ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, August 2, 2018

CRIME INCIDENTS 02-08-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:02-08-2018 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ ಶಹರದ ಭೂತೇಶ್ವರ ದೇವಸ್ಥಾನದ ಹತ್ತಿರ, ಇದರಲ್ಲಿಯ ಹೊಟೇಲ್ ದಲ್ಲಿ ಕೆಲಸ ಮಾಡುತ್ತಿದ್ದ ರಾಜು ತಂದೆ ಅಯ್ಯಪ್ಪ ನಾಯಕ, ವಯಾ: 65 ವರ್ಷ, ಸಾ: ಶಿರಸಿ ಇವನು ಲಕ್ವಾ ಹೊಡೆದು ಅಸ್ವಸ್ಥನಾಗಿದ್ದು ಸದರಿಯವನನ್ನು ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಸಹ ಉಪಚಾರ ಫಲಿಸದೇ ನಿನ್ನೆ ದಿನಾಂಕ: 01-08-2018 ರಂದು 1300 ಗಂಟೆಗೆ ಮರಣ ಹೊಂದಿದ್ದು ಅವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿ ಅಂತಾ ಫಿಯಾಱದಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 33/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಯಲವುದಾಳ ಗ್ರಾಮದ ಮೃತ ರಾಜೇಶ್ವರಿ ಗಂಡ ಬಸಯ್ಯ ಹಿರೇಮಠ ವಯಾ 34 ವರ್ಷ, ಸಾ: ಯಲವುದಾಳ ಇವಳು ಸೋಮನಕೊಪ್ಪ ಹದ್ದಿಯ ಆಲದಕಟ್ಟಿ ಹತ್ತಿರದ ತಮ್ಮ ಬಾಬತ್ ಸರ್ವೇ ನಂ 74 ರಲ್ಲಿಯ ಹೊಲದಲ್ಲಿರುವ ತನ್ನ ವಾಸದ ಮನೆಯಿಂದ ಈ ದಿವಸ ದಿ: 02/08/2018 ರಂದು ಮುಂಜಾನೆ ಎದ್ದು ಹೊಲದಲ್ಲಿರುವ ಮೇವಿನ ಬಣವಿಯಿಂದ ದನಕರುಗಳಿಗೆ ಮೇವು ತರಲು ಹೋಗಿ ಬಣವಿಯಿಂದ ಮೇವನ್ನು ಹಿರಿಯುತ್ತಿದ್ದಾಗ ಮುಂಜಾನೆ 04.45 ಗಂಟೆ ಸುಮಾರಿಗೆ ಅವಳ ಎಡಗಾಲ ಮೊಳಕಾಲ ಕೆಳಗೆ ಯಾವುದೋ ವಿಷಪೂರಿತ ಹಾವು ಕಚ್ಚಿ ತ್ರಾಸ್ ಮಾಡಿಕೊಳ್ಳುತ್ತಿದ್ದವಳಿಗೆ ಉಪಚಾರಕ್ಕೆ ಅಂತ 108 ಅಂಬುಲೆನ್ಸಿನಲ್ಲಿ ಕರೆದುಕೊಂಡು ಕಲಘಟಗಿ ಸರಕಾರಿ ದವಾಖಾನೆಗೆ ಕರದುಕೊಂಡು ಬರುತ್ತಿದ್ದಾಗ ಮುಂಜಾನೆ 05.30 ಗಂಟೆ ಸುಮಾರಿಗೆ ದವಾಖಾನೆ ಸಮೀಪ ಮೃತಪಟ್ಟಿದ್ದು ಅವಳ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 42/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ