ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, September 7, 2018

CRIME INCIDENTS 07-09-2018
ಧಾರವಾಡ ಜಿಲ್ಲೆಯಲ್ಲಿ ದಿನಾಂಕ:07-09-2018 ರಂದು ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಹಿರೇಕುರಣೆ ಗ್ರಾಮದ ಹತ್ತಿರ  ಆರೋಪಿತರಾದ ರಾಮಪ್ಪಾ ಕರೀಲಮ್ಮನವರ ಇವರು ಅಡ್ಡಾಡತಿರಲೇ  ಅವಾಚ್ಯ ಬೈದಾಡಿ ಬರಬ್ಯಾಡ್ರಿ ಅಂತಾ ಎಷ್ಟ ಸಲ ಹೇಳಬೇಕ ನಿಮಗ ಬಣವಿ ಒಟ್ಟಬ್ಯಾಡರಿ ಅಂತಾ ಹೇಳಿದರು ಬಣವಿ ಒಟ್ಟಿರಿ ಅವಾಚ್ಯ ಬೈದಾಡೊ ಕೈಯಿಂದ ಎಡಗಣ್ಣಿಗೆ ಹೊಡೆದು, ಬಡಿಗೆಯಿಂದ ಮೈ ಕೈಗಳಿಗೆ ಹೊಡೆದಿದ್ದು, ಬಿಡಿಸಲು ಹೋದ ಪ್ರೇಮವ್ವ ಕೋಂ ರಾಮಪ್ಪ ಕರಿಮಲ್ಲಣ್ಣವರ ಇವಳಿಗೆ ಹಾಗೂ ಪಿರ್ಯಾದಿಗೆ ಅಡ್ಡಗಟ್ಟಿ ತರುಬಿ ಕೈಗಳಿಂದ ಮೈಕೈಗಳಿಗೆ ಹೊಡೆ ಬಡೆ ಮಾಡಿ, ಕಾಲಿನಿಂದ ಜಾಡಿಸಿ ಒದ್ದಿದ್ದಲ್ಲದೇ, ಇದೊಮ್ಮೆ ಉಳಕೊಂಡ್ರಿ ಇನ್ನೊಮ್ಮೆ ಸಿಗ್ರಿ ನಿಮ್ಮನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವಧ ಧಮಕಿ ಹಾಕಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 133/2018 ಕಲಂ 323.324.341.504.506.34 ಐಪಿಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.