ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, October 6, 2018

CRIME INCIDENTS 06-10-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:06-10-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ: ಇದರಲ್ಲಿಯ  ಗದೆಗಿಪ್ಪಾ ಇವರ ಹೆಂಡತಿ ಶ್ರೀಮತಿ ಲಕ್ಷ್ಮೀ ಗದಿಗೆಪ್ಪ ಅಂಗಡಿ, ವಯಾ 29 ವರ್ಷ, ಜಾತಿ ಹಿಂದು ಲಿಂಗಾಯತ, ಉದ್ಯೋಗ ಮನೆಗೆಲಸ, ಸಾ: ಕ್ಯಾರಕೊಪ್ಪ ಇವಳು ದಿನಾಂಕ: 02-10-2018 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಮನೆಯಲ್ಲಿ ಯಾರಿಗೂ ಏನೂ ಹೇಳದೇ ಕೇಳದೇ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 16/2018 ಕಲಂ ಮಹಿಳಾ ಕಾಣೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಹಳಿಯಾಳ ರಸ್ತೆ ಮಂಗ್ಯಾನ ಪೂಲದಿಂದ ಉಳ್ಳಾಗಡ್ಡಿ ಸರವಿನ ಹತ್ತಿರ ರಸ್ತೆ ಮೇಲೆ ಯಾವದೋ ವಾಹನ ಚಾಲಕನು ತನ್ನ ವಾಹನವನ್ನು ಹಳಿಯಾಳ ಕಡೆಯಿಂದ ಕಲಘಟಗಿ ಕಡೆಗೆ ಅತಿಜೋರು ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಯಾವದೋ ಅನಾಮದೇಯ ವ್ಯಕ್ತಿ ವಯಾ 35 ರಿಂದ 40 ವರ್ಷ ವಯಸ್ಸಿನವನು ರಸ್ತೆ ಮೇಲೆ ನಡೆದುಕೊಂಡು ಬರುತ್ತಿರುವಾಗ ಅಥವಾ ರಸ್ತೆ ದಾಟುತ್ತಿರುವಾಗ ಡಿಕ್ಕಿ ಮಾಡಿ ಅಪಘಾತ ಪಡಿಸಿ ಸ್ಥಳದಲ್ಲಿಯೇ ಮರಣ ಪಡಿಸಿ ವಾಹನ ಸಮೇತ ಪರಾರಿಯಾಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 228/2018 ಕಲಂ 304 (ಎ) ಹಾಗೂ ವಾಹನ ಕಾಯ್ದೆ 134.187.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.