ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, October 8, 2018

CRIME INCIDENTS 08-10-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:08-10-2018 ರಂದು ವರದಿಯಾದ ಪ್ರಕರಣಗಳು

1. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಪಶುಪತಿಹಾಳ ಗ್ರಾಮದ ಮಂಗ್ಯಾನ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇದರಲ್ಲಿ ಆರೋಪಿತನಾದ ಜಯಪ್ಪಾ ಕೋಳಿವಾಡ ಈತನು ಯಾವುದೇ ಪಾಸು ವ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ತನ್ನ ಬಾಬತ್  ಬೆಂಗಳೂರು ಮಾಲ್ಟ್ ವಿಸ್ಕಿ 90 ಎಂ.ಎಲ್. ದ 31 ಟೇಟ್ರಾ ಪಾಕೇಟ್ ಗಳು ಅದರ ಅಃಕಿಃ 758 ರೂ 57 ಪೈಸೆ ಕಿಮ್ಮತ್ತಿನವುಗಳನ್ನು ಅಕ್ರಮವಾಗಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 83/2018 ಕಲಂ 32.34 ಅಬಕಾರಿ ಕಾಯ್ದಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ ಗ್ರಾಮದ ಯಾರೋ ಕಳ್ಳರು ರಂದು ಪಿರ್ಯಾದಿದಾರನ ಬಾಬತ್ ಅಣ್ಣಿಗೇರಿ ಹಾಗೂ ಬಸಾಪುರ ಹದ್ದಿಯಲ್ಲಿರುವ ಜಮೀನದಲ್ಲಿ ಇದ್ದ ಮೂರು ಸೋಲಾರ್ ಪಂಪಸೆಟ್  ಪ್ಯಾನಲ್ ಅಕಿ: 49,000/- ನೇದ್ದವುಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 102/2018 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸದ್ದು ಇರುತ್ತದೆ.

3. ಕುಂದಗೋಳ ಪೊಲೀಸ ಠಾಣಾ ವ್ಯಾಪ್ತಿಯ: ಭರದ್ವಾಡ ಗ್ರಾಮದ ಆರೋಪಿತನಾದ ವಿನಾಯಕ ಅಶೋಕ ಸಾವಂತ. ಸಾ: ಭರದ್ವಾಡ, ತಾ: ಕುಂದಗೋಳ ಈತನು ಅತೀಕ್ರಮ ಪ್ರವೇಶ ಮಾಡಿದ್ದು ವೀರಭದ್ರಯ್ಯ ಅಕ್ಕಿಮಠ ಅವರ ಮನೆಯ ಜನರು ನಮ್ಮ ಮನೆಗೆ ಏಕೆ ಬರುತ್ತಿ ಅಂತಾ ಅಂದಿದ್ದಕ್ಕೆ ಪಿರ್ಯಾದಿಗೆ ಕೈಯಿಂದ ಹೊಡೆ ಬಡೆ ಮಾಡಿ ಕಾಲಿನಿಂದ ಜಾಡಿಸಿ ಒದ್ದು ಅವಾಚ್ಯ ಶಬ್ದಗಳಿಂದ ಬೈಯ್ದಾಡಿದ್ದಲ್ಲದೇ ಬಿಡಿಸಲು ಹೋದ ಹೆಂಡತಿಗೆ ಅವಾಚ್ಯ ಬೈಯ್ದಾಡಿ ಅವಳಿಗೆ ಮಾನಭಂಗಪಡಿಸುವ ಉದ್ದೇಶದಿಂದ ಅವಳು ಧರಿಸಿದ್ದ ಜಂಪರನ್ನು ಹರಿದು ಬೆನ್ನು ಕಾಣುವಂತೆ ಅವಮಾನಪಡಿಸಿ ಕೈಯಿಂದ ಹೊಡೆ ಬಡೆ ಮಾಡಿ ಇದೊಮ್ಮೆ ಉಳಕೊಂಡ್ರಿ ಇನ್ನೊಮ್ಮೆ ಸಿಗ್ರಿ ನಿಮ್ಮನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 153/2018 ಕಲಂ 23.354(ಬಿ)448.504.506.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ನವಲಗುಂದ ರಸ್ತೆ ಶಿವಳ್ಳಿ ಗ್ರಾಮದ ಹತ್ತಿರ ರಸ್ತೆ ಮೇಲೆ ಕಾರ ನಂ ಕೆಎ 25 ಪಿ 2212  ನೇದ್ದರ ಚಾಲಕನಾದ ಅನಂತ ತಂದೆ ರತ್ನಾಕರ ಮಳಿಯೆ ಸಾಃಹುಬ್ಬಳ್ಳಿ ಇವನು  ಬ್ಯಾಹಟ್ಟಿ ಕಡೆಯಿಂದ ಅತೀವಾಗಿ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯ ವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನವಲಗುಂದ ಕಡೆಗೆ ರಸ್ತೆ ಎಡಸೈಡಿನಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟರ ಸೈಕಲ ನಂ   ಕೆಎ 25 ಈಎನ್ 9709 ನೇದ್ದಕ್ಕೆ ಅಪಘಾತ ಪಡಿಸಿ ಅಪಘಾತದಲ್ಲಿ ಮೋಟರ ಸೈಕಲ ಚಾಲಕ ಬಸವರಾಜ ತಂದೆ ಭಿಮಪ್ಪ ಯರಗಟ್ಟಿ ವಯಾ42ವರ್ಷ ಜಾತಿ ಹಿಂದೂ ಕುರುಬ ಉದ್ಯೋಗಃಚಾಲಕ ಸಾ:ಕಳ್ಳಿಮಠ ಓಣಿ ನವಲಗುಂದ ಇವನಿಗೆ ಹಾಗೂ ಮೋಟರ ಸೈಕಲ ಹಿಂದೆ ಕುಳಿತ ಪಿರ್ಯಾದಿಯಾದ ಸೀತಮ್ಮ ಕೋಂ ಬಸವರಾಜ ಯರಗಟ್ಟಿ ವಯಾ 36 ವರ್ಷ ಜಾತಿ ಹಿಂದೂ ಕುರುಬ ಉದ್ಯೋಗಃಮನೆಗೆಲಸ ಸಾ:ಕಳ್ಳಿಮಠ ಓಣಿ ನವಲಗುಂದ  ಇವರಿಗೆ ಸಾದಾ ವ ಭಾರಿ ಗಾಯ ಪಡಿಸಿ ಎರಡು ವಾಹನಗಳನ್ನು ಜಖಂಗೋಳಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 235/2018 ಕಲಂ 279.337.338.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.