ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, July 29, 2018

CRIME INCIDENTS 29-07-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-07-2018 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ತಡಕೋಡ ಗ್ರಾಮದ ಹತ್ತಿರ ಮೊಟಾರ ಸೈಕಲ ಚಸ್ಸ ನಂ.MD2A181AZ1GWE18018 ಇಂಚನ್ ನಂ.MDZWGE05784  ನೇದ್ದರ ಚಾಲಕನು ತನ್ನ ಮೊಟಾರ ಸೈಕಲನ್ನು ಖಾನಾಪೂರ ಕಡೆಯಿಂದ ತಡಕೊಡ ಕಡೆಗೆ ಅತೀಜೊರಿನಿಂದ ವ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ತಡಕೊಡ ಕಡೆಯಿಂದ ಖಾನಾಪೂರ ಕಡೆಗೆ ಬರುತ್ತಿದ್ದ ಮೊಟಾರ ಸೈಕಲ ನಂ.ಕೆ.ಎ.25/ಈಎಸ್/5232 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಮೊಟಾರ ಸೈಕಲ ಸವಾರ ಮಲ್ಲಪ್ಪ.ಮಂಗೋಜಿ ಸಾಃತಡಕೊಡ ಇತನಿಗೆ ಬಾರಿ ಸ್ವರೂಪದ ಗಾಯ ಪಡಿಸಿ ತನಗೂ ಸಹ ಭಾರಿ ಸ್ವರೂಪದ ಗಾಯ ಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 114/2018 ಕಲಂ 279.338.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕವಲಗೇರಿ ಗ್ರಾಮದ ಹತ್ತಿತ ಆರೋಪಿತರಾದ 1.ಸಂತೊಷ ರೊಪ್ಪಣ್ಣವರ ಹಾಗೂ ಇನ್ನೂ 02 ಜನರು ಕೊಡಿಕೊಂಡು ಹೊಲದ ಪಕ್ಕದಲ್ಲಿರುವ ಯಲ್ಲಪ್ಪ ಕೋರಿರವರ ಹೊಲವನ್ನು ಈಗ ಸುಮಾರು 9-10 ವರ್ಷಗಳಿಮದ  ಲಾವಣಿ ತರೀಖವಾಗಿ ಶೇತ್ಕಿ ಮಾಡುತ್ತಾ ಬಂದಿರತ್ತಾರೆ ಪಿರ್ಯಾದಿದಾರರನ್ನು ಲಾವಣಿ ಬಿಡಸಬೇಕು ಅಂತಾ ಆರೋಪಿತರು ಈಗ ಸುಮಾರು 02 ವರ್ಷದಿಂದ ಕಲ್ಲನಗೌಡ ಪಾಟೀಲ ಇವರೊಂದಿಗೆ ತಂಟೆ ಮಾಡುತ್ತಾ, ದ್ವೇಷ ಸಾದಿಸುತ್ತಾ ಬಂದಿದ್ದು ಕವಲಗೇರಿಗೆ ಬಂದು ಸಾರ್ವಜನಿಕ ರಸ್ತೆ ಮೇಲೆ ನಡೆಯುತ್ತಾ ಮನೆಗೆ ಹೋಗುತ್ತಿರುವಾಗ ಕವಳಿಯವರ ಗಿರಣಿ ಮುಂದೆ ಆರೋಪಿತರೆಲ್ಲರೂ ಕೂಡಿ ತಮ್ಮ ಹಳೇ ದ್ವೇಷದಿಂದ ಪಿರ್ಯಾದಿಯಿಂದಿಗೆ ಜಗಳಾ ತೆಗೆದು ಅವಾಚ್ಯವಾಗಿ ಬೈಯ್ದಾಡಿ ಕೈಯಿಂದ ಹೊಡಿ ಬಡಿ ಮಾಡಿದಲ್ಲದೇ ತನ್ನಸ್ಪೆಂಡರ್ ಮೋಟರ್ ಸೈಕಲದಲ್ಲಿದ್ದ ಚಾಕುವಿನಿಂದ ಪಿರ್ಯಾದಿದಾರನ ಬಲಗಣ್ಣಿನ ಮೇಲೆ ಮೂಗಿಗೆ ತಿವಿದು ಗಾಯಗೊಳಿಸಿ ಜೀವದ ಧಮಕಿ ಹಾಕಿ  03 ಜನ ಕೂಡಿ ಸ್ಪ್ಲೆಂಡರ್ ಮೋಟರ್ ಸೈಕಲ ಮೇಲೆ ಪರಾರಿಯಾಗಿ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 195/2018 ಕಲಂ 323.324.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪಿ.ಬಿ.ರಸ್ತೆಯ ಮೇಲೆ ವರೂರ VRL ಕಂಪನಿಯ ಹತ್ತಿರ , ಲಾರಿ ನಂ. TN/28/AR/9826 ನೇದ್ದರ ಚಾಲಕನಾದ ಗೋಪಿ @ ಗೊಬಿ. ಕೆ. ಸಾಃ ಕುಚಿಪಾಳಯಂ, ತಮಿಳುನಾಡು ರಾಜ್ಯ ಇವನು ತಾನು ನಡೆಸುತ್ತಿದ್ದ ಲಾರಿಯನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗ ವ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಮುಂದೆ ಹೊರಟ ಇದರಲ್ಲಿಯ ಪಿರ್ಯಾಧಿ ಬೀಮಣ್ಣ ಕಾಂಬಳೆ ಇವರ KSRTC ಬಸ್ ನಂ. KA/25/F/3141 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ಬಸ್ಸಿನಲ್ಲಿದ್ದ 4 ಜನ ಪ್ರಯಾಣಿಕರಿಗೆ ಸಾದಾ ವ ಭಾರಿ ದುಖಾಃಪತ್ ಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 202/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ನೆಲ್ಲಿಹರವಿ ಗ್ರಾಮದ ಹೊರವಲಯದ ಅರಳಿಹೊಂಡಕ್ಕೆ ಹೋಗುವ ದಾರಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು  ತಮ್ಮ ತಮ್ಮ ಸ್ವಂತ ಪಾಯ್ದೆಗೊಸ್ಕರ ಇಸ್ಪೇಟ್ ಎಲೆಗಳ  ಸಹಾಯದಿಂದ ಅಂದರ ಬಾಹರ ಎಂಬ  ಜುಜಾಟವನ್ನು ಆಡುತ್ತಿದ್ದಾಗ ರೋಖ ರಕ್ಕಂ 13290/- ರೂ ಹಾಗೂ 52 ಇಸ್ಪೀಟ್ ಎಲೆಗಳ ಸಮೇತ ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ ಠಾಣೆಯಲ್ಲಿ ಗುನ್ನಾನಂ 200/2018 ಕಲಂ 87  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.