ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, July 26, 2018

CRIME INCIDENTS 26-07-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:26-07-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣ ವ್ಯಾಪ್ತಿಯ:ಹುಲಗಿನಕಟ್ಟಿ ತಾಂಡಾ ದಾರಿಯ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1]ಸುನೀಲ ಮಲ್ಲೇಶಪ್ಪ ಅಂಕುಶಖಾಣಿ ಮತ್ತು 2]ಮಲ್ಲಿಕಾರ್ಜುನ ಮಾದೇವಪ್ಪ ಪರಂಡೆಕರ ಸಾ..ಇಬ್ಬರೂ ಕಲಾಲ ಓಣಿ ಕಲಘಟಗಿ  ಇವರು ತಮ್ಮ ಸ್ವಂತ ಪಾಯ್ದೆಗೋಸ್ಕರ  ಯಾವುದೇ ಪಾಸು ವ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ ತಮ್ಮ ಬಳಿ ಒಟ್ಟು 2098/-ರೂ ಕಿಮ್ಮತ್ತಿನ ಸರಾಯಿ ತುಂಬಿದ ಟೆಟ್ರಾ ಪಾಕೀಟುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 197/2018 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸದ್ದು ಇರುತ್ತದೆ.