ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, July 30, 2018

CRIME INCIDENTS 30-07-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-07-2018 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಬುಡರಸಿಂಗಿ ಗ್ರಾಮದ  ಕೇರೆಯ ಮೇಲಿನ ಒಂಡಿಯ ಮೇಲಿನ ಸಾರ್ವಜನಿಕ ಜಾಗೆಯಲ್ಲಿ ಸುತ್ತುವರೆದು ಕುಳಿತುಕೊಂಡು ಆರೋಪಿತರೆಲ್ಲರೂ ತಮ್ಮ ತಮ್ಮ ಫಾಯ್ದೇಗೋಸ್ಕರ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಅಂಬುವ ಜೂಜಾಟವನ್ನು ಆಡುತ್ತಿರುವಾಗ ಸದರಿಯವರ ತಾಬಾದಲ್ಲಿಂದ ಒಟ್ಟು ರೋಖ ರಕಂ 5400 ರೂಪಾಯಿ ಹಾಗೂ 52 ಇಸ್ಪೀಟ ಎಲೆಗಳ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 203/2018 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಗಳಗಿಹುಲಕೊಪ್ಪ ಗ್ರಾಮದ ಸುನೀಲ @ ಪಿಂಟೂ ತಂದೆ ಕಲ್ಲಪ್ಪ ಮಾಂಗೋರೆ ವಯಾ 40 ವರ್ಷ ಸಾ: ರಸಾಯಿ ಸೆಂಡೂರ ತಾ: ಚಿಕ್ಕೋಡಿ ಜಿಲ್ಲೆ ಬೆಳಗಾವಿ, ಹಾಲಿ: ಹುಬ್ಬಳ್ಳಿ ಅರವಿಂದನಗರ ಈತನಿಗೆ ಯಾರೋ ಯಾವದೋ ಕಾರಣಕ್ಕೆ ಹುಬ್ಬಳ್ಳಿಯಿಂದ ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪ ಗ್ರಾಮದ ಹತ್ತಿರ ಕರೆದುಕೊಂಡು ಬಂದು ಯಾವದೋ ಉದ್ದೆಕ್ಕೆ ಯಾವದೋ ಹರಿತವಾದ ಆಯುಧದಿಂದ ಅವನ ತಲೆಗೆ, ಮುಖಕ್ಕೆ ಗದ್ದಕ್ಕೆ ಹೊಡೆದು ಭಾರಿ ಪ್ರಮಾಣದ ಗಾಯಪಡಿಸಿ ಕೊಲೆ ಮಾಡಿ ಶವವನ್ನು ಹೊಲಕ್ಕೆ ಹೋಗುವ ಕಚ್ಚಾರಸ್ತೆ ಬದಿಯಲ್ಲಿ ಹಾಕಿಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 201/2018 ಕಲಂ 302 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.