ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, July 27, 2018

CRIME INCIDENTS 27-07-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-07-2018 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಧಾರವಾಡ ಬೈಪಾಸರಸ್ತೆ ಮೇಲೆ ಯರಿಕೊಪ್ಪ ಗ್ರಾಮದ ರಮ್ಯಾ ರೆಸಿಡೆನ್ಸಿ ಹತ್ತಿರ ಕೆಎಸ್ ಆರ್ ಟಿಸಿ ಬಸ್ ನಂ ಕೆಎ 22 ಎಫ್ 2031 ನೇದ್ದರ ಚಾಲಕ ಬಸ್ ನ್ನು ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಅತೀ ವೇಗವಾಗಿ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ಕೊಂಡು ಬಂದು ಬಸ್ಸಿನ ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಬದಿಯಲ್ಲಿ ನಿಂತಿದ್ದ  ಪಿರ್ಯಾದಿಯ ತಂದೆ ಮಾದವರಾವ ನಿಲಕಂಟರಾವ ಪಾಟೀಲ ಸಾಃದಾಂಡೆಲಿ ಇವರಿಗೆ  ಡಿಕ್ಕಿ ಪಡಿಸಿ ಅಪಘಾತಮಾಡಿ ಅಪಘಾತದಲ್ಲಿ  ಭಾರಿ ಗಾಯ ಪಡಿಸಿದ್ದು ಇರುತ್ತದೆ ಗುನ್ನಾನಂ 192/2018 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 

2.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಶಹರದ ಲಕ್ಷ್ಮೀ ಗುಡಿ ಹಿಂದೆ ಇರುವ ಮನೆಯಿಂದಾ ಇದರಲ್ಲಿ ಪಿರ್ಯಾಧಿ ಶಿವಾನಂದ ಹೊನ್ನಿಹಳ್ಳಿ ಇವನ ಮಗನಾದ ಮಹಾಬಳೇಶ್ವರ @ ಮಂಜು ತಂದೆ ಶಿವಾನಂದ ಹೊನ್ನಿಹಳ್ಳಿ 15 ವರ್ಷ ಸಾ..ಕಲಘಟಗಿ ಇವನು ಮನೆಯಿಂದಾ ಶಾಲೆಯಲ್ಲಿ ಸ್ಪೋರ್ಟ್ಸ ಇವೆ ಅಂತಾ ಹೇಳಿ ಹೋದವನು ಈವರೆಗೂ ಮನೆಗೆ ಬಾರದ್ದರಿಂದ ಅವನಿಗೆ ಯಾರೋ ಯಾವುದೆ ಉದ್ದೇಶಕ್ಕಾಗಿ ಒತ್ತಾಯದಿಂದ ಪುಸಲಾಯಿಸಿ ಅಪಹರಸಿಕೊಂಡು ಹೋಗಿರುವದಾಗಿ ಪಿರ್ಯಾಧಿಯ ನೀಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುನ್ನಾನಂ 199/2018 ಕಲಂ 363 ನೇದ್ದರಲ್ಲಿ ಪ್ರಕರನವನ್ನು ದಾಖಲಿಸಿದ್ದು ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ