ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, October 9, 2018

CRIME INCIDENTS 09-10-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:09-10-2018 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಶೆಲವಾಡಿ ಗ್ರಾಮದ ಲಾರಿ ನಂ.AP-29/TA-8399 ನೇದ್ದರ ಚಾಲಕ ರಾಜು ಬೀರಯ್ಯ ಭಂಡ ವಯಾ:23 ವರ್ಷ ಸಾ:ಅರ್ಕಪಲ್ಲಿ ತಾ:ಕಲವಕುರ್ತಿ ರಾಜ್ಯ: ತೆಲಂಗಾಣ ಈತನು ತಾನು ನಡೆಯಿಸುತ್ತಿದ್ದ ಲಾರಿ ನಂ.AP-29/TA-8399 ನೇದ್ದನ್ನು ನವಲಗುಂದ ಕಡೆಯಿಂದ ರೋಣ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಿಂದ ನಡೆಯಿಸಿಕೊಂಡು ಬಂದು ಶೆಲವಡಿ ದಾಟಿದ ನಂತರ 4 ಕಿ.ಮೀ ಅಂತರದಲ್ಲಿರುವ ಹನುಮಂತಪ್ಪ ಬ್ಯಾಹಟ್ಟಿ ರವರ ಹೊಲದ ಮುಂದಿನ ರಸ್ತೆಯ ಮೇಲೆ ಲಾರಿಯನ್ನು ಪಲ್ಟಿ ಮಾಡಿ ತನಗೆ ಮತ್ತು ಸಾದಾ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ  ಗುನ್ನಾನಂ 158/2018 ಕಲಂ 279.337 ನೇದ್ದರಲ್ಲಿ ಪ್ರಕರನವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ವರೂರ ಗ್ರಾಮದ ಕಲ್ಟ್ ಹೊಟೇಲ್ ಹತ್ತಿರ, ಪೂನಾ ಬೆಂಗಳೂರು ರಸ್ತೆಗೆ, ಹೊಂದಿಕೊಂಡಿರುವ ಸರ್ವಿಸ್ ರಸ್ತೆಯ ಮೇಲೆ, ಆರೋಪಿತನಾದ ರಾಜೇಶ ಚಂದ್ರಶೇಖರ ನಾಡಗೌಡ ಸಾ. ಗೋಕುಲ ರಸ್ತೆ, ಹುಬ್ಬಳ್ಳಿ ಇತನು ಕಾರ ನಂಬರ ಕೆಎ-25-ಎಂ.ಬಿ.-3337 ನೇದ್ದನ್ನು ಕಲ್ಟ್ ಹೋಟೇಲ್ ಕಡೆಯಿಂದ ವರೂರ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ವರೂರ ಕಡೆಯಿಂದ ಸೂರಶೆಟ್ಟಿಕೊಪ್ಪ ಕಡೆಗೆ ಪಿರ್ಯಾದಿ ಶಂಭುಲಿಂಗಯ್ಯ ಚನ್ನಯ್ಯ ಚಿಕ್ಕಮಠ ಸಾ. ಅಗಡಿ ಇವರು ನಡೆಯಿಸಿಕೊಂಡು ಹೊರಟಿದ್ದ ಮೋಟರ ಸೈಕಲ್ ನಂಬರ ಕೆಎ-63-ಹೆಚ್-0664 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಪಿರ್ಯಾದಿಗೆ ಸಾದಾ ಗಾಯಪಡಿಸಿದ್ದಲ್ಲದೇ, ಮೋಟರ ಸೈಕಲ್ ಹಿಂಬದಿ ಕುಳಿತುಕೊಂಡಿದ್ದ ಕಾಡಯ್ಯ ಸಿದ್ದಯ್ಯ ಮಠಪತಿ ವಯಾ. 45 ವರ್ಷ ಸಾ. ಅಗಡಿ ಇವರಿಗೆ ತಲೆಗೆ, ಕಾಲಿಗೆ ಭಾರಿ ರಕ್ತ ಗಾಯಪಡಿಸಿ, ಸದರಿಯವನು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಪಚಾರ ಹೊಂದುತ್ತಿದ್ದಾಗ, ದಿನಾಂಕ: 08-10-2018 ರಂದು 2120 ಗಂಟೆಗೆ ಉಪಚಾರ ಹೊಂದದೇ, ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 268/2018 ಕಲಂ 279.337.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಬ್ಯಾಹಟ್ಟಿ ಗ್ರಾಮದ ಮೃತ ಭೀಮಪ್ಪ @ ಮುದಕಪ್ಪ ತಂದೆ ಹನಮಂತಪ್ಪ ಮೆಣಸಿನಕಾಯಿ ವಯಾ 28 ವರ್ಷ ಇವನು ತನ್ನ ತಂದೆ ಈಗ 6-7 ವರ್ಷಗಳ ಹಿಂದೆ ಬ್ಯಾಹಟ್ಟಿ ಗ್ರಾಮದ ಸಿಂಡಿಕೇಟ್ ಬ್ಯಾಂಕಿನಲ್ಲಿ ರೂಪಾಯಿ ಒಂದು ಲಕ್ಷ ರೂ ಗಳನ್ನು ಬೆಳೆ ಸಾಲ ಮಾಡಿ ತೀರಿಸಲಾಗದೇ ಮನನೊಂದು ತನ್ನಷ್ಟಕ್ಕೆ ತಾನೆ ತನ್ನ ಮನೆಯ ಮಲಗುವ ಕೋಣೆಯ ಕಬ್ಬಿಣದ ಪೈಪಿಗೆ ಪ್ಲ್ಯಾಸ್ಟಿಕ್ ಪಟ್ಟಿಯಿಂದ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿನಃ ಸದರಿಯವನ ಮರಣದಲ್ಲಿ ಬೇರೆ ಯಾವುದೆ ಸಂಶಯ ವಗೈರೆ ಇರುವುದಿಲ್ಲ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 48/2018 ಕಲಂ 48/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.