ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, August 9, 2018

CRIME INCIDENTS 09-08-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:09-08-2018 ರಂದು ವರದಿಯಾದ ಪ್ರಕರಣಗಳು

1.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಹೊಸತೆಗೋರ ಹತ್ತಿರ ಲಾರಿ ನಂ.ಎಮ.ಎಚ./50/9393 ನೇದ್ದರ ಚಾಲಕನು ತನ್ನ ಲಾರಿಯನ್ನು ರಾಷ್ಟ್ರೀಯ ಹೇದ್ದಾರಿಯ ಮೇಲೆ ಹೊಸತೆಗೂರ ಹತ್ತಿರ ಗ್ರೀನ್ ಹೊಟೇಲ ಸುಮಾರಿಗೆ ಬೆಳಗಾವಿ ಕಡೆಯಿಂದ ಧಾರವಾಡ ಕಡೆಗೆ ಅತೀಜೊರಿನಿಂದ ವ ನಿಷ್ಕಾಳಜಿತನದಿಂದ ಮಾನವೀಯ ಪ್ರಮಾಣ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ಮೇಲೆ ತನ್ನ ಮುಂದೆ ಹೊರಟ ಮೊಟಾರ ಸೈಕಲ ನಂ.ಕೆ.ಎ.22/ಇಎಕ್ಸ/6353 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿ ಮೊಟಾರ ಸೈಕಲ ಸವಾರನಾದ ಅಭೀಷೇಕ.ಅಶೋಕ.ಬುಲಬುಲೆ.ವಯಾ-25 ವರ್ಷ ಸಾಃಕರ್ನಾಟಕ ಚೌಕ ಹತ್ತಿರ ಬೆಳಗಾವಿ ಇತನಿಗೆ ಸ್ಥಳದಲ್ಲಿಯೇ ಮರಣ ಪಡಿಸಿ ಮೊಟಾರ ಸೈಕಲ ಹಿಂದೆ ಕುಳಿತ ನಿಕೀಲ.ವಿನೊದ,ಜನಗೌಡ್ರ.ಸಾಃಅಲಾರವಾಡ.ಬೆಳಗಾವಿ ಇತನಿಗೆ ಭಾರಿ ಸ್ವರೂಪದ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಲೀಸ್ ಠಾಣೆಯಲ್ಲಿ ಗುನ್ನಾನಂ 124/2018 ಕಲಂ 279.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಹಿರೇಹರಕುಣಿ ಗ್ರಾಮದ ಬಸ್ ಸ್ಟ್ಯಾಂಡ ಹತ್ತಿರ  ಆರೋಪಿತನಾದ ಮಂಜುನಾಥ ಕೊಪ್ಪದ ಇತನು ಅವಾಚ್ಯ ಬೈದಾಡಿ ಬರ್ರಿ ನೋಡೊಕೊತೇನಿ ಅಂತಾ ಹೋಗಿ ಬರುವ ಜನರಿಗೆ ಒದರಾಡುವುದು, ಚೀರಾಡುವುದು ಮಾಡುತ್ತಾ ಹೊಡೆಯುತ್ತೇನೆ, ಬಡೆಯುತ್ತೇನೆ ಅಂತಾ ಅವರ ಮೈಮೇಲೆ ಏರಿ ಹೋಗುವುದು ಮಾಡುತ್ತಿದ್ದು ಸದರಿಯವನಿಗೆ ಹಿಗೇಯೇ ಬಿಟ್ಟಲ್ಲಿ ಯಾರದಾದರೂ ಮೇಲೆ ಎರಗಿ ಹೋಡೆ ಬಡೆ ಮಾಡಿ ರಕ್ತ ಪಾತ ಮಾಡಿ ಸಾರ್ವಜನಿಕ ಶಾಂತತ ಭಂಗವನ್ನುಂಟು ಮಾಡುವುದಲ್ಲದೇ ಯಾವುದಾದರೂ ಸಂಜ್ಞೆಯ ಅಪರಾಧವೆಸಗಿ ಘೋರ ಸ್ವರೂಪದ ಗುನ್ನೆ ಮಾಡುವ ಸಾಧ್ಯತೆಗಳು ಇದ್ದುದ್ದರಿಂದ ಸದರಿಯವನ ಮೇಲೆಗುನ್ನಾನಂ 120/2018 ಕಲಂ110(ಇ)(ಜಿ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.