ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, July 23, 2018

CRIME INCIDENTS 23-07-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:23-07-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನೂಲ್ವಿ ಗ್ರಾಮದ ದನದ ಮಾಕೇಟ್ ಬಯಲಿನ ಸಾರ್ವಜನಿಕ ಸ್ಥಳದಲ್ಲಿ ಇದರಲ್ಲಿ ಆರೋಪಿತರಾದ ಕಿಲ್ಲೇದಾರ  ಅಲ್ತಾಪ ಶೆರವಾಡ ಹಾಗೂ ಇನ್ನೂ 08 ಜನರು ಕೊಡಿಕೊಂಡು ತಮ್ಮ ತಮ್ಮ ಪಾಯ್ದೇಗೊಸ್ಕರ ಪಣಕ್ಕೆ ಹಣವನ್ನು ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ ಬಾಹಾರ ಅಂಬುವ ಜೂಜಾಟವನ್ನು ಆಡುತ್ತಿದ್ದಾಗ  ಸಿಕ್ಕಿದ್ದು ರೂ 5200/- ರೂ. ಹಣ 52 ಇಸ್ಪೀಟ್ ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 199/2018 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಾಸ್ತಿಕೊಪ್ಪ ಗ್ರಾಮದ ಗಂಗಾಧರ ಮುಲಿಮನಿ ಇವನ ಹೆಂಡತಿಯಾದ ಸಂದ್ಯಾ @ ನೇತ್ರಾವತಿ ಕೋಂ ಗಂಗಾಧರ ಮೂಲಿಮನಿ 19 ವರ್ಷ ಸಾ..ದಾಸ್ತಿಕೊಪ್ಪ ತಾ..ಕಲಘಟಗಿ ಇವಳು ಮನೆಯಿಂದಾ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 191/2018 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ