ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, August 16, 2018

CRIME INCIDENTS 16-08-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-08-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ :09-08-2018 ರಂದು 15-20 ಗಂಟೆಗೆ ಆರೋಪಿ 1 ರಾಘವೇಂದ್ರ ಚಂದ್ರಮೌಳಿ ನೇದವನು ಆರೋಪಿ 2 ಶೀವಮಹೇಶ್ವರ ನೇದವನ ಬಾಬತ್ತ ಲಾರಿ ನಂ:ಕೆಎ/35 ಎ-7465 ನೇದ್ದರಲ್ಲಿ ತನ್ನ ಬಾಬತ್ತ ಹೆಸರ ಪೀಕ್  ಒಕ್ಕಲ ಮಶಿನನ್ನು ಯಾವುದೇ ಸುರಕ್ಷತೆ ಮುಂಜಾಗ್ರತಾ ಕ್ರಮ ಕೈಕೊಳ್ಳದೇ ನಿರ್ಲಕ್ಷತನದಿಂಧ ಹೇರಿಕೊಂಡು ಪಿರ್ಯಾದಿಯ ಹೊಲಕ್ಕೆ ಬಂದು ಲಾರಿಯನ್ನು ನಿಲ್ಲಿಸಿ ಗಾಯಾಳು ಸಿದ್ದಪ್ಪ ಮಲ್ಲಪ್ಪ ಜಾದವ್ ಸಾ!! ತಿರ್ಲಾಪೂರ ಈತನಿಗೆ ಮಶಿನನ್ನು ಲಾರಿಯಿಂದ ಇಳಿಸಲು ಹೇಳಿ ಲಾರಿಯಿಂದ ಮಶಿನ ಇಳಿಸುವಾಗ ಗಾಯಾಳುವಿನ ಬಲಗೈಗೆ ಭಾರಿ ಗಾಯವಾಗುವಂತೆ ಮಾಡಿದ ಅಫರಾದ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ  143/2018 ಕಲಂ 279,338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 15-08-2018 ರಂದು ಬೆಳಗಿನ 0900 ಗಂಟೆಗೆ ಅಮ್ಮಿನಬಾವಿ ಹೆಬ್ಬಳ್ಳಿ ರಸ್ತೆ ಅಮ್ಮಿನಬಾವಿ ಗ್ರಾಮದ  ಅಬ್ದುಲರೆಹಮಾನ ಅಪ್ಪುನವರ ಇವರ ಹೊಲದ ಹತ್ತಿರ ಇನ್ನೋವಾ ಕಾರ ನಂ KA-25-AA-3221 ನೇದರ ಚಾಲಕನಾದ ಅವಿನಾಶ ಚಂದ್ರಶೇಖರ ಗಂಗಪ್ಪನವರ ವಯಾ-22 ಸಾ: ಹುಬ್ಬಳ್ಳಿ ಇವನು ತನ್ನ ಕಾರನ್ನು ಚಂದನಮಟ್ಟಿ ಕಡೆಯಿಂದ ಅಮ್ಮಿನಬಾವಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಕಾರನ ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಬಲಸೈಡಿನ ತೆಗ್ಗಿನಲ್ಲಿ ಪಲ್ಟಿ ಮಾಡಿ ಕೆಡವಿ ಕಾರನ್ನು ಜಖಂಗೊಳಿಸಿದ್ದು ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 205/2018 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, August 15, 2018

CRIME INCIDENTS 15-08-2018

 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:15-08-2018 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಹಳಿಯಾಳ ಧಾರವಾಡ ರಸ್ತೆಯ ಮೇಲೆ ಕೊಕ್ರೆವಾಡ ಕ್ರಾಸ್ ಹತ್ತಿರ ಆರೋಪಿತಳಾದ ಶಕೀಲಾ ತಂದೆ ದಾದಾಪೀರ ತಡಕಲ್ , ವಯಾ 16 ವರ್ಷ ಸಾ ಃ ಧಾರವಾಡ ಲಕ್ಷ್ಮೀಸಿಂಗನಕೇರಿ ಇವಳು ತನ್ನ ದ್ವಿಚಕ್ರ ವಾಹನ (ಡಿಯೋ) ನಂ. ಕೆಎ-25/ಇಡಿ-4699 ನೇದ್ದರಲ್ಲಿ ತನ್ನ ಗೆಳೆಯನಾದ ಆಸೀಫ್ ತಂದೆ ಜಲಾನಿ ತಹಶೀಲ್ದಾರ ಸಾ ಃ ಧಾರವಾಡ ಲಕ್ಷ್ಮೀಸಿಂಗನಕೇರಿ ಇವನಿಗೆ ಕೂಡ್ರಿಸಿಕೊಂಡು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಹೋಗಿ ತನ್ನ  ಎದುರಿಗೆ ಧಾರವಾಡ ಕಡೆಯಿಂದ ಹಳಿಯಾಳ ಕಡೆಗೆ ಬರುತ್ತಿದ್ದ ಕೆ.ಎಸ್. ಆರ್. ಟಿ. ಸಿ. ಬಸ್ ನಂ. ಕೆಎ-25/ಎಫ್ - 2993 ನೇದ್ದರ ಮುಂದಿನ ಗಾಲಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ತಾನು ದುಃಖಾಪತ್ ಹೊಂದಿದ್ದು ಅಲ್ಲದೇ ತನ್ನ ಹಿಂದೆ ಕುಳಿತ ಆಸೀಫ ತಂದೆ ಜಲಾನಿ ತಹಶೀಲ್ದಾರ ಸಾ ಃ ಧಾರವಾಡ ಇವನಿಗೆ ಭಾರೀ ದುಃಖಾಪತ್ ಪಡಿಸಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 76/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..

Monday, August 13, 2018

CRIME INCIDENTS 13-08-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:13-08-2018 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಚಿಕ್ಕಮಲ್ಲಿಗವಾಡ ಬ್ರೀಡ್ಜ ಹತ್ತಿರ  ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ರಸ್ತೆ ಎಡಸೈಡಿನಲ್ಲಿದ್ದ  ಶಿವಪ್ಪ ತಂದೆ ಮಹಾದೇವಪ್ಪ ಮಡಿವಾಳರ ವಯಾ-54 ವರ್ಷ ಸಾ: ತಿಮ್ಮಾಪೂರ ಇವನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಸ್ಥಳದಲ್ಲಿಯೇ ಮೃತಪಡಿಸಿದ್ದಲ್ಲದೇ ವಾಹನ ಸಮೇತ ಪರಾರಿಯಾಗಿ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 203/2018 ಕಲಂ 279.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಬುಡರಸಿಂಗಿ ಗ್ರಾಮದ ಹತ್ತಿರ ಯಾವುದೋ ಬಂದು ವಾಹನವನ್ನು ಅದರ ಚಾಲಕನು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಬಹಳ ಜೋರಿನಿಂದ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಮೃತ ಅನಾಮಧೇಯ ಗಂಡಸ್ಸು ಅಜಮಾಸ ವಯಾ 35 ರಿಂದ 40 ವರ್ಷದವನಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಭಾರಿ ಗಾಯಪಡಿಸಿ ಪರಾರಿಯಾಗಿ ಹೋಗಿದ್ದು. ಸದರಿ ಅನಾಮಧೇಯ ವ್ಯಕ್ತಿಯು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಪಚಾರ ಹೊಂದುತ್ತಿದ್ದಾಗ  ಉಪಚಾರಫಲಿಸದೇ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 213/2018 ಕಲಂ 279.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. ಅಪರಾಧ.

3. ಗರಗ ಪೊಲೀಸ್ ವ್ಯಾಪ್ತಿಯ:ಉಪ್ಪಿನಬೇಟಗೇರಿ ಗ್ರಾಮದ ಮೃತನಾದ ಸೈಫಅಲಿ.ತಂದೆ ಶಮಶುದ್ದಿನ.ಧಾರವಾಡ ವಯಾ-18 ವರ್ಷ.ಸಾಃಉಪ್ಪಿನಬೆಟಗೇರಿ ಇತನು ಈ ದಿವಸ ದಿನಾಂಕ:13-08-2018 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ಆಡುಗಳನ್ನು ಮೇಯಿಸಲು ಅಂತಾ ಪುಡಕಲಕಟ್ಟಿ ರಸ್ತೆಯಲ್ಲಿರುವ ನಿಂಗನಾಳ ಇವರ ಹೊಲದ ಮುಂದಿನ ಆಲದ ಗೀಡವನ್ನು ಹತ್ತಿ ಗೀಡದ ಟೊಂಗಿಗಳನ್ನು ಕಡೆಯುತ್ತಿರುವಾಗ ಟೊಂಗಿಯು ಆಕಸ್ಮಾತವಾಗಿ ಗೀಡದ ಮೇಲೆ ಹಾಯ್ದು ಹೋದ ಕರೆಂಟ ಲೈನಿಗೆ ತಾಗಿ ಅದರಿಂದ ಕರೆಂಟ ಹೊಡೆದು ಗೀಡದ ಮೇಲಿಂದಾ ಕೆಳಗೆ ಬಿದ್ದು ಮೃತ ಪಟ್ಟಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 25/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ದೇವಿಕೊಪ್ಪ ಗ್ರಾಮದ ಮೃತ ಮೌಲಾಸಾಬ ಕೊಡಲಗಿ  ಮೃತನು ದಿನಾಲು ಸರಾಯಿ ಕುಡಿದು ಮನೆಗೆ ಬಂದು ತನ್ನ ಹೆಂಡತಿಯೊಂದಿಗೆ ವಿನಾಃಕಾರಣ ತಂಟೆ ತಕರಾರು ಮಾಡುತ್ತಾ ಬಂದಿದ್ದು, ಊರ ಹಿರಿಯರಿಗೆ ಕೂಡಿಸಿ ಬುದ್ದಿವಾದ ಹೇಳಿಸಿದರೂ ಸಹಾ ಕೇಳದೆ ನಿನ್ನೆ ದಿ..12-08-2018 ರಂದು ಸಂಜೆ 4-00 ಗಂಟೆಯ ಸುಮಾರಿಗೆ ಸರಾಯಿ ಕುಡಿದು ಮನೆಗೆ ಬಂದು ಊಟ ಹಚ್ಚಿ ಕೊಟ್ಟಿಲ್ಲಾ ಅಂತಾ ಹೆಂಡತಿಯೊಂದಿಗೆ ತಂಟೆ ತೆಗೆದು ಬೈದಾಡಿ ಅವಳ ಸೀರೆಯನ್ನು ಜಗ್ಗಾಡಿದಾಗ ಆಕೆ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದಾಗ ಹೆದರಿ ಮನೆಯಿಂದಾ ಹೋದವನು ದೇವಿಕೊಪ್ಪದ ಸ್ಮಶಾನಗಟ್ಟಿ ಕೆರೆಯ ದಂಡೆಯ ಮೇಲಿರುವ ಒಂದು ಸಾಗವಾನಿ ಗಿಡಕ್ಕೆ ತನ್ನಷ್ಟಕ್ಕೆ ತಾನೆ ಸೀರೆಯಿಂದಾ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಅವರ ಸಾವಿನಲ್ಲಿ ಬೇರೆ ಯಾರ ಮೇಲೆಯೂ ಯಾವುದೆ ಸಂಶಯ ಇರುವದಿಲ್ಲಾ ಅಂತ ಮೃತನ ಹೆಂಡತಿ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ  ವರದಿ ಕೊಟ್ಟಿದ್ದು ಇರುತ್ತದೆ ಯುಡಿನಂ 45/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, August 12, 2018

CRIME INCIDENTS 12-08-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:12-08-2018 ರಂದು ವರದಿಯಾದ ಪ್ರಕರಣಗಳು

1.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ಅಳ್ನಾವರ ಗ್ರಾಮದ  ಆರೋಪಿತನಾದ ಶಿವಾಜಿ ತಂದೆ ರಾಮು ಗುಂಡುಪಕರ, ವಯಾ 60 ಉದ್ಯೋಗ ಒಕ್ಕಲುತನ ಜಾತಿ ಹಿಂದೂ ಮರಾಠಾ ಸಾ ಃ ಮಾಸ್ಕೆನಟ್ಟಿ ಗ್ರಾಮ ತಾ ಃ ಖಾನಾಪೂರ ಜಿಲ್ಲಾ ಬೆಳಗಾವಿ ಅಂಬುವವನು ಅಳ್ನಾವರದ ಕೆ. ಎಸ್. ಆರ್. ಟಿ. ಸಿ. ಬಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತುಕೊಂಡು ತನ್ನ ಸ್ವಂತ ಲಾಭಕ್ಕಾಗಿ ಯಾವುದೇ ಪರವಾನಿಗೆ ಇಲ್ಲದೇ ಒಂದು ಕೈ ಚೀಲದಲ್ಲಿ ಸುಮಾರು 1742/- ರೂ. ಕಿಮ್ಮತ್ತಿನ 90  ಎಂ.ಎಲ್.ದ ಒಟ್ಟು 59 ಹೈ ವರ್ಡಸ್ ಚಿಯರ್ಸ ವಿಸ್ಕಿ ತುಂಬಿದ ಟೆಟ್ರಾ ಪಾಕೇಟುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ  ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದ ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 75/2018 ಕಲಂ 32.34 ಅಬಕಾರಿ  ಕಾಯ್ದೆ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, August 11, 2018

CRIME INCIDENTS 11-08-2018ಧಾರವಾಡ ಜಿಲ್ಲೆಯಲ್ಲಿ ದಿನಾಂಕ:11-08-2018 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಬೇಲೂರ ಗ್ರಾಮದ  ಮೃತ ವಿಕ್ಟರ.ತಂದೆ ಪ್ರಕಾಶ.ವಯಾ-27 ವರ್ಷ.ಸಾಃಹಳೆಬಾತಿ ತಾಃದಾವಣಗೇರಿ ಹಾಲಿ ಧಾರವಾಡ ಇತನು ಬೆಲೂರ ಕೈಗಾರಿಕಾ ಪ್ರದೇಶದಲ್ಲಿರುವ ಆರ.ಎಸ್.ಬಿ.ಕಂಪನಿಯಲ್ಲಿ ದಿನಾಂಕ:10-08-2018 ರಂದು ಮದ್ಯಾಹ್ನ-2-10 ಗಂಟೆಯ ಸುಮಾರಿಗೆ ಕಂಪನಿಯಲ್ಲಿ ಮೆನುಪ್ಲೇಟ ಹತ್ತಿ ಕೆಲಸ ಮಾಡುತ್ತಿರುವಾಗ ಆಕಸ್ಮಾತವಾಗಿ ಕಾಲು ಜಾರಿ ನೆಲಕ್ಕೆ ಬಿದ್ದು ತಲೆಗೆ ಭಾರಿಪೆಟ್ಟು ಮಾಡಿಕೊಂಡಿದ್ದು ಸದರಿಯವನಿಗೆ ಉಪಚಾರ ಕುರಿತು ಎಸ.ಡಿ.ಎಮ.ಆಸ್ಪತ್ರೆ ಸತ್ತೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಮದ್ಯಾಹ್ನ-03-00 ಗಂಟೆ ಮೃತ ಪಟ್ಟಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 24/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, August 10, 2018

CRIME INCIDENTS 10-08-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:10-08-2018 ರಂದು ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಮೇಲೆ ಶಿರೂರ ಗ್ರಾಮದ ಬೆಣ್ಣೆ ಹಳ್ಳದ ಆರೋಪಿತನಾದ ಶಿವಪ್ಪ ಹನಮಂತಪ್ಪ ಸುಣಗಾರ. ವಯಾ: 24 ವರ್ಷ, ಸಾ: ಶಿರೂರ, ತಾ: ಕುಂದಗೋಳ ಈತನು ನಂಬರ ಬರೆಸದೇ ಇರುವ ಟಿ.ವ್ಹಿ.ಎಸ್ ಸ್ಟಾರ ಸಿಟಿ ಮೋಟಾರ ಸೈಕಲ್ ನ್ನು ಕುಂದಗೋಳ ಕಡೆಯಿಂದ ಶಿರೂರ ಕಡೆಗೆ ಅತೀ ಜೋರಿನಿಂದ ವ ಅಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ ತನ್ನ ಮುಂದೆ ಇದ್ದ 108 ಅಂಬುಲೆನ್ಸ ವಾಹನವನ್ನು ಓವರಟೆಕ ಮಾಡಿ ಶಿರೂರ ಕಡೆಯಿಂದ ಕುಂದಗೋಳ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಸಿ ಬಸ್ ನಂ ಕೆ.ಎ-25/ಎಫ್-2632 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ತನಗೆ ಮಾರಣಾಂತಿಕ ಗಾಯಪೆಟ್ಟುಗಳಾಗುವಂತೆ ಮಾಡಿಕೊಂಡಿದ್ದು, ಉಪಚಾರಕ್ಕೆ ಕುಂದಗೋಳ ಸರಕಾರಿ ದವಾಖಾನೆಗೆ ಕರೆದುಕೊಂಡು ಹೋದಾಗ ಮುಂಜಾನೆ 8-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 123/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ-ಕಾರವಾರ ರಸ್ತೆಯ ಗಲಗಿನಕಟ್ಟಿ ಕ್ರಾಸ್ ಹತ್ತಿರ ರಸ್ತೆ ಮೇಲೆ ಆರೋಪಿತನು ತಾನು ನಡೆಸುತ್ತಿದ್ದ ಮೊಟಾರ ಸೈಕಲ್ಲ ನಂ KA63/TC 003941 ನೇದ್ದನ್ನು ಕಲಘಟಗಿ ಕಡೆಯಿಂದ ಸಾತೋಶಹೀದ ಕಡೆಗೆ  ಅತಿಜೋರು ಅವಿಚಾರ ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ  ವೇಗದ ನಿಯಂತ್ರಣ ಮಾಡಲಾಗದೇ ಸ್ಕಿಡ್ ಮಾಡಿ ಕೆಡವಿ ಅಪಘಾತ ಪಡಿಸಿ ಮೊಟಾರ ಸೈಕಲ್ಲ ಮೇಲೆ ಹಿಂದೆ ಕುಳಿತ ಪಿರ್ಯಾದಿಯ ತಮ್ಮನ ಮಗ ವಾಜೀದ ಈತನಿಗೆ ಸಾದಾ ಗಾಯಪಡಿಸಿದ್ದಲ್ಲದೇ ತಾನೂ ತನ್ನ  ತಲೆಗೆ ಬಲವಾದ ಗಾಯಪಡಿಸಿಕೊಂಡು ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ  ಉಪಚಾರಕ್ಕೆ ದಾಖಲಿಸಿದಾಗ ಉಪಚಾರ ಪಲಿಸದೇ ದಿ:10-08-2018 ರಂದು 06-00 ಗಂಟೆಗೆ ಮರಣಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 208/2018 ಕಲಂ 279.337.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಯರಗುಪ್ಪಿ ಗ್ರಾಮದ  ಮೃತ ಗೀತಾ ಕೋಂ ಗದಿಗೆಪ್ಪ ಹೊಟಗಿ @ ಅಲ್ಲಾಪೂರ, ವಯಾಃ 29 ವರ್ಷ, ಇವಳು ತನಗಿದ್ದ ಹೊಟ್ಟೆ ನೋವಿನ ಬಾದೇ ತಾಳಲಾರದೇ ನಿನ್ನೆ ದಿವಸ ದಿನಾಂಕಃ 09-08-2018 ರಂದು ಸಾಯಂಕಾಲ 6-45 ಗಂಟೆ ಸುಮಾರಿಗೆ ಹಿರೇಬೂದಿಹಾಳ ಗ್ರಾಮದಲ್ಲಿ ತನ್ನ ಮನೆಯ ಜಗುಲಿಯ ಹತ್ತಿರ ತನ್ನಷ್ಟಕ್ಕೆ ತಾನೇ ಜೀವನದಲ್ಲಿ ಜಿಗುಪ್ಸೆ ಹೊಂದಿ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾಳೆ ವಿನಃ ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 11/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರನವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ದೇವಿಕೊಪ್ಪ ಗ್ರಾಮದ ಮೃತ ಪವಿತ್ರಾ ತಂದೆ ಲಕ್ಷ್ಮಣ ಪಾಯಕ್ಕನವರ ವಯಾ: 21 ವರ್ಷ, ಸಾ: ದೇವಿಕೊಪ್ಪ ಇವಳು ದಿ; 04/08/2018 ರಂದು ಮದ್ಯಾಹ್ನ 12.00 ಗಂಟೆ ಸುಮಾರಿಗೆ ತಮ್ಮ ಹಿತ್ತಲ ಮನೆಯ ಒಲೆಯಲ್ಲಿ ಕಟ್ಟಿಗೆ ಹಾಕಿ ನೀರು ಕಾಯಿಸಲು ಬೆಂಕಿ ಹಚ್ಚಲು ಹೋದಾಗ ಒಲೆಯಲ್ಲಿಯ ಕಟ್ಟಿಗೆಗೆ ಬೆಂಕಿ ಹತ್ತಲಾರದ್ದರಿಂದ ಒಲೆಯಲ್ಲಿ ಸೀಮೆ ಎಣ್ಣೆ ಹಾಕಿ ಕಡ್ಡಿ ಕೊರೆದು ಬೆಂಕಿ ಹಚ್ಚಿದಾಗ ಬೆಂಕಿಯ ಜ್ವಾಲೆಯು ಒಮ್ಮೆಲೆ ಭಗ್ ಅಂತ ಮೇಲೆ ಎದ್ದು ಅವಳು ಉಟ್ಟಿದ್ದ ಚೂಡಿದಾರಕ್ಕೆ ಬೆಂಕಿ ಹತ್ತಿ ಮುಖ ಮೈ ಕೈಕಾಲುಗಳಿಗೆ  ಸುಟ್ಟ ಗಾಯಗಳನ್ನು ಮಾಡಿಕೊಂಡವಳಿಗೆ ಉಪಚಾರ ಕುರಿತು ಕಿಮ್ಸ್ ಹುಬ್ಬಳ್ಳಿಗೆ ದಾಖಲು ಆದವಳು ಉಪಚಾರದಿಂದ ಗುಣಹೊಂದದೇ ದಿನಾಂಕ: 10/08/2018 ರಂದು 06.00 ಎ.ಎಮ್ ಕ್ಕೆ ಮೃತಪಟ್ಟಿದ್ದು ಅವಳ ಮರಣದಲ್ಲಿ ಯಾರ ಮೇಲೆ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತಳ ಅಣ್ಣ ಫಿಯಾಱಧೀ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 43/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ