ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, September 11, 2018

CRIME INCIDENTS 11-09-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:11-09-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಮಹಿಳಾ ಪೊಲೀಸ  ಠಾಣಾ ವ್ಯಾಪ್ತಿಯ:ನರೇಂದ್ರ ಗ್ರಾಮದ  ಶ್ರೀಮತಿ ನೀಲವ್ವ ಮಂಜುನಾಥ ಆಯಗಾರ, ಸಾ: ನರೇಂದ್ರ, ತಾ:ಜಿ: ಧಾರವಾಡ ಇವರ ಮಗಳು ಕುಮಾರಿ ಜ್ಯೋತಿ, ವಯಾ 20 ವರ್ಷ ಇವಳು ಹೊರಗಡೆ  ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಎಲ್ಲಿಯೋ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 12/2018 ಕಲಂ ಹೆಣ್ಣು ಮಗಳು ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಬೇಲೂರ ಗ್ರಾಮದ ಹತ್ತಿರ ಸುಮಾರು 50 ರಿಂದ 55 ವರ್ಷದ ವಯಸ್ಸಿನ ಅನಾಮಧೇಯ ಬಿಕ್ಷುಕಿ ಮಹಿಳೆಯು ಬೆಲೂರ ಕೈಗಾರಿಕಾ ಪ್ರದೇಶದ ಟೀನಾ ಪ್ಯಾಕ್ಟರಿಯ ರಸ್ತೆಯ ಪಕ್ಕದ ಗೀಡದ ಕೇಳಗೆ ಮಲಗಿಕೊಂಡಾಗ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀಜೊರಿನಿಂದಾ ವ ನಿಷ್ಕಾಳಜಿತನದಿಂದಾ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಗೀಡದ ಕೇಳಗೆ ಮಲಗಿದ ಬಿಕ್ಷುಕಿಯ ತಲೆಯ ಮೇಲೆ ಹಾಯಿಸಿ ಭಾರಿಗಾಯ ಪಡಿಸಿ ಸ್ಥಳದಲ್ಲಿಯೇ ಮರಣ ಪಡಿಸಿ ತನ್ನ ವಾಹನವನ್ನು ನಿಲ್ಲಿಸದೇ ಪರಾರಿಯಾಗಿ ಹೋಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 140/2018 ಕಲಂ 279.304(ಎ) ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಗೊಬ್ಬರಗುಪ್ಪಿ ಗ್ರಾಮದ  ಆರೋಪಿತನಾದ ಸಂತೋಷ ಗಂಗಪ್ಪ ಮುದೇನೂರ ಸಾ!! ನವಲಗುಂದ ಈತನು ತಾನು ನಡೆಸುತ್ತಿದ್ದ ಮೋಟಾರ್ ಬೈಫ್ ನಂ ಕೆಎ-25/ಇಝಡ್-5781 ನೇದ್ದನ್ನು ನವಲಗುಂದ ಕಡೆಯಿಂದ ಗೊಬ್ಬರಗುಂಪಿ ಕಡೆಗೆ ಅತೀ ಜೋರಿನಿಂದ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ರಸ್ತೆ ಪಕ್ಕದಲ್ಲಿ ನಿಂತಿದ್ದ ಪಿರ್ಯಾದಿಯ  ಮಗನಾದ ಲಕ್ಕಪ್ಪ ವಿಠಲ ಕರೆಣ್ಣವರ ವಯಾ 04 ವರ್ಷ ಸಾ!! ಹಿರೇಹಟ್ಟಿ ತಾ!! ಗೋಕಾಕ ಈತನಿಗೆ ಅಪಘಾತ ಮಾಡಿ ಭಾರೀ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 151/2018 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.