ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, August 12, 2018

CRIME INCIDENTS 12-08-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:12-08-2018 ರಂದು ವರದಿಯಾದ ಪ್ರಕರಣಗಳು

1.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ಅಳ್ನಾವರ ಗ್ರಾಮದ  ಆರೋಪಿತನಾದ ಶಿವಾಜಿ ತಂದೆ ರಾಮು ಗುಂಡುಪಕರ, ವಯಾ 60 ಉದ್ಯೋಗ ಒಕ್ಕಲುತನ ಜಾತಿ ಹಿಂದೂ ಮರಾಠಾ ಸಾ ಃ ಮಾಸ್ಕೆನಟ್ಟಿ ಗ್ರಾಮ ತಾ ಃ ಖಾನಾಪೂರ ಜಿಲ್ಲಾ ಬೆಳಗಾವಿ ಅಂಬುವವನು ಅಳ್ನಾವರದ ಕೆ. ಎಸ್. ಆರ್. ಟಿ. ಸಿ. ಬಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತುಕೊಂಡು ತನ್ನ ಸ್ವಂತ ಲಾಭಕ್ಕಾಗಿ ಯಾವುದೇ ಪರವಾನಿಗೆ ಇಲ್ಲದೇ ಒಂದು ಕೈ ಚೀಲದಲ್ಲಿ ಸುಮಾರು 1742/- ರೂ. ಕಿಮ್ಮತ್ತಿನ 90  ಎಂ.ಎಲ್.ದ ಒಟ್ಟು 59 ಹೈ ವರ್ಡಸ್ ಚಿಯರ್ಸ ವಿಸ್ಕಿ ತುಂಬಿದ ಟೆಟ್ರಾ ಪಾಕೇಟುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ  ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದ ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 75/2018 ಕಲಂ 32.34 ಅಬಕಾರಿ  ಕಾಯ್ದೆ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.