ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, October 10, 2018

CRIME INCIDENTS 10-10-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:10-10-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಇನಾಮವೀರಾಪೂರ ದೇವನಗೌಡ ಹನಮಂತಗೌಡ ಪಾಟೀಲ ಇವರ ಜಮೀನ ಬಾಜುಕ್ಕಿನ ಸರಕಾರಿ ಗುಡ್ಡದಲ್ಲಿ ಇದರಲ್ಲಿಯ ಆರೋಪಿತರಾದ 1) ಶಿವಪ್ಪ ಮಾದೇವಪ್ಪ ವಾಲೀಕಾರ ಸಾ!! ಗಿರಿಯಾಲ 2) ತುಳಜಪ್ಪ ರಾಮಚಂದ್ರ ಸಾಳುಂಕೆ ಸಾ!! ಗಿರಿಯಾಲ 3) ಹನಮಂತಪ್ಪ ಯಲ್ಲಪ್ಪ ಬೋಟೆನ್ನವರ ಸಾ!! ಗಿರಿಯಾಲ 4) ಫಕ್ಕೀರಪ್ಪ ತಾಯಿ ಫಕ್ಕೀರವ್ವ ಚಿಂತಗಾಲ ಸಾ!! ಗಿರಿಯಾಲ 5) ದೊಡ್ಡೇಶ ಶಿವಪ್ಪ ಬಾಲರಡ್ಡಿ ಸಾ!! ಕಟ್ನೂರ 6) ಶ್ರೀಕಾಂತ ಶಿವಪ್ಪ ವಾಲೀಕಾರ ಸಾ!! ಗಿರಿಯಾಲ ಇವರುಗಳು ಇದರಲ್ಲಿಯ ಮೃತ ದೇವಪ್ಪ ಬಸಪ್ಪ ಸಲಗಾರ ವಯಾ 65 ವರ್ಷ ಸಾ!! ಗಿರಿಯಾಲ ಇತನು ಸಾಕ್ಷೀದಾರರಾದ ಸಿದ್ರಾವ್ ಘೋರ್ಪಡೆ, ಯಂಕವ್ವ ಕೊಂ ನಾರಾಯಣಪ್ಪ ಬಿಂಗಿ ಇವರ ಪರವಾಗಿ ಸಿವ್ಹಿಲ್ ದಾವೆಗೆ ಸಪೋರ್ಟ ಮಾಡಿದ್ದರ ಸಿಟ್ಟಿನಿಂದ ಕೊಲೆ ಮಾಡುವ ಉದ್ದೇಶದಿಂದ  ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆ, ಕಲ್ಲು ಹಿಡಿದುಕೊಂಡು ಬಂದು ಮೃತ ದೇವಪ್ಪ ಬಸಪ್ಪ ಸಲಗಾರ ಸಾ!! ಗಿರಿಯಾಲ ಇವರಿಗೆ ತಲೆಗೆ, ಮೈಕೈಗೆ ಹೊಡೆದು ಭಾರಿ ಗಾಯಪಡಿಸಿ ಕೊಲೆ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 269/2018 ಕಲಂ 143.147.148.302.201.504.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಟದೂರ ಗ್ರಾಮದ ಈರಣ್ಣನ ದೇವಸ್ಥಾನದ ಮುಂದೆ  ಆರೋಪಿತರಾದ 1.ಮಂಜುನಾಐ ಹುಬ್ಬಳ್ಳಿ ಹಾಗೂ ಇನ್ನೂ 04 ಜನರು ಗುಂಪುಗೂಡಿಕೊಂಡು ತಮ್ಮ ಕೈಯಲ್ಲಿ ಬಡಿಗೆಗಳನ್ನು ಹಾಗೂ ಕಬ್ಬಿಣದ ರಾಡಗಳನ್ನು ಹಿಡಿದುಕೊಂಡು ಯಲ್ಲಪ್ಪ ಕೊಪ್ಪದ ಇವರಿಬ್ಬರಿಗೂ ಅಡ್ಡಗಟ್ಟಿ ತರುಬಿ ಅವಾಚ್ಯ ಬೈದಾಡಿ ನಿಮ್ಮನ್ನ ಇವತ್ತು ಒಂದು ಗತಿ ಕಾಣಸೇ ಬಿಡತೇವಿ ಅಂತಾ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಯಲ್ಲಪ್ಪ ಕೊಪ್ಪದ ಈತನ ಹಿಂದೆಲೆ ಜೋರಾಗಿ ಹೊಡೆದಿದ್ದು, ಯಲ್ಲಪ್ಪನ ಮೈ ಕೈಗಳಿಗೆ ಹೊಡೆ ಬಡೆ ಮಾಡಿ, ತಲೆ ಕೂದಲನ್ನು ಹಿಡಿದು ಅವನ ಮುಖಕ್ಕೆ ಕೈಯಿಂದ ಹೊಡೆ ಬಡೆ ಮಾಡಿ, ಒಂದು ಗತಿ ಕಾಣಸೇ ಬಿಡುತ್ತೇನೆ ಅಂತಾ ಅಂದವನೇ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿ ಜೋರಾಗಿ ಹೊಡೆದು ಗಾಯಪೆಟ್ಟುಗಳಾಗುವಂತೆ ಮಾಡಿದ್ದಲ್ಲದೇ ಗಾಯಾಳು ಯಲ್ಲಪ್ಪ ಕೊಪ್ಪದ ಇವರಿಗೆ ಇದೊಮ್ಮೆ ಉಳಕೊಂಡಿರಿ ಇನ್ನೊಮ್ಮೆ ಸಿಗ್ರಿ ನಿಮ್ಮನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 154/2018 ಕಲಂ 143.147.148.323.324.341.307.504.506.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ