ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, September 28, 2018

CRIME INCIDENTS 28-09-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:28-09-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯ:ತಿಲಾಱಪುರ ಗ್ರಾಮದ ಶ್ರೀನಿವಾಸ ವಿಠ್ಠಲ ಕಲಹಾಳ ವಯಾ: 42 ವರ್ಷ ಸಾ:ತಿರ್ಲಾಪೂರ ಈತನು ಹುಬ್ಬಳ್ಳಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೂ ಮನೆಗೆ ಬಾರದೆ ಕಾಣೆಯಾಗಿದ್ದು ಎಲ್ಲ ಕಡೆ ಹುಡಕಲಾಗಿ ಸಿಕ್ಕಿರುವುದಿಲ್ಲ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 155/2018 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದುಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ನೂಲ್ವಿ ಗ್ರಾಮದ ಕುಂಬಾರ ಓನಿಯಲ್ಲಿರುವ ಶ್ರೀ ವೀರಭದ್ರೇಶ್ವರ ಗುಡಿಯ ಮುಂದೆ ಸಾರ್ವಜನಿಕ ಬಯಲು ಜಾಗೆಯಲ್ಲಿ . ಆರೋಪಿತರಾದ1. ಶಶಿಧರ ಪಾಟೀಲ  2.ಶಿವು ಪುರಣ್ಣವರ ಇನ್ನೂ 04 ಜನರು ಕೊಡಿಕೊಂಡು ತಮ್ಮ ತಮ್ಮ ಪಾಯ್ದೇಗೊಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ ಬಹಾರ ಅಂಬುವ ಜೂಜಾಟವನ್ನು ಆಡುತ್ತಿದ್ದಾಗ, ಆರೋಪಿತರ ಪೈಕಿ ಮೂರು ಜನ ಸಿಕ್ಕು ಉಳಿದವರು ಓಡಿ ಹೋಗಿದ್ದು ,ಅವರಿಂದ ರೂ  2580/- ರೂ ಹಾಗೂ ಒಟ್ಟು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು  ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 257/2018 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಯಲಿವಾಳ ಗ್ರಾಮದ ಮನೆ ಮುಂದಿನ ಮೇಲ್ಚಾವಣಿ ಕಟ್ಟೆಯಲ್ಲಿ ಮೇಲಿನ ಜಂತಿಗೆ ಇದರದಲ್ಲಿ ಮೃತ ನಾಗನಗೌಡ ವೀರನಗೌಡ ನೀರಲಗಿ. ವಯಾ: 38 ವರ್ಷ, ಸಾ: ಯಲಿವಾಳ, ತಾ: ಕುಂದಗೋಳ ಈತನು ತನಗೆ 2 ವರ್ಷದಲ್ಲಿ ಎರಡು ಬಾರಿ ಆಪರೇಶನ್ ಆಗಿ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲದ್ದರಿಂದ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಇದರ ಹೊರತಾಗಿ ಅವನ ಮರಣದಲ್ಲಿ ಬೇರೆ ಯಾವ ಮತ್ತು ಯಾರ ಮೇಲೆಯೂ ಸಂಶಯ ಇರುವುದಿಲ್ಲ ಅಂತಾ ಮೃತನ ತಂದೆ  ಫಿಯಾಱಧಿ ನೀಡಿದ್ದು  ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 38/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Thursday, September 27, 2018

CRIME INCIDENTS 27-09-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-09-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದ ಗ್ರಾಮದ  ಹತ್ತಿರ ಸುಮಾರಿಗೆ ಕಾರ್ ನಂ:ಕೆಎ-63 ಎಮ್ -0113 ನೇದ್ದರ ಚಾಲಕ ಸಿಂದನೂರಿನಿಂದ ಹುಬ್ಬಳ್ಳಿಗೆ ಬರುವಾಗ ಶೆಲವಡಿ ರಸ್ತೆಯಲ್ಲಿ ನವಲಗುಂದದಿಂಧ 6 ಕಿಮೀ ಅಂತರದಲ್ಲಿ ಕಾರನ ಟೈಯರ್ ಬಸ್ಟ ಆಗಿ ಪೂಲಗೆ ಡಿಕ್ಕಿ ಮಾಡಿ ಕಾರನ ಮುಂಬಾಗ ಪೂರ್ಣ ಜಖಂ ಆಗಿರುತ್ತದೆ. ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 154/2018 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಹಿರೇನರ್ತಿ ಗ್ರಾಮದ ಚಿದಾನಂದ ಬಡಿಗೇರ ಇವರ ಮನೆ ಹತ್ತಿರ ಇದರಲ್ಲಿ ಮೃತಳಾದ ದ್ಯಾಮವ್ವ ಕೋಂ ಜ್ಯೋತಿನಾಥ ಮಧುರಕರ. ವಯಾ: 40 ವರ್ಷ, ಸಾ: ಹೆಬ್ಬಳ್ಳಿ, ತಾ: ಕುಂದಗೋಳ ಇವಳು ಸರಾಯಿ ಕುಡಿದು ಅಸ್ವಸ್ಥಳಾಗಿದ್ದು ಅವಳನ್ನು ಉಪಚಾರಕ್ಕೆ ಕುಂದಗೋಳ ಸರಕಾರಿ ದವಾಖಾನೆಯಲ್ಲಿ ದಾಖಲ ಮಾಡಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲ ಮಾಡಿದವಳು ಉಪಚಾರ ಫಲಿಸದೇ ಮೃತಪಟ್ಟಿದ್ದು ಇರುತ್ತದೆ. ಇದರ ಹೊರತಾಗಿ ಅವಳ ಮರಣದಲ್ಲಿ ಬೇರೆ ಯಾವ ಮತ್ತು ಯಾರ ಮೇಲೆಯೂ ಸಂಶಯ ಇರುವುದಿಲ್ಲ ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 37/2018 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, September 26, 2018

CRIME INCIDENTS 26-09-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:26-09-2018 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರ ಧಾರವಾಡ ರಸ್ತೆಯ ಬದಿಯಲ್ಲಿರುವ ಓಣಕಿ ಮಡ್ಡಿ ಕ್ರಾಸ್ ದಲ್ಲಿ ಒಳಗಿನ ಸಾರ್ವಜನಿಕ ರಸ್ತೆಯ ಮೇಲೆ ಇದರಲ್ಲಿಯ ಆಪಾಧಿತರಾದ 1) ವಿಠಲ ತಂದೆ ಈರಪ್ಪ ಬೆಟಗೇರಿ 2) ಪುಂಡಲೀಕ ತಂದೆ ಪರಶುರಾಮ ಪಾರ್ಧಿ 3) ವಿಷ್ಣು ತಂದೆ ನಾರಾಯಣ ಪಾಲಕರ 4) ವಿನೋದ ತಂದೆ ಲಕ್ಷ್ಮಣ ಕಲ್ಯಾಣಕರ 5) ರಾಮಚಂದ್ರ ತಂದೆ ಅರ್ಜುನ ಕಲ್ಯಾಣಕರ 6) ವಿನೋದ ತಂದೆ ವಿಠಲ್ ಜಾದವ 7) ವಿಷ್ಣು ತಂದೆ ಫಕ್ಕೀರ ಸಾವಂತ 8) ವಿಪಿನಕುಮಾರ ತಂದೆ ಅಲಬನ್ ಫರ್ನಾಂಡಿಸ್ ಸಾಃ ಎಲ್ಲರೂ ಅಳ್ನಾವರ 9) ಜಯರಾಮ ತಂದೆ ಶಂಕರ ಮಿರಾಶಿ ಸಾಃ ದುಸಗಿ ತಾಃ ಹಳಿಯಾಳ 10) ಯುನುಸ ತಂದೆ ಅಬ್ದಲಗಣಿ ತಾಳಿಕೋಟಿ 11) ಮಿನಿನ್ ತಂದೆ ಪಾಜಿಲ್ ಫರ್ನಾಂಡಿಸ್ 12) ಕಲ್ಲನಗೌಡ ಪರ್ವತಗೌಡ ಪಾಟೀಲ ಸಾಃ ಎಲ್ಲರೂ ಅಳ್ನಾವರ ತಾಃ ಅಳ್ನಾವರ ಜಿಃ ಧಾರವಾಡ ಇವರುಗಳು  ತಮ್ಮ ತಮ್ಮ ಪಾಯ್ದೇಗೋಸ್ಕರ 52 ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬುವ ಜೂಜಾಟ ಆಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಅವರಿಂದ ರೂ 4230-00 ರೂ ಗಳನ್ನುವಶಪಡಿಸಿಕೊಂಡಿದ್ದು ಇರುತ್ತದೆ.

2. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಬೇಲೂರ ಗ್ರಾಮದ ಬೆಳಗಾವಿ-ಧಾರವಾಡ ಪಿ.ಬಿ ರಸ್ತೆಯ ಮೇಲೆ ಬೇಲೂರ ಕ್ರಾಸ ಹತ್ತಿರ ದಿನಾಂಕಃ 25-09-2018 ರಂದು 16-00 ಅವರ್ಸಕ್ಕೆ ಡಸ್ಟರ ಕಾರ ನಂಬರಃ ಎಮ್ಎಚ್-10-ಬಿಎಮ್-5175 ನೇದ್ದರ ಚಾಲಕನು ತನ್ನ ಕಾರನ್ನು ಬೆಳಗಾವಿ ಕಡೆಯಿಂದಾ ಧಾರವಾಡ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಬೇಲೂರ ಕ್ರಾಸ ಇಳಿಜಾರಿನ ರಸ್ತೆ ತಿರುವಿನಲ್ಲಿ ಕಾರ ಕಂಟ್ರೋಲ ಆಗದೆ ಪಲ್ಟಿ ಮಾಡಿ ಅಪಘಾತಪಡಿಸಿ ಕಾರಿನಲ್ಲಿದ್ದ ಒಬ್ಬನಿಗೆ ಸಾದಾ ಗಾಯಪಡಿಸಿದ್ದಲ್ಲದೆ ತಾನು ಸಹಾ ಸಾದಾ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 149/2018 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಧಾರವಡ ಬೈಪಾಸ ರಸ್ತೆ ಯರಿಕೊಪ್ಪ ಗ್ರಾಮದ ಬ್ರಿಡ್ಜ ಹತ್ತಿರ ಲಾರಿ ನಂ ಕೆಎ 13 ಬಿ 8417 ನೇದ್ದರ ಚಾಲಕ ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಅತೀವೇಗವಾಗಿ ಅಜಾಗರು ಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಲಾರಿಯ ವೇಗ ನಿಯಂತ್ರಣ ಮಾಡಲಾಗದೇ ಇದೇ ಮಾರ್ಗದಲ್ಲಿ ಧಾರವಾಡ ಕಡೆಗೆ ಲಾರಿಯ ಮುಂದೆ ಹೋಗುತ್ತಿದ್ದ ಕಾರ ನಂ ಕೆಎ 02 ಎಈ 8612 ನೇದ್ದಕ್ಕೆ ಡಿಕ್ಕಿ ಮಾಡಿ ಮುಂದೆ ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಲಾರಿ ನಂ ಕೆಎ 25 ಡಿ 7775 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಅಪಘಾತದಲ್ಲಿ  ಲಾರಿ ನಂ ಕೆಎ 25 ಡಿ 7775 ನೇದ್ದರ ಚಾಲಕನಿಗೆ ಭಾರಿ ಗಾಯ ಪಡಿಸಿ  ತನ್ನ ಲಾರಿ ನಂ ಕೆಎ 13 ಬಿ 8417 ನೇದ್ದರಲ್ಲಿದ್ದ ಕ್ಲೀಣರನಿಗೆ ಸಾದಾ ಗಾಯ ಪಡಿಸಿದ್ದಲ್ಲದೆ ಚಾಲಕನಾದ ಮಹ್ಮದ ರಫೀಕ ತಂದೆ ಮಿಯಾಸಾಬ ಕೊಟ್ಟೆಣ್ಣನವರ ವಯಾಃ 30 ವರ್ಷ ಸಾಃದೇವಗಿರಿ ತಾಃಜಿಲ್ಲಾ ಹಾವೇರಿ ತಾನು ಸ್ಥಳದಲ್ಲಿ ಮೃತ ಪಟ್ಟಿದ್ದು ಮೂರು ವಾಹನಗಳನ್ನು ಜಖಂ ಗೋಳಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 231/2018 ಕಲಂ 279.337.304(ಎ)338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.Monday, September 24, 2018

CRIME INCIDENTS


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:24-09-2018 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ನಿಗೇರಿ ಗ್ರಾಮದ ಹತ್ತಿರ ಆರೋಪಿತನಾದ ನಾಗರಾಜ ನಾಗರಾಳ ಇತನು ಚಲಾಯಿಸುತ್ತಿದ್ದ ಹುಂಡೈ ಐ20 ಕಾರ ನಂಬರ ಕೆಎ-26/ಎಮ್-9690 ನೇದ್ದನ್ನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಕಾರಿನ ವೇಗದ ನಿಯಂತ್ರಣ ಮಾಡಲಾಗದೇ ಒಮ್ಮಿಂದೊಮ್ಮಲೇ ಬ್ರೆ ಹಾಕಿ ಕಾರನ್ನು ಪಲ್ಟಿ ಮಾಡಿ ಅಪಘಾತ ಪಡಿಸಿ ಕಾರನ್ನು ಜಖಂಗೊಳಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 97/2018 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, September 21, 2018

CRIME INCIDENTS 21-09-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:21-09-2018 ರಂದು ವರದಿಯಾದ ಪ್ರಕರಣಗಳು

1.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರ ಧಾರವಾಡ ರಸ್ತೆಯ ಮೇಲೆ ಕಡಬಗಟ್ಟಿ ಗ್ರಾಮದ ಸಮೀಪ ರಸ್ತೆಯ ಮೇಲೆ (ಮೃತ ) ಹುಲಗಪ್ಪ ತಂದೆ ಹನಮಂತ ನೀಲಗುಂದ, ವಯಾ 20 ಜಾತಿ ಹಿಂದೂ ವಡ್ಡರ ವೃತ್ತಿ ಗೌಂಡಿ ಕೆಲಸ ಸಾ ಃ ಮುಗದ ತಾ ಃ ಧಾರವಾಡ ಅವನು ತನ್ನ ಮೋಟಾರ ಸೈಕಲ್ ನಂ. ಕೆಎ - 25 / ಇಝಡ್ - 8618 ನೇದ್ದರಲ್ಲಿ ಅಳ್ನಾವರ ಕಡೆಯಿಂದ ಧಾರವಾಡ ಕಡೆಗೆ ಹೋಗುವಾಗ ತಾನು ನಡೆಸುತ್ತಿದ್ದ ಮೋಟಾರ ಸೈಕಲನ್ನು ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಸ್ಥಳದಲ್ಲಿಯೇ ಮರಣ ಹೊಂದಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 89/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕಮಡೊಳ್ಳಿ ಗ್ರಾಮದ ಚೌಡಮ್ಮನ ಗುಡಿಯ ಹಿಂಭಾಗ ಖುಲ್ಲಾ ಜಾಗೆಯಲ್ಲಿ ಆರೋಪಿತರೆಲ್ಲರೂ ಕೊಡಿಕೊಂಡು  ತಮ್ಮ ತಮ್ಮ ಫಾಯ್ದೆಗೋಸ್ಕರ ಇಸ್ಪೀಟ ಎಲೆಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿ ಅಂದರ-ಬಾಹರ ಅಂಬುವ ಇಸ್ಪೀಟ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 3630-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 144/2018 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಸುಳ್ಳ ಗ್ರಾಮದ ಸಿದ್ದರಾಮಸ್ವಾಮಿ ಮಠದ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಆರೋಪಿತರೆಲ್ಲೂ ಕೊಡಿಕೊಂಡು  ತಮ್ಮ ಪಾಯ್ದೆಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ  ರೋಖ ಹಣ 2570 ರೂಪಾಯಿ ಹಾಗೂ 52 ಇಸ್ಪೀಟ್ ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 247/2018 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, September 19, 2018

CRIME INCIDENTS 19-09-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:19-09-2018 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಮೊರಬ ಗ್ರಾಮದ ಸುರೇಶ ತಂದೆ ಶಿವಲಿಂಗಪ್ಪ ಬಂಕಾಪೂರ 34 ವರ್ಷ ಸಾ!! ಮೊರಬ ಈತನು ದಿನಾಂಕ: 16-10-2017 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನವಲಗುಂದಕ್ಕೆ ಕೆಲಸಕ್ಕೆ ಹೋಗಿ ಬರುತ್ತೇನೆ ಅಂತ ಮನೆಯಲ್ಲಿ ಹೇಳಿ ಹೋದವನು ಇಲ್ಲಿಯವರೆಗೆ ವಾಪಸ್ ಮನೆಗೆ ಬಂದಿರುವದಿಲ್ಲ  ಎಲ್ಲಾ ಕಡೆ ಹುಡಕಲಾಗಿ ಸಿಕ್ಕಿರುವುದಿಲ್ಲ ಅಂತಾ ಪಿರ್ಯಾದಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 153/2018 ಕಲಂ ಮನುಷ್ಯ ಕಾಣೆ ಪ್ರಕಣದಲ್ಲಿ ಪ್ರಕಣವನ್ನು ದಾಖಲಸಿದ್ದು ಇರುತ್ತದೆ

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹಳ್ಯಾಳ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯ ಹತ್ತಿರ, ಬಯಲು ಜಾಗೆಯಲ್ಲಿ, ಆರೋಪಿತರಾದ 1.ರವಿಂದ್ರಪ್ಪಾ ಈರಪ್ಪಣ್ಣವರ ಹಾಗೂ ಇನ್ನೂ 14 ಜನರು ಕೂಡಿಕೊಂಡು ತಮ್ಮ ತಮ್ಮ ಫಾಯ್ದೇಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ, ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾರಹ ಎನ್ನುವ ಇಸ್ಪೆಟ್ ಜೂಜಾಟವನ್ನು ಆಡುತ್ತಿದ್ದಾಗ, 1] ರೋಖ ರಕಂ 6700/- ರೂ. 2] ಒಟ್ಟು 52 ಇಸ್ಪೆಟ್ ಎಲೆಗಳು ಸಿಕ್ಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 240/2018 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಳಗಲಿ ಗ್ರಾಮದ, ಸಮುದಾಯ ಭವನದ ಎದುರಿಗೆ, ಬಯಲು ಜಾಗೆಯಲ್ಲಿ,1.ಈರಣ್ಣಾ ಹಡಪದ  ಹಾಗೂ ಇನ್ನೂ 06 ಜನರು ಕೊಡಿಕೊಂಡು ತಮ್ಮ ತಮ್ಮ ಫಾಯ್ದೇಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ, ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು  ಅವರಿಂದ ರೂ. 3110/- ರೂ. 2] ಒಟ್ಟು 52 ಸಿಕ್ಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 241/2018 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮಾವನೂರ ಗ್ರಾಮದ, ಕಾಮಣ್ಣನ ಬೂದಿ ಹತ್ತಿರ, ಬಯಲು ಜಾಗೆಯಲ್ಲಿ, ಆರೋಪಿತರಾದ 1.ಶಿವಕಲ್ಲಪ್ಪಾ ಸುಳ್ಳದ ಹಾಗೂ ಇನ್ನೂ 05 ಜನರು ಕೊಡಿಕೊಂಡು ತಮ್ಮ ತಮ್ಮ ಫಾಯ್ದೇಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ, ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಇಸ್ಪೆಟ್ ಜೂಜಾಟವನ್ನು ಆಡುತ್ತಿದ್ದಾಗ, ರೋಖ ರಕಂ 3300/- ರೂ. 2] ಒಟ್ಟು 52 ಇಸ್ಪೆಟ್ ಎಲೆಗಳು ಸಿಕ್ಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 242/2018 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Tuesday, September 18, 2018

CRIME INCIDENTS 18-09-2018

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-09-2018 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಸುಮಾರಿಗೆ ಅಳ್ನಾವರ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ  ಆರೋಪಿತನಾದ 1]  ರವೀಂದ್ರ ತಂದೆ ಸುಬ್ಬಣ್ಣಾ ಬಿಳಿಚೋಡ,  ವಯಾ 53 ಜಾತಿ ದಿಗಂಬರ ಜೈನ್   ಉದ್ಯೋಗ  ವ್ಯಾಪಾರ  ಸಾ ಃ ಅಳ್ನಾವರ  ಇಂದಿರಾ ನಗರ ತಾ ಅಳ್ನಾವರ ಜಿ ಃ ಧಾರವಾಡ ಇವನು  ತನ್ನ ಫಾಯದೇಗೋಸ್ಕರ ಒಂದು ರೂಪಾಯಿಗೆ 80 ರೂಪಾಯಿಗಳು ಕೊಡುತ್ತೇನೆ ಅಂತಾ ಹೇಳುತ್ತಾ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಓ. ಸಿ. ಮಟಕಾ ಎಂಟ ಜೂಜಾಟವನ್ನು ಆಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು  ಅಲ್ಲದೇ ತಾನು ಬರೆದ  ಓ. ಸಿ. ಚೀಟಿಯನ್ನು ಯಲ್ಲಪ್ಪಾ ಮೇತ್ರಿ ಸಾ ಃ ಮದನಳ್ಳಿ ತಾ ಃ ಹಳಿಯಾಳ ಇವನಿಗೆ ಕೊಡುವದಾಗಿ ತಿಳಿಸಿದ್ದು ಸದರಿಯವನಿಂದ ರೋಕ ರಕಂ 400/- ರೂ. ಗಳು ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಓ.ಸಿ. ಚೀಟಿ, ಒಂದು ಬಾಲ್ ಪೆನ್ ವಶಪಡಿಸಿಕೊಂಡು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 87/2018 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಸುಮಾರಿಗೆ ಪಿಬಿ ರಸ್ತೆ ಮೇಲೆ, ನೂಲ್ವಿ ಕ್ರಾಸ್ ಹತ್ತಿರ,ಕಾರ ನಂಬರಃ ಕೆಎ/27/ಎನ್/4049 ನೇದ್ದರ ಚಾಲಕ ಮಹೇಶ ಅಶೋಕ ಯಾದಗುಡೆ ಸಾಃ ಘಟಪ್ರಭಾ ಹಾಲಿ ಶಿಗ್ಗಾಂವ ಇವನು ತನ್ನ ಕಾರನ್ನು ಶಿಗ್ಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗ ವ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ ನಡೆದುಕೊಂಡು ರಸ್ತೆ ದಾಟುತ್ತಿದ್ದ ಪರಶುರಾಮ ಹನಮಂತಪ್ಪ ಲಮಾಣಿ . ಸಾಃ ಕರಗಿನಕೊಪ್ಪ ತಾಃ ಮುಂಡಗೋಡ ಇವನಿಗೆ ಅಪಘಾತ ಪಡಿಸಿದಾಗ, ಸದರಿ ಅಪಘಾತ ಪಡಿಸಿದ ಕಾರಿನ ಹಿಂದಿನಿಂದ ಬರುತ್ತಿದ್ದ ಲಾರಿ ನಂಬರಃ ಟಿಎನ್/34/ಡಬ್ಲೂ/ 5370 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀವೇಗ ವ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದವನೇ ಮೊದಲು ಕಾರಿಗೆ ಡಿಕ್ಕಿ ಮಾಡಿ ಅಲ್ಲದೇ ಮೊದಲೇ ಕಾರ ಅಪಘಾತ ಪಡಿಸಿದ ಕಾಲಿನ ಮೇಲೆ ಗಾಲಿ ಹಾಯಿಸಿ ಭಾರಿ ಗಾಯಗೊಳಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 238/2018 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Sunday, September 16, 2018

CRIME INCIDENTS 16-09-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-09-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ತಬಕದಹೊನ್ನಳ್ಳಿ ಗ್ರಾಮದ ಆರೋಫಿತರಾದ ಈಶ್ವರ ಉಪ್ಪಾರ ಹಾಗೂ ಇನ್ನೂ 03 ಜನರು ಕೊಡಿಕೊಂಡು ನಿಜಗುಣಪ್ಪಾ ಕಿರೆಸೂರ ಇವರಿಗೆ ತಬಕದಹೊನ್ನಳ್ಳಿ ಗ್ರಾಮದ ಆಸ್ತಿ ನಂ 371/2 ನೇದ್ದಕ್ಕೆ ಸಂಭಂದಿಸಿದಂತೆ ತಂಟೆ ಇದ್ದು ಈ ತಂಟೆಯು ಮಾನ್ಯ ನ್ಯಾಯಾಲಯದ ಅಸಲ ದಾವೆ ನಂ 60/2015 ಇದ್ದರೂ ಸಹಾ ಆರೋಫಿತರು ಪಿರ್ಯಾಧಿಗೆ ಮೋ ಪೋನ್ ಮಾಡಿ ಅವಾಚ್ಯ ಬೈದಾಡಿ ನಮ್ಮ ಅತ್ತಿಗೆ ಹೆಸರನ್ನು ಏಕೆ ನ್ಯಾಯಾಲಯದಲ್ಲಿ ಕೊಟ್ಟಿರುವೆ  ಬೈದಾಡಿದ್ದಲ್ಲದೆ ಎಳೆದಾಡಿ ಬೈದಾಡಿ ಕೈಯಿಂದಾ ಹೊಡಿಬಡಿ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ ಠಾಣೆಯಲ್ಲಿ ಗುನ್ನಾನಂ 222/2018 ಕಲಂ 323.504.306.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, September 15, 2018

CRIME INCIDENTS 15-09-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:15-09-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅಮ್ಮಿನಬಾವಿ ಗ್ರಾಮದ  ಮೃತ ಶಂಭು ತಂದೆ ಗುರುಸಿದ್ದಪ್ಪ ಸಂಕ್ಲಾಪುರ ವಯಾ 45 ವರ್ಷ ಜಾತಿ ಹಿಂದು ಲಿಂಗವಂತ ಉದ್ಯೋಗ ಸಿಮೆಂಟ ವ್ಯಾಪಾರ ಸಾ:ಕೊಪ್ಪಳ ಹಾಲಿ ಮಡಗಾವ ರಾಜ್ಯ ಗೋವಾ ಇತನು ಸಿಮೆಂಟ ವ್ಯಾಪಾರಿ ಇದ್ದು ಕಳೆದ ವರ್ಷದಿಂದ ತನ್ನ ವ್ಯಾಪಾರದಲ್ಲಿ ಲುಕ್ಸಾನಾಗಿದ್ದರಿಂದ ಮಾನಸಿಕ ಮಾಡಿಕೊಂಡು ಅದೆ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ 10-09-2018 ರಂದು ಸಾಯಂಕಾಲ 1700 ಘಂಟೆಯ ಸುಮಾರಿಗೆ ಅಮ್ಮಿನಬಾವಿ ಗ್ರಾಮದ ಬಸ್ಟಾಂಡದಲ್ಲಿ ತನ್ನಷ್ಠಕ್ಕೆ ತಾನೆ ಯಾವುದೂ ವಿಷಕಾರಕ ಎಣ್ಣೆಯನ್ನು ಸೇವಿಸಿ ಅಸ್ವಸ್ಥಗೊಂಡು ಉಪಚಾರ ಕುರಿತು ಎಸ್ ಡಿ ಎಮ್ ಆಸ್ಪತ್ರೆಗೆ ಧಾಖಲ ಮಾಡಿದಾಗ ಉಪಚಾರ ಪಲೀಸದೆ ದಿನಾಂಕ 15-09-2018 ರಂದು ಬೆಳಗಿನ 0700 ಘಂಟೆಗೆ ಮೃತ ಪಟ್ಟಿದ್ದು ಇರುತ್ತದೆ, ಸದರಿ ನನ್ನತಂದೆಯ ಮರಣದಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ಮಗನು ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ  ಪೊಲೀಸ್ ಠಾಣೆಯಲ್ಲಿ ಯುಡಿನಂ 28/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರನವನ್ನು ದಾಖಲಿಸದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಮಿಶ್ರಿಕೋಟಿ ಗ್ರಾಮದ  ಮೃತ ರವಿ ತಂದೆ ಮಾದೇವಪ್ಪ ಶಿರಹಟ್ಟಿ ವಯಾ 25 ವರ್ಷ ಸಾ: ಮಿಶ್ರಿಕೋಟಿ ಇವನು 6-7 ವರ್ಷಗಳಿಂದ ಸರಾಯಿ ಕುಡಿಯುತ್ತಾ ಬಂದಿದ್ದು ಕುಡಿಯಬೇಡಾ ಅಂತಾ ಬುದ್ದಿ ಮಾತು ಹೇಳಿದರೂ ಕೇಳದೇ ದುಡಿದ ಹಣವನ್ನು ಕುಡಿದು ಹಾಳು ಮಾಡುತ್ತಾ ಬಂದವನಿಗೆ ಮುಂದೆ ಮದುವೆ ಮುಂಜಿವೆ ಆಗುವವ ಹೀಗೆ ಮಾಡಿದರೆ ಹೇಗೆ ಅಂತಾ ಬುದ್ದಿ ಹೇಳಿದಾಗ ನಾನು ಮದುವೆಯಾಗುವದಿಲ್ಲ ಜೀವನವನ್ನು ಇಡುವದಿಲ್ಲ ಅಂತಾ ಅನ್ನುತ್ತಾ ಬಂದವನು ಮಿಶ್ತಿಕೋಟಿ ಗ್ರಾಮದ ತನ್ನ ವಾಸದ ಮನೆಯಲ್ಲಿ ಯಾರೂ ಇಲ್ಲದೇ ವೇ:ಳೆ ತನ್ನ ಜೀವನದಲ್ಲಿ ಬೇಸರಗೊಂಡು ತಾನಾಗಿಯೇ ಯಾವುದೋ ವಿಷವನ್ನು ಸೇವನೆ ಮಾಡಿ ತ್ರಾಸು ಮಾಡಿಕೊಳ್ಳುವವನಿಗೆ ಮಿಶ್ರಿಕೋಟಿ ಸರಕಾರಿ ದವಾಖಾನೆಗೆ ತೋರಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲ ಮಾಡಿದವನು ಉಪಚಾರದಿಂದ ಗುಣ ಹೊಂದದೇ ದಿನಾಂಕ 15-09-2018 ರಂದು ಮುಂಜಾನೆ 6-30 ಗಂಟೆಗೆ ಮೃತಪಟ್ಟಿದ್ದು ಅವನ ಮರಣದಲ್ಲಿ ಬೇರೆ ಯಾವ ಮತ್ತು ಯಾರ ಮೇಲೆಯೂ ಯಾವುದೇ ಸಂಶಯ ಇರುವದಿಲ್ಲ ಅಂತಾ ಮೃತನ ತಂದೆ  ಫಿಯಾಱಧೀ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 53/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Friday, September 14, 2018

CRIME INCIDENTS 14-09-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:14-09-2018 ರಂದು ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಶಿರೂರ ರಸ್ತೆಗೆ ಹೊಂದಿಕೊಂಡಿರುವ ಭೀಮ್ಮವ್ವಾ ಅಡೆವಣ್ಣವೆರ  ಇವರ ತಮ್ಮನ ಹೆಸರಿನಲ್ಲಿರುವ ಸರ್ವೇ ನಂ: 365/3 ಕ್ಷೇತ್ರ 7 ಎಕರೆ 06 ಗುಂಟೆ ಜಮೀನದಲ್ಲಿ ಆರೋಪಿತರಾದ 1) ದೇವರಾಜ ದಾನಪ್ಪ ಪಾಯಕ್ಕನವರ, ಮತ್ತು ಅವನ ಮಕ್ಕಳಾದ 2) ಆನಂದ ದೇವರಾಜ ಪಾಯಕ್ಕನವರ, 3) ಅನೀಲ ದೇವರಾಜ ಪಾಯಕ್ಕನವರ, 4) ಸುನೀಲ ದೇವರಾಜ ಪಾಯಕ್ಕನವರ ಸಾ: ಎಲ್ಲರೂ ಕುಂದಗೋಳ ಇವರು ಹಿಂದಿನ ಸಿಟ್ಟಿನಿಂದ ಪಿರ್ಯಾದಿಗೆ ಲುಕ್ಸಾನಪಡಿಸಿ ಕೇಡನ್ನು ಉಂಟು ಮಾಡಬೇಕೆನ್ನುವ ಉದ್ದೇಶದಿಂದ ಸದರ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ, ಕರ್ಕಿಗೆ ಹೊಡೆಯುವ ಎಣ್ಣೆಯನ್ನು ಜಮೀನದಲ್ಲಿ ಬೆಳೆದ ಬಿ.ಟಿ ಹತ್ತಿ, ಮೆಣಸಿನ ಪೀಕಿಗೆ ಸಿಂಪರಣೆ ಮಾಡಿ ಪಿರ್ಯಾದಿಗೆ ಸುಮಾರು 5,00,000/-ರೂ ಗಳಷ್ಟು ಲುಕ್ಸಾನಪಡಿಸಿದ್ದು, ವಿಚಾರಿಸಿದ ಆರೋಪಿತರೆಲ್ಲರೂ  ಹಲಕಟ್ ಬೈದಾಡಿ, ಜೀವ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 138/2018 ಕಲಂ 447.427.504.506.34 ಐಪಿಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಳಗಲಿ ಕ್ರಾಸ್, ಪೂನಾ ಬೆಂಗಳೂರು ರಸ್ತೆ ಮೇಲೆ, ಆರೋಪಿ ಯಾವುದೋ ವಾಹನ ಚಾಲಕನು ತನ್ನ ವಾಹವನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ, ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬಂದು, ಪಿರ್ಯಾದಿಯ ಮಗ ಶ್ರೇಣಿಕ ಬಸಪ್ಪ ಹಂಚಿನಮನಿ ಸಾ. ನಿಟಗಿನಕೊಪ್ಪ ತಾ. ಹಾನಗಲ್ ಇವನು ಛಬ್ಬಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಚಾಲನೆ ಮಾಡಿಕೊಂಡು ಬರುತ್ತಿದ್ದ, ಮೋಟರ ಸೈಕಲ್ ನಂಬರ ಕೆಎ-63-ಸಿ-1543 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಸ್ಥಳದಲ್ಲಿಯೇ ಮರಣಪಡಿಸಿ, ಅಪಘಾತದ ವಿಷಯವನ್ನು ಠಾಣೆಗೆ ತಿಳಿಸದೇ ಹಾಗೆ ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 237/2018 ಕಲಂ 279.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Wednesday, September 12, 2018

CRIME INCIDENTS 12-09-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:12-09-2018 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಯಲ್ಲಾಪೂರ ರಸ್ತೆಯ ಮೇಲೆ ಸಂಗಟಿಕೊಪ್ಪ ಬಸ್ಟ್ಯಾಂಡ ಹತ್ತಿರ  ಆರೋಪಿತರಾದ 1.ಪರುಶುರಾಮ ಇತನ ಸ್ನೇಹಿತನು ಕೂಡಿಕೊಂಡು ರಾಜು ಹಲ್ಲೂರ ಇವರು ಕಲಘಟಗಿ ಕಡೆಯಿಂದಾ ಯಲ್ಲಾಪೂರ ಕಡೆಗೆ ನೆಡೆಸಿಕೊಂಡು ಹೊರಟ KSRTC ಬಸ್ ನಂ KA-31-F-1519 ನೇದ್ದನ್ನು ಅಡ್ಡಗಟ್ಟಿ ತರುಬಿ ನಿಲ್ಲಿಸಿ ಗ್ಲಾಸಿಗೆ ಕಲ್ಲು ಒಗೆದು ಮುಂದಿನ ದೊಡ್ಡ ಗ್ಲಾಸನ್ನು ಲುಕ್ಷಾಣಪಡಿಸಿ ಪಿರ್ಯಾದಿಗೆ ಏನಲೆ ಅವಾಚ್ಯ ಬೈದಾಡಿ ಸಂಗಟಿಕೊಪ್ಪಕ್ಕೆ ನಿಲ್ಲಿಸದೆ ಹಾಗೆ ಹೋಗುತ್ತಿದ್ದಿಯಾ ಅಂತಾ ಬೈದಾಡಿ ಕೈಯಿಂದಾ ಹೊಡಿಬಡಿ ಮಾಡಿ  ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಸುಮಾರು 15,000/- ರೂ ಕಿಮ್ಮತ್ತಿನ ಸಾರ್ವಜನಿಕ ಸ್ವತ್ತನ್ನು ಲುಕ್ಷಾಣಪಡಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 219/2018 ಕಲಂ IPC 1860 (U/s-323,341,353,427,504,34); PREV. OF DAMAGE TO PUBLIC PROPERTY ACT, 1984 (U/s-3) ನೇದ್ದರಲ್ಲ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಶೇರೆವಾಡ ಕ್ರಾಸ್ ಹತ್ತಿರ ಪಿ.ಬಿ ರಸ್ತೆ ಮೇಲೆ ಇದರಲ್ಲಿಅನ್ನಪ್ಪಾ ಕುರಿ ಇತನು ನಡೆಯಿಸಿಕೊಂಡು ಹೋಗುತ್ತಿರುವ ಮೋಟರ ಸೈಕಲ್ ನಂಬರ ಕೆಎ-25/ಇ.ವ್ಹಿ-5821 ನೇದ್ದಕ್ಕೆ ಇದರಲ್ಲಿಯ ಆರೋಪಿತನಾದ ಆನಂದ ಗುರುಶಿದ್ದಪ್ಪ ಹುಬ್ಬಳ್ಳಿ ಸಾ. ಗಂಜಿಗಟ್ಟಿ ಇತನು ತಾನು ನಡೆಸುತ್ತಿದ್ದ ಕಾರ ನಂಬರ ಕೆಎ-63/ಎಮ್-0631 ನೇದ್ದನ್ನು ಹಾವೇರೆ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿ ಜೋರಿನಿಂದ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಪಿರ್ಯಾದಿ ನಡೆಯಿಸುತ್ತಿದ್ದ ಮೋಟರ ಸೈಕಲ್ ನಂಬರ ಕೆಎ-25/ಇ.ವ್ಹಿ-581 ನೇದ್ದಕ್ಕೆ ಢಿಕ್ಕಿ ಮಾಡಿ ಪಿರ್ಯಾದಿಗೆ ಭಾರಿ ಗಾಯಪಡಿಸಿ ಮೋಟರ ಸೈಕಲ್ ಜಖಂ ಗೊಳಿಸಿದ್ದಲ್ಲದೇ ತಾನು ನಡೆಸುತ್ತಿದ್ದ  ಕಾರನ್ನು ಪಲ್ಟಿ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಫೊಲೀಸ್ ಠಾಣೆಯಲ್ಲಿ ಗುನ್ನಾನಂ 236/2018 ಕಲಂ 238.279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಲಘಟಗಿಯ ಗ್ರಾಮದ ಹತ್ತಿರ ಮೃತ ಬಸವರಾಜ ತಂದೆ ವೀರಭದ್ರಪ್ಪ ಹುಬ್ಬಳ್ಳಿ ವಯಾ: 50 ವರ್ಷ ಸಾ: ಕುರುವಿನಕೊಪ್ಪ ಇವನು ಅಜಮಾಸ 10-12 ವರ್ಷಗಳಿಂದ ತನ್ನ ಅಕ್ಕ ತಂಗಿಯರ ಮದುವೆ ಆಗದ್ದರಿಂದ ಮತ್ತು ಅಕ್ಕ ಶಾಂತವ್ವಳಿಗೆ ತಲೆ ಸರಿ ಇಲ್ಲದ್ದರಿಂದ ಮಾನಸಿಕ ಆಸ್ಪತ್ರೆಗೆ ತೋರಿಸಿದರೂ ಗುಣವಾಗದ್ದರಿಂದ ಚಿಂತೆ ಮಾಡುತ್ತಿದ್ದವನು ನಮ್ಮ ಜೀವನ ಸರಿ ಇಲ್ಲಾ ನಾವು ದುಡಿದ ಹಣ ದವಾಖಾನೆಗೆ ಇಡುವದು ಆಗಿದೆ ನಾನು ಇದ್ದು ಏನು ಪ್ರಯೋಜನ ಅಂತ ಅನ್ನುತ್ತಿದ್ದವನು ತನ್ನ ಜೀವನದಲ್ಲಿ ಬೇಸರಗೊಂಡು ದಿ: 10/09/2018 ರಂದು ಮದ್ಯಾಹ್ನ 02.00 ಗಂಟೆ ಸುಮಾರಿಗೆ ಕುರುವಿನಕೊಪ್ಪ ಗ್ರಾಮದ ತನ್ನ ವಾಸದ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ವಿಷ ಸೇವನೆ ಮಾಡಿಕೊಂಡು ತ್ರಾಸ್ ಮಾಡಿಕೊಂಡವನಿಗೆ 108 ಅಂಬುಲೆನ್ಸಿನಲ್ಲಿ ಕರೆದುಕೊಂಡು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ತೋರಿಸಿ ಅಲ್ಲಿಂದ ಶುಶ್ರೂತ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲು ಆದವನು ಉಪಚಾರದಿಂದ ಗುಣಹೊಂದದೇ ದಿ: 12/09/2018 ರಂದು ಮುಂಜಾನೆ 04.40 ಗಂಟೆಗೆ   ಮೃತಪಟ್ಟಿದ್ದು ಅವನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲಾ ಅಂತ ಮೃತನ ಹೆಂಡತಿ ಫಿಯಾಱಧೀ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 51/2018 ಕಲಂ 174 ಸಿ.ಆರ್.ಪಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Tuesday, September 11, 2018

CRIME INCIDENTS 11-09-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:11-09-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಮಹಿಳಾ ಪೊಲೀಸ  ಠಾಣಾ ವ್ಯಾಪ್ತಿಯ:ನರೇಂದ್ರ ಗ್ರಾಮದ  ಶ್ರೀಮತಿ ನೀಲವ್ವ ಮಂಜುನಾಥ ಆಯಗಾರ, ಸಾ: ನರೇಂದ್ರ, ತಾ:ಜಿ: ಧಾರವಾಡ ಇವರ ಮಗಳು ಕುಮಾರಿ ಜ್ಯೋತಿ, ವಯಾ 20 ವರ್ಷ ಇವಳು ಹೊರಗಡೆ  ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಎಲ್ಲಿಯೋ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 12/2018 ಕಲಂ ಹೆಣ್ಣು ಮಗಳು ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಬೇಲೂರ ಗ್ರಾಮದ ಹತ್ತಿರ ಸುಮಾರು 50 ರಿಂದ 55 ವರ್ಷದ ವಯಸ್ಸಿನ ಅನಾಮಧೇಯ ಬಿಕ್ಷುಕಿ ಮಹಿಳೆಯು ಬೆಲೂರ ಕೈಗಾರಿಕಾ ಪ್ರದೇಶದ ಟೀನಾ ಪ್ಯಾಕ್ಟರಿಯ ರಸ್ತೆಯ ಪಕ್ಕದ ಗೀಡದ ಕೇಳಗೆ ಮಲಗಿಕೊಂಡಾಗ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀಜೊರಿನಿಂದಾ ವ ನಿಷ್ಕಾಳಜಿತನದಿಂದಾ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಗೀಡದ ಕೇಳಗೆ ಮಲಗಿದ ಬಿಕ್ಷುಕಿಯ ತಲೆಯ ಮೇಲೆ ಹಾಯಿಸಿ ಭಾರಿಗಾಯ ಪಡಿಸಿ ಸ್ಥಳದಲ್ಲಿಯೇ ಮರಣ ಪಡಿಸಿ ತನ್ನ ವಾಹನವನ್ನು ನಿಲ್ಲಿಸದೇ ಪರಾರಿಯಾಗಿ ಹೋಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 140/2018 ಕಲಂ 279.304(ಎ) ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಗೊಬ್ಬರಗುಪ್ಪಿ ಗ್ರಾಮದ  ಆರೋಪಿತನಾದ ಸಂತೋಷ ಗಂಗಪ್ಪ ಮುದೇನೂರ ಸಾ!! ನವಲಗುಂದ ಈತನು ತಾನು ನಡೆಸುತ್ತಿದ್ದ ಮೋಟಾರ್ ಬೈಫ್ ನಂ ಕೆಎ-25/ಇಝಡ್-5781 ನೇದ್ದನ್ನು ನವಲಗುಂದ ಕಡೆಯಿಂದ ಗೊಬ್ಬರಗುಂಪಿ ಕಡೆಗೆ ಅತೀ ಜೋರಿನಿಂದ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ರಸ್ತೆ ಪಕ್ಕದಲ್ಲಿ ನಿಂತಿದ್ದ ಪಿರ್ಯಾದಿಯ  ಮಗನಾದ ಲಕ್ಕಪ್ಪ ವಿಠಲ ಕರೆಣ್ಣವರ ವಯಾ 04 ವರ್ಷ ಸಾ!! ಹಿರೇಹಟ್ಟಿ ತಾ!! ಗೋಕಾಕ ಈತನಿಗೆ ಅಪಘಾತ ಮಾಡಿ ಭಾರೀ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 151/2018 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.Friday, September 7, 2018

CRIME INCIDENTS 07-09-2018
ಧಾರವಾಡ ಜಿಲ್ಲೆಯಲ್ಲಿ ದಿನಾಂಕ:07-09-2018 ರಂದು ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಹಿರೇಕುರಣೆ ಗ್ರಾಮದ ಹತ್ತಿರ  ಆರೋಪಿತರಾದ ರಾಮಪ್ಪಾ ಕರೀಲಮ್ಮನವರ ಇವರು ಅಡ್ಡಾಡತಿರಲೇ  ಅವಾಚ್ಯ ಬೈದಾಡಿ ಬರಬ್ಯಾಡ್ರಿ ಅಂತಾ ಎಷ್ಟ ಸಲ ಹೇಳಬೇಕ ನಿಮಗ ಬಣವಿ ಒಟ್ಟಬ್ಯಾಡರಿ ಅಂತಾ ಹೇಳಿದರು ಬಣವಿ ಒಟ್ಟಿರಿ ಅವಾಚ್ಯ ಬೈದಾಡೊ ಕೈಯಿಂದ ಎಡಗಣ್ಣಿಗೆ ಹೊಡೆದು, ಬಡಿಗೆಯಿಂದ ಮೈ ಕೈಗಳಿಗೆ ಹೊಡೆದಿದ್ದು, ಬಿಡಿಸಲು ಹೋದ ಪ್ರೇಮವ್ವ ಕೋಂ ರಾಮಪ್ಪ ಕರಿಮಲ್ಲಣ್ಣವರ ಇವಳಿಗೆ ಹಾಗೂ ಪಿರ್ಯಾದಿಗೆ ಅಡ್ಡಗಟ್ಟಿ ತರುಬಿ ಕೈಗಳಿಂದ ಮೈಕೈಗಳಿಗೆ ಹೊಡೆ ಬಡೆ ಮಾಡಿ, ಕಾಲಿನಿಂದ ಜಾಡಿಸಿ ಒದ್ದಿದ್ದಲ್ಲದೇ, ಇದೊಮ್ಮೆ ಉಳಕೊಂಡ್ರಿ ಇನ್ನೊಮ್ಮೆ ಸಿಗ್ರಿ ನಿಮ್ಮನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವಧ ಧಮಕಿ ಹಾಕಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 133/2018 ಕಲಂ 323.324.341.504.506.34 ಐಪಿಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.