ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, July 7, 2018

CRIME INCIDENTS 07-07-2018ಧಾರವಾಡ ಜಿಲ್ಲೆಯಲ್ಲಿ ದಿನಾಂಕ:07-07-2018 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸುತ್ತಿದ್ದ ಲಾರಿ ನಂಬರ ಕೆಎ-25/ಸಿ-6824 ನೇದ್ದನ್ನು ನಡೆಸಿಕೊಂಡು ಲಾರಿಯನ್ನು ನಿಲ್ಲಿಸುವ ಬಗ್ಗೆ ಯಾವುದೇ ಸಿಗ್ನಲ್ ವಗೈರೆ ನೀಡದೇ ಒಮ್ಮಿಂದೊಮ್ಮಲೇ ಬ್ರೆಕ ಹಾಕಿದ್ದರಿಂದ  ಮಹೀಂದ್ರಾ ಬೊಲೆರೋ ಜೀಪ ನಂಬರ ಕೆಎ--26/ಜಿ-0370 ನೇದ್ದನ್ನು ಸಹಿತ ಲಾರಿಯ ಹಿಂದುಗಡೆ ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಜೀಪಿನ ಮತ್ತು ಲಾರಿಯ ಮದ್ಯದಲ್ಲಿ ಅಂತರವನ್ನು ಕಾಯ್ದುಕೊಳ್ಳದೇ ಲಾರಿಯ ಹಿಂದಿನ ಕಬ್ಬಿಣದ ಲೋಡಗೆ ಡಿಕ್ಕಿ ಮಾಡಿ ತನಗೆ ಮತ್ತು ತನ್ನ ಜೀಪಿನಲ್ಲಿದ್ದ ಪಿರ್ಯಾದಿಗೆ ಸಾಧಾ ವ ಭಾರಿ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು   ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 73/2018 ಕಲಂ 279.337.338.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ ಠಾಣೆ ವ್ಯಾಪ್ತಿಯ: ಬೆಳಗಾವಿ-ಧಾರವಾಡ ಪಿ.ಬಿ ರಸ್ತೆಯ ಮೇಲೆ ಗುಳೇದಕೊಪ್ಪ ಗ್ರಾಮದ ಹತ್ತಿರ ಕಾರ ನಂಬರಃ ಕೆಎಃ22-ಜಡ್-7441 ನೇದ್ದರ ಚಾಲಕನು ತನ್ನ ಕಾರನ್ನು ಬೆಳಗಾವಿ ಕಡೆಯಿಂದಾ ಧಾರವಾಡ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಗುಳೇದಕೊಪ್ಪ ಗ್ರಾಮದ ಹತ್ತಿರ ಕಾರನ್ನು ರಸ್ತೆ ವಿಭಜಕ ಕಟ್ಟೆಗೆ ಢಿಕ್ಕಿ ಮಾಡಿ ಸರ್ವಿಸ ರಸ್ತೆಯ ಮೇಲೆ ಹೊರಟ ಮೋಟಾರ ಸೈಕಲ ನಂಬರಃ ಕೆಎಃ25/ಎಕ್ಸ/2073 ನೇದ್ದಕ್ಕೂ ಸಹಾ ಢಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ ಸೈಕಲ ಮೇಲಿದ್ದ ಇಬ್ಬರಿಗೆ ಸಾದಾ ವ ಭಾರಿ ಸ್ವರೂಪದ ಗಾಯಪಡಿಸಿದ್ದಲ್ಲದೆ ತಾನು ಸಹಾ ಸಾದಾ ಗಾಯಪಡಿಸಿಕೊಂಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 99/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಬಸವೇಶ್ವರ ನಗರ ಗ್ರಾಮದ  ಬಿಬಿಜಾನ ಕೋಂ ಅಲ್ಲಾಸಾಬ ಶೆಲವಡಿ ವಯಾ: 30 ವರ್ಷ ಸಾ:ಬಸವೇಶ್ವರ ನಗರ, ನವಲಗುಂದ ಈತಳು ಇತ್ತಿತ್ತಲಾಗಿ ಮಾನಸಿಕ ಆದವಳು ಅಂತೆ ಆಗಿದ್ದು ಸಣ್ಣ ಪುಟ್ಟ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಹುಚ್ಚರಂತೆ ಮಾಡುತ್ತಿದ್ದಳು. ಆಕೆಯ ಗಂಡನು ನನಗೆ ಊಟ ಮಾಡಲಿಲ್ಲ ಅನ್ನುವ ಸಲುವಾಗಿ ಮನಸ್ಸಿಗೆ ಸಂಶಯ ಮಾಡಿಕೊಂಡು ಮನಸ್ಸಿಗೆ ಹಚ್ಚಿಕೊಂಡು ಗಂಡನು ಮಲಗಿದಾಗ ಉನ್ನಿಗೆ ಹೊಡೆಯುವ ಎಣ್ಣೆ ಸೇವನೆ ಮಾಡಿ ಉಪಚಾರಕ್ಕೆ ನವಲಗುಂದ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಉಪಚಾರಕ್ಕೆ ಕಿಮ್ಸ ಆಸ್ಪತ್ರೆ, ಹುಬ್ಬಳ್ಳಿಗೆ ದಾಖಲ ಮಾಡಿಕೊಂಡಿದ್ದು ಉಪಚಾರ ಹೊಂದುತ್ತಿರುವಾಗ ಈ ದಿವಸ ದಿನಾಂಕ 07-07-2018 ರಂದು ಬೆಳಿಗ್ಗೆ 06-30 ಗಂಟೆಗೆ ಮೃತಪಟ್ಟಿರುತ್ತಾಳೆ ಪೋತಿಯ ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವುದಿಲ್ಲ ಅಂತಾ ಮೃತ  ಅಣ್ಣನು ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 28/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ