ದರ ಚಾಲಕ ತನ್ನ ವಾಹನವನ್ನು ಸಿಮೆಂಟ್ ಗೋಡಾನ್ ಕಡೆಯಿಂದ ಅತೀ ಜೋರಿನಿಂದ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಯಾವುದೇ ಸಿಗ್ನಲ್ ವಗೈರೆ ತೋರಿಸದೆ ಬರುವ ಹೋಗುವ ವಾಹನಗಳನ್ನು ಗಮನಿಸದೆ ಒಮ್ಮಿಲೇ ರಾಷ್ಟ್ರಿಯ ಹೆದ್ದಾರಿಗೆ ಬಂದು ಬೆಂಗಳೂರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಪಿರ್ಯಾದಿಯ ಲಾರಿ ನಂ ಟಿಎನ್-88/ಬಿ-4659 ನೇದ್ದಕ್ಕೆ ಅಪಘಾತ ಪಡಿಸಿ ತನಗೆ ಸಾದಾ ಗಾಯ ಪಡಿಸಿಕೊಂಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 188/2018 ಕಲಂ 279.337. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.