ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, September 12, 2018

CRIME INCIDENTS 12-09-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:12-09-2018 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಯಲ್ಲಾಪೂರ ರಸ್ತೆಯ ಮೇಲೆ ಸಂಗಟಿಕೊಪ್ಪ ಬಸ್ಟ್ಯಾಂಡ ಹತ್ತಿರ  ಆರೋಪಿತರಾದ 1.ಪರುಶುರಾಮ ಇತನ ಸ್ನೇಹಿತನು ಕೂಡಿಕೊಂಡು ರಾಜು ಹಲ್ಲೂರ ಇವರು ಕಲಘಟಗಿ ಕಡೆಯಿಂದಾ ಯಲ್ಲಾಪೂರ ಕಡೆಗೆ ನೆಡೆಸಿಕೊಂಡು ಹೊರಟ KSRTC ಬಸ್ ನಂ KA-31-F-1519 ನೇದ್ದನ್ನು ಅಡ್ಡಗಟ್ಟಿ ತರುಬಿ ನಿಲ್ಲಿಸಿ ಗ್ಲಾಸಿಗೆ ಕಲ್ಲು ಒಗೆದು ಮುಂದಿನ ದೊಡ್ಡ ಗ್ಲಾಸನ್ನು ಲುಕ್ಷಾಣಪಡಿಸಿ ಪಿರ್ಯಾದಿಗೆ ಏನಲೆ ಅವಾಚ್ಯ ಬೈದಾಡಿ ಸಂಗಟಿಕೊಪ್ಪಕ್ಕೆ ನಿಲ್ಲಿಸದೆ ಹಾಗೆ ಹೋಗುತ್ತಿದ್ದಿಯಾ ಅಂತಾ ಬೈದಾಡಿ ಕೈಯಿಂದಾ ಹೊಡಿಬಡಿ ಮಾಡಿ  ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಸುಮಾರು 15,000/- ರೂ ಕಿಮ್ಮತ್ತಿನ ಸಾರ್ವಜನಿಕ ಸ್ವತ್ತನ್ನು ಲುಕ್ಷಾಣಪಡಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 219/2018 ಕಲಂ IPC 1860 (U/s-323,341,353,427,504,34); PREV. OF DAMAGE TO PUBLIC PROPERTY ACT, 1984 (U/s-3) ನೇದ್ದರಲ್ಲ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಶೇರೆವಾಡ ಕ್ರಾಸ್ ಹತ್ತಿರ ಪಿ.ಬಿ ರಸ್ತೆ ಮೇಲೆ ಇದರಲ್ಲಿಅನ್ನಪ್ಪಾ ಕುರಿ ಇತನು ನಡೆಯಿಸಿಕೊಂಡು ಹೋಗುತ್ತಿರುವ ಮೋಟರ ಸೈಕಲ್ ನಂಬರ ಕೆಎ-25/ಇ.ವ್ಹಿ-5821 ನೇದ್ದಕ್ಕೆ ಇದರಲ್ಲಿಯ ಆರೋಪಿತನಾದ ಆನಂದ ಗುರುಶಿದ್ದಪ್ಪ ಹುಬ್ಬಳ್ಳಿ ಸಾ. ಗಂಜಿಗಟ್ಟಿ ಇತನು ತಾನು ನಡೆಸುತ್ತಿದ್ದ ಕಾರ ನಂಬರ ಕೆಎ-63/ಎಮ್-0631 ನೇದ್ದನ್ನು ಹಾವೇರೆ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿ ಜೋರಿನಿಂದ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಪಿರ್ಯಾದಿ ನಡೆಯಿಸುತ್ತಿದ್ದ ಮೋಟರ ಸೈಕಲ್ ನಂಬರ ಕೆಎ-25/ಇ.ವ್ಹಿ-581 ನೇದ್ದಕ್ಕೆ ಢಿಕ್ಕಿ ಮಾಡಿ ಪಿರ್ಯಾದಿಗೆ ಭಾರಿ ಗಾಯಪಡಿಸಿ ಮೋಟರ ಸೈಕಲ್ ಜಖಂ ಗೊಳಿಸಿದ್ದಲ್ಲದೇ ತಾನು ನಡೆಸುತ್ತಿದ್ದ  ಕಾರನ್ನು ಪಲ್ಟಿ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಫೊಲೀಸ್ ಠಾಣೆಯಲ್ಲಿ ಗುನ್ನಾನಂ 236/2018 ಕಲಂ 238.279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಲಘಟಗಿಯ ಗ್ರಾಮದ ಹತ್ತಿರ ಮೃತ ಬಸವರಾಜ ತಂದೆ ವೀರಭದ್ರಪ್ಪ ಹುಬ್ಬಳ್ಳಿ ವಯಾ: 50 ವರ್ಷ ಸಾ: ಕುರುವಿನಕೊಪ್ಪ ಇವನು ಅಜಮಾಸ 10-12 ವರ್ಷಗಳಿಂದ ತನ್ನ ಅಕ್ಕ ತಂಗಿಯರ ಮದುವೆ ಆಗದ್ದರಿಂದ ಮತ್ತು ಅಕ್ಕ ಶಾಂತವ್ವಳಿಗೆ ತಲೆ ಸರಿ ಇಲ್ಲದ್ದರಿಂದ ಮಾನಸಿಕ ಆಸ್ಪತ್ರೆಗೆ ತೋರಿಸಿದರೂ ಗುಣವಾಗದ್ದರಿಂದ ಚಿಂತೆ ಮಾಡುತ್ತಿದ್ದವನು ನಮ್ಮ ಜೀವನ ಸರಿ ಇಲ್ಲಾ ನಾವು ದುಡಿದ ಹಣ ದವಾಖಾನೆಗೆ ಇಡುವದು ಆಗಿದೆ ನಾನು ಇದ್ದು ಏನು ಪ್ರಯೋಜನ ಅಂತ ಅನ್ನುತ್ತಿದ್ದವನು ತನ್ನ ಜೀವನದಲ್ಲಿ ಬೇಸರಗೊಂಡು ದಿ: 10/09/2018 ರಂದು ಮದ್ಯಾಹ್ನ 02.00 ಗಂಟೆ ಸುಮಾರಿಗೆ ಕುರುವಿನಕೊಪ್ಪ ಗ್ರಾಮದ ತನ್ನ ವಾಸದ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ವಿಷ ಸೇವನೆ ಮಾಡಿಕೊಂಡು ತ್ರಾಸ್ ಮಾಡಿಕೊಂಡವನಿಗೆ 108 ಅಂಬುಲೆನ್ಸಿನಲ್ಲಿ ಕರೆದುಕೊಂಡು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ತೋರಿಸಿ ಅಲ್ಲಿಂದ ಶುಶ್ರೂತ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲು ಆದವನು ಉಪಚಾರದಿಂದ ಗುಣಹೊಂದದೇ ದಿ: 12/09/2018 ರಂದು ಮುಂಜಾನೆ 04.40 ಗಂಟೆಗೆ   ಮೃತಪಟ್ಟಿದ್ದು ಅವನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲಾ ಅಂತ ಮೃತನ ಹೆಂಡತಿ ಫಿಯಾಱಧೀ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 51/2018 ಕಲಂ 174 ಸಿ.ಆರ್.ಪಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.