ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, July 8, 2018

CRIME INCIDENTS 08-07-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:08-07-2018 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಪಿ.ಬಿ.ರೋಡಿನ ಮೇಲೆ ಕೊಟೂರ ಕ್ರಾಸ ಹತ್ತೀರ ಇರುವ ಕೇರೆಮುಲ್ಲಾ ದಾಬಾದ ಎದುರಿಗೆ ಕಾರ ನಂ.ಕೆ.ಎ.25/ಎಮ.ಬಿ/9425 ನೇದ್ದರ ಚಾಲಕನಾದ ಹರೀಶ.ಭೀಮಪ್ಪ.ಕರಬಸಿ.ಸಾಃಧಾರವಾಡ ಇತನು ತೆಗೂರ ಕ್ರಾಸ್ ಕಡೆಯಿಂದ ದಾರವಾಡ ಕಡೆಗೆ ಅತೀಜೋರಿನಿಂದ ವ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತನ್ನ ಕಾರಿನ ನಿಯಂತ್ರಣವನ್ನುಕಳೆದುಕೊಂಡು ಹೆದ್ದಾರಿಯ ಡಿವೈಡರಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಕಾರಿನಲ್ಲಿದ್ದವರಿಗೆ ಸಾದಾ ವ ಭಾರಿ ಸ್ವರೂಪದ ಗಾಯ ಪಡಿಸಿ ತಾನೂ ಸಹ ಸಾದಾ ಸ್ವರೂಪದ ಗಾಯ ಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 100/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ದಾಸ್ತಿಕೊಪ್ಪ ಗ್ರಾಮದ  ಮೃತ ಬಸಮ್ಮ ಗಂಡ ಶಿವಬಸವನಗೌಡ ಜಂಗಳೆಪ್ಪಗೌಡ್ರ ವಯಾ 87 ವರ್ಷ, ಸಾ: ದಾಸ್ತಿಕೊಪ್ಪ ಹಾ:ವ: ತಂಬೂರ ಇವಳು ದಿನಾಂಕ: 04/07/2018 ರಂದು ರಾತ್ರಿ 09.00 ಗಂಟೆ ಸುಮಾರಿಗೆ ತನಗೆ ಚಳಿಯಾಗುತ್ತಿದೆ ಅಂತ ಒಲೆಯ ಮುಂದೆ ಕಾಯಿಸಿಕೊಳ್ಳುವಾಗ ಅವಳ ನೆದರು ಕಡಿಮೆ ಇದ್ದದ್ದರಿಂದ ಒಲೆಯ ಮುಂದೆ ಕಾಯಿಸಿಕೊಳ್ಳುತ್ತಿದ್ದಾಗ ಬೆಂಕಿಯು ಅವಳ ಸೆರಗಿಗೆ ಮತ್ತು ಸೀರೆಗೂ ಸಹ ಬೆಂಕಿ ಹತ್ತಿ ಸುಟ್ಟಗಾಯ ಮಾಡಿಕೊಂಡವಳಿಗೆ ಉಪಚಾರ ಕುರಿತು ಕಿಮ್ಸ್ ಹುಬ್ಬಳ್ಳಿಗೆ ದಾಖಲು ಆದವಳು ಉಪಚಾರದಿಂದ ಗುಣಹೊಂದೇ ದಿ: 08/07/2018 ರಂದು ಮುಂಜಾನೆ 06.30 ಗಂಟೆಗೆ ಮೃತಪಟ್ಟಿದ್ದು ಅವಳ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತಳ ಮಗ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 39/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.