ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, September 14, 2018

CRIME INCIDENTS 14-09-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:14-09-2018 ರಂದು ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಶಿರೂರ ರಸ್ತೆಗೆ ಹೊಂದಿಕೊಂಡಿರುವ ಭೀಮ್ಮವ್ವಾ ಅಡೆವಣ್ಣವೆರ  ಇವರ ತಮ್ಮನ ಹೆಸರಿನಲ್ಲಿರುವ ಸರ್ವೇ ನಂ: 365/3 ಕ್ಷೇತ್ರ 7 ಎಕರೆ 06 ಗುಂಟೆ ಜಮೀನದಲ್ಲಿ ಆರೋಪಿತರಾದ 1) ದೇವರಾಜ ದಾನಪ್ಪ ಪಾಯಕ್ಕನವರ, ಮತ್ತು ಅವನ ಮಕ್ಕಳಾದ 2) ಆನಂದ ದೇವರಾಜ ಪಾಯಕ್ಕನವರ, 3) ಅನೀಲ ದೇವರಾಜ ಪಾಯಕ್ಕನವರ, 4) ಸುನೀಲ ದೇವರಾಜ ಪಾಯಕ್ಕನವರ ಸಾ: ಎಲ್ಲರೂ ಕುಂದಗೋಳ ಇವರು ಹಿಂದಿನ ಸಿಟ್ಟಿನಿಂದ ಪಿರ್ಯಾದಿಗೆ ಲುಕ್ಸಾನಪಡಿಸಿ ಕೇಡನ್ನು ಉಂಟು ಮಾಡಬೇಕೆನ್ನುವ ಉದ್ದೇಶದಿಂದ ಸದರ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ, ಕರ್ಕಿಗೆ ಹೊಡೆಯುವ ಎಣ್ಣೆಯನ್ನು ಜಮೀನದಲ್ಲಿ ಬೆಳೆದ ಬಿ.ಟಿ ಹತ್ತಿ, ಮೆಣಸಿನ ಪೀಕಿಗೆ ಸಿಂಪರಣೆ ಮಾಡಿ ಪಿರ್ಯಾದಿಗೆ ಸುಮಾರು 5,00,000/-ರೂ ಗಳಷ್ಟು ಲುಕ್ಸಾನಪಡಿಸಿದ್ದು, ವಿಚಾರಿಸಿದ ಆರೋಪಿತರೆಲ್ಲರೂ  ಹಲಕಟ್ ಬೈದಾಡಿ, ಜೀವ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 138/2018 ಕಲಂ 447.427.504.506.34 ಐಪಿಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಳಗಲಿ ಕ್ರಾಸ್, ಪೂನಾ ಬೆಂಗಳೂರು ರಸ್ತೆ ಮೇಲೆ, ಆರೋಪಿ ಯಾವುದೋ ವಾಹನ ಚಾಲಕನು ತನ್ನ ವಾಹವನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ, ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬಂದು, ಪಿರ್ಯಾದಿಯ ಮಗ ಶ್ರೇಣಿಕ ಬಸಪ್ಪ ಹಂಚಿನಮನಿ ಸಾ. ನಿಟಗಿನಕೊಪ್ಪ ತಾ. ಹಾನಗಲ್ ಇವನು ಛಬ್ಬಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಚಾಲನೆ ಮಾಡಿಕೊಂಡು ಬರುತ್ತಿದ್ದ, ಮೋಟರ ಸೈಕಲ್ ನಂಬರ ಕೆಎ-63-ಸಿ-1543 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಸ್ಥಳದಲ್ಲಿಯೇ ಮರಣಪಡಿಸಿ, ಅಪಘಾತದ ವಿಷಯವನ್ನು ಠಾಣೆಗೆ ತಿಳಿಸದೇ ಹಾಗೆ ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 237/2018 ಕಲಂ 279.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.