ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, July 6, 2018

CRIME INCIDENTS 06-07-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:06-07-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಶಹರ ಗ್ರಾಮದ  ಹತ್ತಿರ ಟಾಟಾ ಇಂಡಿಕಾ ಕಾರ್ ನಂ ಕೆ-25/ಎಮ್ ಎ-8562 ನೇದ್ದರ ಚಾಲಕನು ಹುಬ್ಬಳ್ಳಿ ಕಡೆಯಿಂದ ನವಲಗುಂದ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜಿಯನದಿಂದ ಮಾನವೀಯ ಪ್ರಾನಕ್ಕೆ ಅಪಾಯವಾಗುವ ರೀತಿಯಿಂದ ನಡೆಯಿಸಿಕೊಂಡು ಬಂದು ಹಿರೋ ಹೊಂಡಾ ಪ್ಲೇಸರ್ ನಂ ಕೆಎ-25/ಇಎಫ್-9882 ನೇದ್ದನ್ನು ನೀರಾವರಿ ಕ್ರಾಸ್ ಹತ್ತಿರ ರೋಡ್ ಕ್ರಾಸ್ ಮಾಡುತ್ತಿರುವಾಗ ಸದರಿ ಇಂಡಿಕಾ ಕಾರ್ ನ ಚಾಲಕನು ಅಪಘಾತಪಡಿಸಿ ಬಸವರಾಜ ಸೋದಿ ಇವರಿಗೆ  ಸಾಧಾ ವ ಬಾರಿಗಾಯಪಡಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 130/2018 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಯರಿಕೊಪ್ಪ ಗ್ರಾಮದ ಕಾಲವಾಡ ಇಟ್ಟಂಗಿ ಬಟ್ಟಿ ಹತ್ತಿರ ಯಾವುದೋ  ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿಜೋರಿನಿಂದ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ರಸ್ತೆ ಸೈಡಿನಲ್ಲಿದ್ದ  ಸುಮಾರು 30-35 ವಯಸ್ಸಿನ  ಅನಾಮದೇಯ ಗಂಡಸ್ಸು ವ್ಯಕ್ತಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಸ್ಥಳದಲ್ಲಿಯೇ ಮೃತ ಪಡಿಸಿದ್ದಲ್ಲದೇ ವಾಹನ ಸಮೇತ ಪರಾರಿಯಾಗಿ ಹೋಗಿದ್ದುಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 176/2018 ಕಲಂ 279.304(ಎ) ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ ಅಪರಾಧ.

3.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನುಗ್ಗಿಕೇರಿ ಗ್ರಾಮದ ಹತ್ತಿರ ಕಾರ ನಂಬರ ಕೆ ಎ 68 ಎಮ್ 0888 ನೇದ್ದನ್ನು ಅದರ ಚಾಲಕ ಶ್ರೀಕರ ಸತ್ಯೆನಾರಯಣ ನಾಯ್ಡು ಸಾ:ಧಾರವಾಡ ಇತನು ರಮ್ಯಾ ರೆಸಿಡೇನ್ಸಿ ಕಡೆಯಿಂದ ಧಾರವಾಡ ಕಲಘಟಗಿ ರಸ್ತೆಗೆ ಕೊಡಿ ಧಾರವಾಡ ಕಡೆಗೆ ಅತೀ ಜೋರಿನಿಂದ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನುಗ್ಗಿಕೇರಿ ಹನಮಂತ ದೇವರ ಗುಡಿ ಕ್ರಾಸ ಸಮೀಪ ನಿಯಂತ್ರಣ ಮಾಡಲಾಗದೆ ಒಮ್ಮೆಲೆ ರಸ್ತೆಯ ಎಡ ಬದಿಗೆ  ತೆಗೆದುಕೊಂಡು ಗಿಡಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಕಾರಿನಲ್ಲಿದ್ದ ಪಿರ್ಯಾದಿಗೆ, ಹಾಗೂ ಸಾಯಿ ಪ್ರಕಾಶ ಹಜೇರಿ, ಸತೀಶ ಕೊಪರ್ಡೆ,ಹಾಗೂ ರಾಘವೇಂದ್ರ ಸಾ:ಎಲ್ಲರು ಧಾರವಾಡ ಇವರಿಗೆ ಸಾದ ವ ಭಾರಿ ಗಾಯ ಪಡಿಸಿದ್ದಲ್ಲದೆ ತನಗೂ ಗಾಯ ಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 178/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.