ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, September 1, 2018

CRIME INCIDENTS 01-09-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:01-09-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮನಗುಂಡಿ ಗ್ರಾಮದ ಪಂಚಾಯತಿ ಹತ್ತಿರ ಆರೋಪಿ ಚನ್ನಪ್ಪ @ ಮುದಕಪ್ಪ ತಂದೆ ಬಸಪ್ಪ ಹೊಸಅಂಗಡಿ  ವಯಾ 28 ವರ್ಷ ಜಾತಿ ಹಿಂದು ಲಿಂಗಾಯತ ಉದ್ಯೋಗ ಕೂಲಿ ಕೆಲಸ ಸಾ:ದ್ಯಾಮವ್ವನ ಗುಡಿ ಓಣಿ ಮನಗುಂಡಿ ತಾ:ಧಾರವಾಡ ಇವನು ತನ್ನ ಸ್ವಂತ ಲಾಭಕ್ಕಾಗಿ ಒಂದು ರೂಪಾಯಿಗೆ ಎಂಬತ್ತು ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಇಸಿದುಕೊಂಡು ಕಲ್ಯಾಣಿ ಮಟಕಾ ಎಂಬ ಜೂಜಾಟದ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಓಸಿ ಜೂಜಾಟದ ಅಂಕಿಸಂಖ್ಯೇಗಳನ್ನು ಬರೆದು ಕೊಳ್ಳುತ್ತಿದ್ದಾಗ  ಸಿಕ್ಕಿದ್ದು ಅವನಿಂದ ರೂ 500-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 217/18 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಲಘಟಗಿ ಹಳಿಯಾಳ  ರಸ್ತೆಯ ಮೇಲೆ ಕಲಘಟಗಿ ಶಹರದ ಗದಿಗೇಪ್ಪ ಕಟ್ಟಿರವರ ಮನೆಯ ಹತ್ತಿರ ಇನ್ನೋವಾ ಕ್ರಿಸ್ಟಾ ಕಾರ ನಂ ಕೆಎ-25-ಎಮ್ ಬಿ-8453 ನೇದ್ದರ ಚಾಲಕನು ಸಂಗಮೇಶ್ವರ  ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೆ ಕಲಘಟಗಿ ಶಹರದ ಗದಿಗೇಪ್ಪ ಕಟ್ಟಿ ಇವರ ಮನೆಯ ಹತ್ತಿರ ರಸ್ತೆಯ ಎಡಬದಿ ಇರುವ ಗಿಡಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಕಾರನ್ನು ಸಂಪೂರ್ಣ ಜಕಂಗೊಳಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 214/2018 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಪಶುಪತಿಹಾಳ ಗ್ರಾಮವನ್ನು ದಾಟಿ ಲಕ್ಷ್ಮೇಶ್ವರ ಕಡೆಗೆ ಪಶುಪತಿಹಾಳ ಗ್ರಾಮದಿಂದ ಸುಮಾರು 01 ಕಿ,ಮೀ ಅಂತರದಲ್ಲಿ ತಾವು ಹೊರಟಿದ್ದ ಕಾರ್ ನಂ: ಕೆಎ:48 6863 ನೇದ್ದಕ್ಕೆ ಲಕ್ಷ್ಮೇಶ್ವರ ಕಡೆಯಿಂದ ಬಂದ ಅಟೋ ನಂ: ಕೆಎ:28 4622 ನೇದ್ದರ ಚಾಲಕನು ಅತೀ ಜೋರಿನಿಂದ ವ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನೇ ರಸ್ತೇದ ಎಡ ಸೈಡಿಗೆ ಹೊರಟ ತಮ್ಮ ಕಾರಿಗೆ ಡಿಕ್ಕೀ ಪಡಿಸಿ ಅದರಲ್ಲಿದ್ದವರಿಗೆ ಸಾದಾ ಒಳಪೆಟ್ಟು ನೋವುಗೊಳಿಸಿದ್ದು ಇರುತ್ತದೆ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 75/2018 ಕಲಂ279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.