ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, July 14, 2018

CRIME INCIDENTS 14-07-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:14-07-2018 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ ಠಾಣಾ ವ್ಯಾಪ್ತಿಯ: ಬಸಾಪುರ ಗ್ರಾಮದ ಹತ್ತಿರ ಆರೋಪಿಗಳಾದ 1.ಹನಮಂತಪ್ಪಾ ಹಳ್ಳಿ 2.ಸಿದ್ದಪ್ಪಾ ಕಂಬಳಿ ಹಾಗೂ ಇನ್ನೂ 03 ಜನರು ಕೊಡಿದಕೊಂಡು  ಹೊಸ ಪ್ಲಾಟಿನ ಖುಲ್ಲಾ ಜಾಗೆಯಲ್ಲಿ ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ್ ಅಂಬುವ ಇಸ್ಪೀಟ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 1020-00 ಗಳನ್ನು ವಶಪಡಿಸಿಕೊಂಡು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 76/2018 ಕಲಂ 87  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
 
2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಜಾವುರ  ಗ್ರಾಮದ  ಹತ್ತಿರ ಜಮೀನು ರಿ.ಸಂ.ನಂ.131/1 ಕ್ಷೇತ್ರ, 12 ಎಕರೆ 30 ಗುಂಟೆ ಜಮೀನದಲ್ಲಿ ತನ್ನ ಪಾಲಿನ ಜಮೀನದಲ್ಲಿ ಉಳಿಮೆ ಮಾಡುತ್ತಿರುವಾಗ ಕೃಪ್ಣ ರೇಡ್ಡಿ ಇನತು ಕೆಲವು ಪುಂಡು ಜನರನ್ನು ಕರೆದುಕೊಂಡು ಬಂದು ಫಿರ್ಯಾದಿದಾರನ ಉಳಿಮೆಗೆ ಹರಕತ್ ಮಾಡಿ ಜಮೀನುಗಳ ಮಧ್ಯ ಇರುವ ಹದ್ದಿನ ಒಡ್ಡನ್ನು ಕಿತ್ತು ಹಾಕಿ ಅಪಾರವಾದ 20,000=00 ರೂ.ಗಳನ್ನು ಲುಕ್ಸಾನ ಮಾಡಿದ್ದು ಅಲಲ್ದೆ ಆರೋಪಿತನು ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ ಹೊಡಿ ಬಡಿ ಮಾಡಿ ಕಾಲಿನಿಂದ ಒದ್ದು ಫಿರ್ಯಾದಿಗೆ ನಿನ್ನನ್ನು ಜೀವಂತ ಬಿಡುವುದಿಲ್ಲ ಅಂತಾ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 135/2018 ಕಲಂ 447.427.323.504.506.34. ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದ ಇರುತ್ತದೆ.