ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, July 4, 2018

CRIME INCIDENTS 04-07-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:04-07-2018 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ತಾಲೂಕಿನ ಯಲವದಾಳ ಗ್ರಾಮ ಆರೋಪಿತಾನದ  ವಿರಭದ್ರಪ್ಪಾ ನಿಗದಿ ಇತನು ಸುಮಾರು ವರ್ಷಗಳಿಂದ ಸರಾಯಿ ಕುಡಿಯುವ ಚಟಕ್ಕೆ ಬಿದ್ದು ಹಣ ಕೊಡು ಅಂತಾ ಪಿರ್ಯಾದಿದಾರಳಿಗೆ ಸುಮಾರು ವರ್ಷಗಳಿಂದ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿದ್ದಲ್ಲದೇ ತನ್ನ ತಾಯಿ ಶಂಕ್ರವ್ವ ಕೊಂ ಚನ್ನಪ್ಪ ನಿಗದಿ ವಯಾ 70 ವರ್ಷ ಸಾ: ಯಲವದಾಳ ಇವಳಿಗೆ ಸರಾಯಿ ಕುಡಿಯಲು ಹಣಕೊಡು ಅಂತಾ ತಂಟೆಗೆ ಮನೆಯಿಂದ ಹೊರಗೆ ನಡೀರಿ ಅಂತಾ ಜಗಳ ಮಾಡುತ್ತಾ ಅವಳಿಗೆ ಕೊಲೆ ಮಾಡುವ ಉದ್ದೇಶದಿಂದ ಕಲ್ಲಿನಿಂದ ಅವಳ ತಲೆಗೆ ಎದೆಗೆ ಹಾಗೂ ಕಿವಿಗಳಿಗೆ ಹೊಡೆದು ಗಾಯಗೊಳಿಸಿದಾಗ ಬಿಡಸಲು ಹೋದ ಪಿರ್ಯಾದಿದಾರಳಿಗೂ ತಲೆಗೆ ಹೊಡೆದು ಗಾಯಗೊಳಿಸಿದ್ದಲ್ಲದೇ ಗಾಯಗೊಂಡ ಶಂಕ್ರವ್ವ ಕೋಂ ಚನ್ನಪ್ಪ ನಿಗದಿ ಇವರು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಪಚಾರಕ್ಕೆ ದಾಖಲಿಸಿದಾಗ ಉಪಚಾರ ಪಲಿಸದೇ ಇಂದು ದಿ:04-07-2018 ರಂದು ಮದ್ಯಾಹ್ನ 01-30 ಗಂಟೆಗೆ ಮರಣಹೊಂದುವಂತೆ ಮಾಡಿ ಕೊಲೆಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 177/2018 ಕಲಂ 324.302.498(ಎ) ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 174/2018.175/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.