ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, July 17, 2018

CRIME INCIDENTS 17-07-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:17-07-2018 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಕೋಟೂರ ಗ್ರಾಮದ ಉಡಚಮ್ಮನ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕುಳಿತುಕೊಂಡು  ಆರೋಪಿತನಾದ ಈಮಾಮ ರಾಜೇಸಾಬ 2.ಮೌನೇಶ ಬಡಗೇರ  ಇವರು ತನ್ನ ಪಾಯ್ದೆಗೋಸ್ಕರ ಓ ಸಿ ಅಂಬುವ ಜೂಜಾಟವನು ಆಡಿಸುತ್ತಾ ಅಂಕಿ ಸಂಖೆಗಳನ್ನು ಬರೆದುಕೊಡುವಾಗ ಸಿಕ್ಕಿದ್ದು ಅವರಿಂದ ರೂ 430—00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 107/2018 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಬೋಗನೂರ ಗ್ರಾಮದ ಮೃತ ರೇಶ್ಮಾ ಕೋಂ ಬಸವರಾಜ ಕುಲಕರ್ಣಿ ಈತಳು ಕೆಲವು ದಿನಗಳಿಂದ ತನ್ನ ಮೈದುನ ವೀರಪ್ಪ ಕುಲಕರ್ಣಿ ಈತನೊಂದಿಗೆ ಬಹಳ ಸಲುಗೆಯಿಂದ ಇದ್ದಳು.  ಅದಕ್ಕೆ ನನ್ನ ಮಗಳ ಗಂಡ ಸಂಶಯ ಮಾಡುತ್ತಿದ್ದನು ಈ ವಿಷಯ ಸಲುವಾಗಿ ನಾನು ಮತ್ತು ನನ್ನ ಮನೆಯ ಜನರು ನನ್ನ ಮಗಳಿಗೆ ಬುದ್ದಿವಾದ ಹೇಳಿದ್ದೇವು. ಇದನ್ನೆ ನನ್ನ ಮಗಳು ಮನಸ್ಸಿಗೆ ಹಚ್ಚಿಕೊಂಡು ನಿನ್ನೆ ದಿವಸ ದಿನಾಂಕ: 16/07/2018 ರಂದು ತನ್ನ ಗಂಡನ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ತನ್ನಷ್ಟಕ್ಕೆ ತಾನೇ ಉರುಲು ಹಾಕಿಕೊಂಡಿದ್ದು ಇರುತ್ತದೆ.  ಆದರೂ ಕೂಡ ನನ್ನ ಮಗಳು ಯಾವ ಕಾರಣಕ್ಕೆ ಉರುಲು ಹಾಕಿಕೊಂಡಿದ್ದಾಳೆ ಅನ್ನುವುದು ತಿಳಿಯುತ್ತಿಲ್ಲ ಅದಕ್ಕಾಗಿ ಮರಣೋತ್ತರ ಪರೀಕ್ಷೇಯಿಂದ ತಿಳಿಯಬೇಕು ಅಂತಾ ವರದಿಗಾರನು  ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 30/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ