ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, August 10, 2018

CRIME INCIDENTS 10-08-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:10-08-2018 ರಂದು ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಮೇಲೆ ಶಿರೂರ ಗ್ರಾಮದ ಬೆಣ್ಣೆ ಹಳ್ಳದ ಆರೋಪಿತನಾದ ಶಿವಪ್ಪ ಹನಮಂತಪ್ಪ ಸುಣಗಾರ. ವಯಾ: 24 ವರ್ಷ, ಸಾ: ಶಿರೂರ, ತಾ: ಕುಂದಗೋಳ ಈತನು ನಂಬರ ಬರೆಸದೇ ಇರುವ ಟಿ.ವ್ಹಿ.ಎಸ್ ಸ್ಟಾರ ಸಿಟಿ ಮೋಟಾರ ಸೈಕಲ್ ನ್ನು ಕುಂದಗೋಳ ಕಡೆಯಿಂದ ಶಿರೂರ ಕಡೆಗೆ ಅತೀ ಜೋರಿನಿಂದ ವ ಅಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ ತನ್ನ ಮುಂದೆ ಇದ್ದ 108 ಅಂಬುಲೆನ್ಸ ವಾಹನವನ್ನು ಓವರಟೆಕ ಮಾಡಿ ಶಿರೂರ ಕಡೆಯಿಂದ ಕುಂದಗೋಳ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಸಿ ಬಸ್ ನಂ ಕೆ.ಎ-25/ಎಫ್-2632 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ತನಗೆ ಮಾರಣಾಂತಿಕ ಗಾಯಪೆಟ್ಟುಗಳಾಗುವಂತೆ ಮಾಡಿಕೊಂಡಿದ್ದು, ಉಪಚಾರಕ್ಕೆ ಕುಂದಗೋಳ ಸರಕಾರಿ ದವಾಖಾನೆಗೆ ಕರೆದುಕೊಂಡು ಹೋದಾಗ ಮುಂಜಾನೆ 8-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 123/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ-ಕಾರವಾರ ರಸ್ತೆಯ ಗಲಗಿನಕಟ್ಟಿ ಕ್ರಾಸ್ ಹತ್ತಿರ ರಸ್ತೆ ಮೇಲೆ ಆರೋಪಿತನು ತಾನು ನಡೆಸುತ್ತಿದ್ದ ಮೊಟಾರ ಸೈಕಲ್ಲ ನಂ KA63/TC 003941 ನೇದ್ದನ್ನು ಕಲಘಟಗಿ ಕಡೆಯಿಂದ ಸಾತೋಶಹೀದ ಕಡೆಗೆ  ಅತಿಜೋರು ಅವಿಚಾರ ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ  ವೇಗದ ನಿಯಂತ್ರಣ ಮಾಡಲಾಗದೇ ಸ್ಕಿಡ್ ಮಾಡಿ ಕೆಡವಿ ಅಪಘಾತ ಪಡಿಸಿ ಮೊಟಾರ ಸೈಕಲ್ಲ ಮೇಲೆ ಹಿಂದೆ ಕುಳಿತ ಪಿರ್ಯಾದಿಯ ತಮ್ಮನ ಮಗ ವಾಜೀದ ಈತನಿಗೆ ಸಾದಾ ಗಾಯಪಡಿಸಿದ್ದಲ್ಲದೇ ತಾನೂ ತನ್ನ  ತಲೆಗೆ ಬಲವಾದ ಗಾಯಪಡಿಸಿಕೊಂಡು ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ  ಉಪಚಾರಕ್ಕೆ ದಾಖಲಿಸಿದಾಗ ಉಪಚಾರ ಪಲಿಸದೇ ದಿ:10-08-2018 ರಂದು 06-00 ಗಂಟೆಗೆ ಮರಣಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 208/2018 ಕಲಂ 279.337.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಯರಗುಪ್ಪಿ ಗ್ರಾಮದ  ಮೃತ ಗೀತಾ ಕೋಂ ಗದಿಗೆಪ್ಪ ಹೊಟಗಿ @ ಅಲ್ಲಾಪೂರ, ವಯಾಃ 29 ವರ್ಷ, ಇವಳು ತನಗಿದ್ದ ಹೊಟ್ಟೆ ನೋವಿನ ಬಾದೇ ತಾಳಲಾರದೇ ನಿನ್ನೆ ದಿವಸ ದಿನಾಂಕಃ 09-08-2018 ರಂದು ಸಾಯಂಕಾಲ 6-45 ಗಂಟೆ ಸುಮಾರಿಗೆ ಹಿರೇಬೂದಿಹಾಳ ಗ್ರಾಮದಲ್ಲಿ ತನ್ನ ಮನೆಯ ಜಗುಲಿಯ ಹತ್ತಿರ ತನ್ನಷ್ಟಕ್ಕೆ ತಾನೇ ಜೀವನದಲ್ಲಿ ಜಿಗುಪ್ಸೆ ಹೊಂದಿ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾಳೆ ವಿನಃ ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 11/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರನವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ದೇವಿಕೊಪ್ಪ ಗ್ರಾಮದ ಮೃತ ಪವಿತ್ರಾ ತಂದೆ ಲಕ್ಷ್ಮಣ ಪಾಯಕ್ಕನವರ ವಯಾ: 21 ವರ್ಷ, ಸಾ: ದೇವಿಕೊಪ್ಪ ಇವಳು ದಿ; 04/08/2018 ರಂದು ಮದ್ಯಾಹ್ನ 12.00 ಗಂಟೆ ಸುಮಾರಿಗೆ ತಮ್ಮ ಹಿತ್ತಲ ಮನೆಯ ಒಲೆಯಲ್ಲಿ ಕಟ್ಟಿಗೆ ಹಾಕಿ ನೀರು ಕಾಯಿಸಲು ಬೆಂಕಿ ಹಚ್ಚಲು ಹೋದಾಗ ಒಲೆಯಲ್ಲಿಯ ಕಟ್ಟಿಗೆಗೆ ಬೆಂಕಿ ಹತ್ತಲಾರದ್ದರಿಂದ ಒಲೆಯಲ್ಲಿ ಸೀಮೆ ಎಣ್ಣೆ ಹಾಕಿ ಕಡ್ಡಿ ಕೊರೆದು ಬೆಂಕಿ ಹಚ್ಚಿದಾಗ ಬೆಂಕಿಯ ಜ್ವಾಲೆಯು ಒಮ್ಮೆಲೆ ಭಗ್ ಅಂತ ಮೇಲೆ ಎದ್ದು ಅವಳು ಉಟ್ಟಿದ್ದ ಚೂಡಿದಾರಕ್ಕೆ ಬೆಂಕಿ ಹತ್ತಿ ಮುಖ ಮೈ ಕೈಕಾಲುಗಳಿಗೆ  ಸುಟ್ಟ ಗಾಯಗಳನ್ನು ಮಾಡಿಕೊಂಡವಳಿಗೆ ಉಪಚಾರ ಕುರಿತು ಕಿಮ್ಸ್ ಹುಬ್ಬಳ್ಳಿಗೆ ದಾಖಲು ಆದವಳು ಉಪಚಾರದಿಂದ ಗುಣಹೊಂದದೇ ದಿನಾಂಕ: 10/08/2018 ರಂದು 06.00 ಎ.ಎಮ್ ಕ್ಕೆ ಮೃತಪಟ್ಟಿದ್ದು ಅವಳ ಮರಣದಲ್ಲಿ ಯಾರ ಮೇಲೆ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತಳ ಅಣ್ಣ ಫಿಯಾಱಧೀ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 43/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ