ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, October 31, 2018

CRIME INCIDENTS 31-10-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 31-10-2018 ರಂದು ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ  ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 31-10-2018 ರಂದು 13-00 ಗಂಟೆಯ ಸುಮಾರಿಗೆ ನಾಗಲಾವಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  ನಮೂದು ಮಾಡಿದ ಆರೋಪಿತನಾದ ಚಿನ್ನಪ್ಪ ತಂದೆ ಲಕ್ಷ್ಮಣ ಹಳ್ಳಿಗೇರಿ  ವಯಾ-70 ವರ್ಷ. ಜಾತಿ-ಹಿಂದು ವಡ್ಡರ. ಉದ್ಯೋಗ-ಕೂಲಿ ಕೆಲಸ ಸಾ:ವಡ್ಡರ ಕಾಲೋನಿ ನಾಗಲಾವಿ  ಗ್ರಾಮ ಇವನು  ತನ್ನ ಸ್ವಂತ ಪಾಯ್ದೆಗೋಸ್ಕರ ಯಾವುದೇ ಪಾಸು ಪರ್ಮೀಟ ಇಲ್ಲದೆ  ಸರಕಾರದ ಬೋಕ್ಕಸಕ್ಕೆ ನಷ್ಠವನ್ನುಂಟು ಮಾಡುವ ಉದ್ದೇಶದಿಂದ ಒಂದು ನೀಲಿ ಕೈ ಚೀಲದಲ್ಲಿ ಒಟ್ಟು 48 ಹೈವಡ್ಸ ಚೀಯರ್ಸ   ವಿಸ್ಕಿ ತುಂಬಿದ 90 ಎಂ.ಎಲ್ ಅಳತೆಯ ಮದ್ಯದ ಟೆಟ್ರಾ ಪಾಕೀಟಗಳು (ಒಟ್ಟು  4 ಲೀಟರ 320 ಮೀಲಿ)  :ಕಿ: 1440/- ರೂ ನೇದವುಗಳನ್ನು ಅಕ್ರಮವಾಗಿ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುವಾಗ  ಸಿಕ್ಕಿದ್ದು ಈ ಕುರಿತು  ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ..31-10-2018 ರಂದು ಮುಂಜಾನೆ 09-15 ಗಂಟೆಯ ಸುಮಾರಿಗೆ ಕಲಘಟಗಿ ಶಹರದ ಬಸವೇಶ್ವರ ನಗರದ ಹನಮಂತದೇವರ ಗುಡಿ ಹತ್ತೀರ ಸಾರ್ವಜನಿಕ ಸ್ಥಳದಲ್ಲಿ 02 ಜನ ಆರೋಪಿಗಳು ಕೂಡಿಕೊಂಡು ತಮ್ಮ ಸ್ವಂತ ಪಾಯ್ದೆಗೋಸ್ಕರ ಸಾರ್ವಜನಿಕರಿಗೆ ಕರೆದು 1 ರೂ ಗೆ 80 ರೂ ಕೊಡುವದಾಗಿ ಹೇಳಿ ಅಂಕಿ ಸಂಖ್ಯೆಗಳ ಆಧಾರದ ಮೇಲಿಂದ ಓಸಿ ಎಂಬ ಜೂಜಾಟ ಆಡಿಸುತ್ತಿದ್ದ ಅಪರಾಧ ಅವರಿಂದ ಒಟ್ಟು ಅ.ಕಿ ಮಾಲು ರೂ. 1200/- ವಶಪಡಿಸಿಕೊಂಡು ಪ್ರಕರಣ ದಾಖಲ್ ಗೊಳಿಸಿದ್ದು ಇರುತ್ತದೆ.

3) ಧಾರವಾಡ ಗ್ರಾಮೀಣ  ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 31-10-2018 ರಂದು 1000 ಗಂಟೆಗೆ ಬೆಳ್ಳಿಗಟ್ಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ  ಸಾರ್ವಜನಿಕ ಖೂಲ್ಲಾ ಜಾಗೆಯಲ್ಲಿ ಒಟ್ಟು 06 ಜನ  ಆರೋಪಿತರೆಲ್ಲರು ಕೂಡಿ ತಮ್ಮ ತಮ್ಮ ಸ್ವಂತ ಪಾಯ್ದೆಗೋಸ್ಕರ ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂಬುವ ಜೂಜಾಟವನ್ನು ಆಡುತಿದ್ದಾಗ ಸಿಕ್ಕಿದ್ದು ಅವರಿಂದ ರೂ. 1760/-  ಗಳನ್ನು ವಶಪಡಿಸಿಕೊಂಡು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4) ಗುಡಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 28-10-2018 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಲಕ್ಷ್ಮೇಶ್ವರ ಹರ್ಲಾಪೂರ ರಸ್ತೆಯ ಮೇಲೆ ಮುಕ್ತಿಮಂದಿರ ಸಮೀಪ ಆರೋಪಿತ ಇಬ್ರಾಹಿಂಸಾಬ  ಇಮಾಮಸಾಬ ಮಿರಾನವರ ಸಾ: ಕಳಶ ಇತನು  ನಡೆಸುತ್ತಿದ್ದ ಮೋಟರ್ ಸೈಕಲ್ ನಂಬರ ಕೆ. 01/ಎಕ್ಸ್ 2481 ನೇದ್ದನ್ನು ಲಕ್ಷ್ಮೇಶ್ವರ ಕಡೆಯಿಂದ ಹರ್ಲಾಪೂರ ರಸ್ತೆ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ವಾಹನ ಮೇಲಿನ ನೀಯಂತ್ರಣ ಕಳೆದುಕೊಂಡು ಕಳಸ ರಸ್ತೆ ಕಡೆಯಿಂದ ಲಕ್ಷ್ಮಶ್ವರ ರಸ್ತೆ ಕಡೆಗೆ ಹೊರಟ ಫಿರ್ಯಾದಿ ಮಾವ ನಡೆಸುತ್ತಿದ್ದ ಮೋಟರ್ ಸೈಕಲ ನಂಬರ ಕೆ. 25/ .ವಾಯ್ 4218 ನೇದ್ದಕ್ಕೆ ಡಿಕ್ಕಿ ಮಾಡಿ ಮೋಟರ್ ಸೈಕಲ ಸವಾರ ಫಿರ್ಯಾದಿ ಮಾವನಿಗೆ  ಹಾಗೂ ಫಿರ್ಯಾದಿ ತಂದೆಗೆ ಸಾದಾ ಬಾರಿ ಗಾಯಪಡಿಸಿ ಘಟನೆಯ ಸಂಗತಿಯನ್ನು ಠಾಣೆಗೆ ತಿಳಿಸದೇ ಗಾಯಾಳುಗಳಿಗೆ ಉಪಚಾರಕ್ಕೆ ಧಾಖಲು ಮಾಡದೇ ಹೆಲ್ಮೇಟ್ ಇಲ್ಲದೇ ವಾಹನ ನಡೆಸಿ ಅಪಘಾತ ಪಡಿಸಿದ ಅಪರಾದ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

5) ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 24-10-2018 ರಂದು ಸಾಯಂಕಾಲ 6-40 ಗಂಟೆ ಸುಮಾರಿಗೆ ಅಳ್ನಾವರ ದಾರವಾಡ ರಸ್ತೆಯ ಅಳ್ನಾವರ ಶಹರದ ಮಲೆನಾಡ ಹೊಟೇಲ ಮುಂದಿನ ರಸ್ತೆಯ ಮೇಲೆ ಇದರಲ್ಲಿ ಆಪಾಧಿತನಾದ ಸಚಿನ ನಾರಾಯಣ ಸುಬೆ ಸಾಃ ಅಳ್ನಾವರ ಇಂದಿರಾ ನಗರ ತಾ|| ಅಳ್ನಾವರ ಅವನು ತಾನು ನಡೆಯಿಸುತ್ತಿದ್ದ ತನ್ನ ಬಾಬತ್ತ ಆ್ಯಕ್ಟೀವ್ ಹೊಂಡಾ ಮೋಟಾರ ಸೈಕಲ್ ನಂಬರ KA -25 HB-2262  ನೇದ್ದನ್ನು ಅಳ್ನಾವರದ ಕಡಬಗಟ್ಟಿ ಕ್ರಾಸ ಕಡೆಯಿಂದ ಅಳ್ನಾವರ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಅದರ ವೇಗವನ್ನು ಕಂಟ್ರೋಲ ಮಾಡಲಾಗದೆ  ರಸ್ತೆಯ ಬದಿಯಲ್ಲಿ ಪಲ್ಟಿ ಮಾಡಿ ಕೆಡವಿ ತನ್ನ ಮೋಟಾರ ಸೈಕಲ್ ಹಿಂದೆ ಕುಳಿತ ಜ್ಯೋತಿ ಕೋಂ ಸಚಿನ ಸುಬೆ ಮತ್ತು ಪ್ರಾಚಿ ತಂದೆ ಸಚಿನ ಸುಬೆ ಸಾ|| ಇಬ್ಬರೂ ಅಳ್ನಾವರ ಇವರಿಗೆ ಸಾದಾ ಭಾರೀ ಗಾಯ ಪಡಿಸಿದ ಅಪರಾಧ ಈ ಕುರಿತು ಅಳ್ನಾವರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

6)ಗರಗ ಪೊಲೀಸ ಠಾಣಾ ಹದ್ದಿ ಪೈಕಿ [ಎನ್ಎಚ್-4] ಧಾರವಾಡದಿಂದಾ ಬೆಳಗಾವಿ ಕಡೆಗೆ ಹೋಗುವ ಪಿ.ಬಿ ರಸ್ತೆಯ ಮೇಲೆ ಧಾರವಾಡ ಹೈ ಕೋರ್ಟ ಹತ್ತಿರ ದಿನಾಂಕಃ 30-10-2018 ರಂದು 22-00 ಅವರ್ಸಕ್ಕೆ ನಮೂದ ಕಾರ ನಂಬರಃ ಕೆಎಃ25/ಜಡ್/4124 ನೇದ್ದರ ಚಾಲಕನು ತನ್ನ ಕಾರನ್ನು ಮುಮ್ಮಿಗಟ್ಟಿ ಕಡೆಯಿಂದಾ ಶಿಂಗನಳ್ಳಿ ಕಡೆಗೆ ಪಿ.ಬಿ ರಸ್ತೆಯ ಮೇಲೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಧಾರವಾಡ ಹೈ ಕೋರ್ಟ ಹತ್ತಿರ ತನ್ನ ಮುಂದೆ ಹೊರಟ ಟಾಟಾ ಹಿಟ್ಯಾಚಿ ಹೇರಿದ ಟ್ರಾಲಿ ಲಾರಿ ನಂಬರಃ ಜಿಎ/01/ಯು/9979 ನೇದ್ದಕ್ಕೆ ಕಾರ ಢಿಕ್ಕಿ ಮಾಡಿ ಅಪಘಾತಪಡಿಸಿ ಕಾರಿನಲ್ಲಿದ್ದ ಒಬ್ಬನಿಗೆ ಭಾರಿಗಾಯಪಡಿಸಿ ಒಬ್ಬಳಿಗೆ ಸ್ಥಳದಲ್ಲಿಯೇ ಮರಣಪಡಿಸಿ ತಾನು ಸ್ಥಳದಲ್ಲಿಯೇ ಮೃತಪಟ್ಟ ಅಪರಾಧ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

7) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 30/10/2018 ರಂದು 21-30 ಗಂಟೆ ಸುಮಾರಕ್ಕೆ ಕಾರವಾರ ಹುಬ್ಬಳ್ಳಿ ರಸ್ತೆ ಮೇಲೆ ಅಂಚಟಗೇರಿ ಹದ್ದಿಯ ಉಪ್ಪಿನಕಾಯಿ ಪ್ಯಾಕ್ಟರಿ ಎದುರಿಗೆ ಇದರಲ್ಲಿಯ ಆರೋಪಿತನಾದ ಸಂತೋಷ ರಾಜಪ್ಪ ಪೂಜಾರ ಸಾ!! ಹು್ಬ್ಬಳ್ಳಿ ಶಿವಶಂಕರ ಕಾಲೋನಿ ಇತನು ಮೋಟಾರ್ ಸೈಕಲ್ ನಂಬರ ಕೆಎ-63/ಜೆ-7185 ನೇದ್ದನ್ನು ಕಲಘಟಗಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಒಮ್ಮೆಲೇ ನಾಯಿ ಅಡ್ಡ ಬಂದಿದ್ದರಿಂದ ಅದನ್ನು ತಪ್ಪಿಸಲು ಹಾಗು ರಸ್ತೆ ಬಾಜುಕ್ಕಿನ ಗುಂಡಿಯನ್ನು ತಪ್ಪಿಸಲು ಹೋಗಿ ಮೋಟಾರ್ ಸೈಕಲ್ ಹಿಂದುಗಡೆ ಕುಳಿತುಕೊಂಡಿದ್ದ ಗಾಯಾಳು ಶ್ರೀಮತಿ ಹೇಮಲತಾ ಮಹಾದೇವಪ್ಪ ರಟ್ಟಿಹಳ್ಳಿ ಕಲಘಟಗಿ ಪೊಲೀಸ ಠಾಣೆ ಇವರಿಗೆ ಕೆಳಗೆ ಬೀಳುವಂತೆ ಮಾಡಿ ತಲೆಗೆ ಬಾರಿ ಗಾಯಪಡಿಸಿದ ಅಪರಾಧ. ಅಪರಾಧ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

8) ನವಲಗುಂದ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ದಿನಾಂಕ 31-10-2018 ರಂದು ಮುಂಜಾನೆ 07-45 ಗಂಟೆಯ ಸುಮಾರಿಗೆ ಪೋತಿ ಪ್ರಕಾಶ ಬಸಪ್ಪ ಮೇಟಿ ವಯಾ:35 ವರ್ಷ ಸಾ!! ಶಾನವಾಡ ಈತನು ತನ್ನ ತಂದೆ ಬಸಪ್ಪ ಈತನು ಮೈಸೂರ ಬ್ಯಾಂಕ ಹುಬ್ಬಳ್ಳಿಯಲ್ಲಿ ಟ್ಯಾಕ್ಟರ ಖರೀದಿಗೆ ಸಾಲವನ್ನು ಮಾಡಿದ್ದು ಅದು ಜಮೀನ ಮೇಲೆ ಭೋಜಾ ಇರುತ್ತದೆ. 2013 ನೇ ಸಾಲಿನಲ್ಲಿ ಟ್ಯಾಕ್ಟರ ಸಾಲ ಇದ್ದು ಅದನ್ನು ತುಂಬಿ ಮತ್ತೆ ಅದೆ ಬ್ಯಾಂಕಿನಲ್ಲಿ 3,50,000 ರೂಪಾಯಿ ಸಾಲವನ್ನು ಪಡೆದಿದ್ದು ವರದಿಗಾರನ ಮಗನೆ ತನ್ನ ಮನೆತನದ ಸಲುವಾಗಿ ಜವಾಬ್ದಾರಿಯಿಂದ ಮಾಡುತ್ತಿದ್ದನು ವರದಿಗಾರನ ಮಗ ಪ್ರಕಾಶ ಈತನು ಇತ್ತಿತ್ತಲಾಗಿ ಸಾಲ ಹೆಚ್ಚಾಗಿದೆ ಎಂದು ಮಾನಸಿಕ ಮಾಡಿಕೊಂಡು ಸೆರೆ ಕುಡಿಯುತ್ತಿದ್ದನು ಮತ್ತು ಸಾಲ ತುಂಬುವದು ಹೇಗೆ ಅಂತಾ ಮಾನಸಿಕ ಮಾಡಿಕೊಂಡಿದ್ದನಯ ದಿವಸ ದಿನಾಂಕ 31-10-2018 ರಂದು ಮುಂಜಾನೆ 07-45 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ ಯಾವುದೋ ಕ್ರಿಮಿನಾಶಕ ಎಣ್ಣೆ ಕುಡಿದು ಅಸ್ವಸ್ತನಾಗಿ ನವಲಗುಂದ ಸರ್ಕಾರಿ ಆಸ್ಪತ್ರೆಗೆ 09-15 ಕ್ಕೆದಾಖಲಿಸಿದಾಗ ಅಲ್ಲಿಯ ವೈಧ್ಯರು ತೀರಿಕೊಂಡಿರುತ್ತಾನೆ ಅಂತಾ ತಿಳಿಸಿದರು ಅವನ ಮರಣದಲ್ಲಿ ಬೇರೆ ಯಾವುದೆ ತರಹದ ಸಂಶಯ ವಗೈರೆ ಇರುವದಿಲ್ಲಾ ಅಂತಾ ಪೋತಿಯ ತಾಯಿಯು ತನ್ನ ವರದಿಯಲ್ಲಿ ನಮೂದಿಸಿದ್ದು ಅದೆ.