ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, August 4, 2018

CRIME INCIDENTS 04-08-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:03-08-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಗಂಜಿಗಟ್ಟಿ ಗ್ರಾಮದ ಬಸ್ಟ್ಯಾಂಡ ಹಿಂದುಗಡೆಗೆ ಸಾರ್ವಜನಿಕ ಸ್ಥಳದಲ್ಲಿ ಆರೋಫಿತನಾದ ಬಸವರಾಜ ಹತ್ತಿಮರದ ಇತನು ತನ್ನ ಬಳಿ ಯಾವುದೆ ಪಾಸು ವ ಪರ್ಮೀಟ ಇಲ್ಲದೆ ಅನಧೀಕೃತವಾಗಿ 1]Old Taven whiskey 180 ML 15 Tetra Pockets 2]Original choice 90 ML 30 Tetra pockets ಒಟ್ಟು ಅ..ಕಿ..1913/- ಕಿಮ್ಮತ್ತಿನವುಗಳನ್ನು ಒಂದು ಚೀಲದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಮಾಲ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 204/2018 ಕಲಂ 32.34  ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಪೂನಾ ಬೆಂಗಳೂರ ರಸ್ತೆ ಮೇಲೆ ಪಾಲೀಕೊಪ್ಪ ಹದ್ದಿ ಸಹರಾ ಮೋರ್ಟಸ್ ಹತ್ತಿರ  ಲಾರಿ ನಂಬರ ಕೆಎ-19/ಎಎ-9841 ನೇದ್ದರ ಚಾಲಕ ಹಸನ್ ಶರೀಫ ತಂದೆ ಮಕ್ಬೂಲ್ ಶರೀಫ ಸಾಃ 6 ನೇ ಕ್ರಾಸ್ ಬೆಳವತ ಗ್ರಾಮ ಕೆಸರೆ ಪೋಸ್ಟ ಮೈಸೂರ ಇತನು ತಾನು ನಡೆಸುತ್ತಿದ್ದ ಲಾರಿಯನ್ನು ಹಾವೇರೆ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ, ಹುಬ್ಬಳ್ಳಿ ಕಡೆಗೆ ಮುಖ ಮಾಡಿ ನಿಂತಿದ್ದ ಬುಲೋರೊ ಗೂಡ್ಸ್ ವಾಹನ ನಂಬರ ಕೆಎ-17/ಸಿ-3978 ನೇದ್ದಕ್ಕೆ ಢಿಕ್ಕಿ ಮಾಡಿ ಪಲ್ಟಿಯಾಗಿ ರಸ್ತೆಯಲ್ಲಿ ಬಿಳುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 210/2018 ಕಲಂ 279 ನೇದ್ದರಲ್ಲಿ ಪ್ರಕರವನ್ನು ದಾಖಲಿಸಿದ್ದು ಇರುತ್ತದೆ.