ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, October 5, 2018

CRIME INCIDENTS 05-10-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:05-10-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪುನಾ ಬೆಂಗಳೂರ ರಸ್ತೆ ಮೇಲೆ ಪಾಳೆ ಕಾವೇರಿ ಡಾಬಾದ ಹತ್ತಿರ ಆರೋಪಿತನಾದ ಕೆ.ಎಮ್.ತಿಪ್ಪೆಸ್ವಾಮಿ ತಂದೆ ಮಂಜಪ್ಪ.ಕೆ ಸಾ!! ಬೆಳವಾನೂರ ತಾ!! ಡಾವಣಗೇರಿ ಇತನು ಟ್ರ್ಯಾಕ್ಟರ್ ಇಂಜಿನ್ ನಂಬರ ಕೆಎ-25/ಟಿಸಿ-31 ನೇದ್ದನ್ನು ಶಿಗ್ಗಾವಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಗಾಡಿ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗಿನ ತಗ್ಗಿನಲ್ಲಿ ಪಲ್ಟಿ ಮಾಡಿ ಕೆಡವಿ ಅಪಘಾತಪಡಿಸಿದ ತನಗೆ ಸಾಧಾ ಗಾಯಪಡಿಸಿಕೊಂಡು ಗಾಡಿ ಜಕ್ಕಂಗೊಳಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 265/2018 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.