ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, July 21, 2018

CRIME INCIDENTS 21-07-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:21-07-2018 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮನಕವಾಡ ಗ್ರಾಮದ ಹತ್ತಿರ ಮೊರಬದ ಇವರು ಜಮೀನದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರೆಲರ್ ನಂ KA-25/TA 8346  (ಚಸ್ಸಿ ನಂಬರ್ MGE 60/13) ಅಕಿ 30,000/- ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 81/2018 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಶೆಲವಡಿ ಗ್ರಾಮದ ಹತ್ತಿರ ಟಾಟಾ ಎಸ್ ವಾಹನ ಸಂಖ್ಯೆ ಕೆಎ-28/ಬಿ-9392ನೇದ್ದರ ಚಾಲಕನು ಶೆಲವಡಿ ಕಡೆಯಿಂದ ನವಲಗುಂದ ಕಡೆಗೆ  ಅತಿವೇಗದಿಂದ ಹಾಗೂ ನಿಷ್ಕಾಳಜಿತನದಿಂದ ವಾಹನವನ್ನು ಚಲಾಯಿಸಿಕೊಂಡು ಬಂದು ನವಲಗುಂದ ಶೆಲವಡಿ ರಸ್ತೆಯ ಗುಡಿಸಾಗರ ಕ್ರಾಸ್ ಹತ್ತಿರ ನಿಂತಿದ್ದ ಟ್ರಾಕ್ಟರ್ ನಂ ಕೆಎ-25/ಬಿ-0894 ನ ಟ್ರೇಲರ್ ನಂ ಟಿಎ-0895 ನೇದ್ದಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತಪಡಿಸಿ ತನಗೆ ಹಾಗೂ ಟಾಟಾ ಎಸ್ ಗಾಡಿಯಲ್ಲಿದ್ದ ಉಳಿದವರಿಗೆ ಸಾದಾ ವ ಬಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 137/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.