ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, November 30, 2018

CRIME INCIDENTS 30-11-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-11-2018 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದ ಹುಬ್ಬಳ್ಳಿ ರಸ್ತೆಯ ಕಾಲವಾಡ ಕ್ರಾಸ್ ಹತ್ತಿರದ ರಸ್ತೆಯ ಮೇಲೆ ಆರೋಪಿತ ಬಸವರಾಜ ತಂದೆ ಮಹೇಶ ಶೆಟ್ಟರ ವಯಾ 35 ವರ್ಷ ಈತನು ತಾನು ಚಲಾಯಿಸುತ್ತಿದ್ದ ಬಜಾಜ ಪಲ್ಸರ್ 220 ಸಿಸಿ ಮೋಟರ್ ಸೈಕಲ್ ನಂಬರ್ KA-25/EZ-4316 ನೇದ್ದನ್ನು ನವಲಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾಲವಾಡ ಕ್ರಾಸ್ ಹತ್ತಿರ ಇರುವ ರೋಡ ಬ್ರೆಕ್ ಮೇಲೆ ವೇಗವನ್ನು ನಿಯಂತ್ರಣ ಮಾಡಲಾಗದೇ ಮೋಟರ್ ಸೈಕಲನ್ನು ಸ್ಕಿಡ್ ಮಾಡಿ ಬೀಳಿಸಿ ಅಪಘಾತ ಪಡಿಸಿ ಅವನ ತಲೆಗೆ, ಮುಖಕ್ಕೆ ಭಾರೀ ಪ್ರಮಾಣದ ಗಾಯ ಪೆಟ್ಟು ಪಡಿಸಿಕೊಂಡು ಅವನನ್ನು ಉಪಚಾರಕ್ಕೆ ಅಂತಾ ನವಲಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗಿಯೂ ಸಹಿತ ಉಪಚಾರ ಫಲಿಸದೇ ಮರಣ ಹೊಂದುವಂತೆ ಮಾಡಿಕೊಂಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ ಠಾಣೆಯಲ್ಲಿ ಗುನ್ನಾನಂ 113/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಶಿರೂರ ಗ್ರಾಮದ ಪಿರ್ಯಾದಿಯ ಮನೆಯ ಮುಂದೆ ಆರೋಪಿತರಾದ 1) ಪಕ್ಕೀರಪ್ಪ ಬಸಪ್ಪ ತಾಯಿತಂದಿ, 2) ಮಹೇಶ ಪಕ್ಕೀರಪ್ಪ ತಾಯಿತಂದಿ, 3) ಮಂಜುನಾಥ ಬಸಪ್ಪ ತಾಯಿತಂದಿ, ಸಾ: ಮೂರು ಜನರು ಶಿರೂರ ಇವರು ಚಕ್ಕಡಿಯನ್ನು ನಿಲ್ಲಿಸಿ ಪಿರ್ಯಾದಿಯ ಮನೆಯ ಜನರಿಗೆ ತೊಂದರೆಯನ್ನು ಮಾಡಿದ್ದಕ್ಕೆ ವಿಚಾರಿಸಿದ ಪಿರ್ಯಾದಿ ಹಾಗೂ ಪಿರ್ಯಾದಿಯ ತಾಯಿ ದ್ಯಾಮಕ್ಕ ಬಸಪ್ಪ ಬಡಿಗೇರ ಇವರೊಂದಿಗೆ ಆರೋಪಿತರು ತಂಟೆ ತೆಗೆದು, ಅವಾಚ್ಯ ಬೈದಾಡಿ, ಅಡ್ಡಗಟ್ಟಿ ತರುಬಿ ಕೈಯಿಂದ ಹೊಡೆ ಬಡೆ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 181/2018 ಕಲಂ 323.341.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ ನೆಹರೂ ನಗರದ ಪಿರ್ಯಾದಿ ಮನೆಯಲ್ಲಿಂದ ಇದರಲ್ಲಿ ಕಾಣೆಯಾದ ಗಾಯಿತ್ರಿ ಕೋಂ ವಿಠ್ಠಲ ಕದಂ. ವಯಾ: 45 ವರ್ಷ ಇವಳು ತನ್ನ ತವರು ಮನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು ಇದೂವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 182/2018 ಕಲಂ ಮಹಿಳೆ ಕಾಣೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Thursday, November 29, 2018

CRIME INCIDENTS 29-11-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-11-2018 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಪಟ್ಟಣದ ಅಗಸೀ ಓಣಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ತನ್ನ ಫಾಯದೇಗೋಸ್ಕರ  ಆರೋಪಿತನಾದ  ಅಮೃತ ಬಣಗಾರ ಇತನು ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಅಂಕಿ ಸಂಖ್ಯೆಗಳ ಸಹಾಯದಿಂದ ಓ..ಸಿ ಮಟಕಾ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ.560-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 112/2018 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನರೇಂದ್ರ ಗ್ರಾಮದ ನರೇಂದ್ರ ಟೋಲ ಹತ್ತಿರ  1)ಲಾರಿ ನಂ HR 55 P 0244 ಮತ್ತು 2)ಲಾರಿ ನಂ MH 23 AU 1247 ನೇದ್ದವುಗಳ ಚಾಲಕರಿಗೆ ಪಿರ್ಯಾದಿ ಶಿವಾನಂದ ತಂದೆ ವಿ ಸತ್ತಿಗೆರಿ ವಯಾಃ30ವರ್ಷ ಜಾತಿಃಹಿಂದೂ ಉಣಕಲ್ ಕ್ರಾಸ್ ಹಿಂದೂ ಭವನ ಹುಬ್ಬಳ್ಳಿ  ಹಾಗೂ ಇವನೊಂದಿಗೆ ಇದ್ದ ಸ್ನೇಹಿತರು  ಕೂಡಿ ಲಾರಿಯ್ಲಲಿ ಇದ್ದ ಮಾಲಿನ ಬ್ಗಗೆ ವಿಚಾರಿಸುತ್ತಿರುವಾಗ 10 ರಿಂದ 15 ಜನರು ಕೂಡಿಕೊಂಡು ಅನುದೀಪ ಕುಲ್ಕರ್ಣಿ ಇವನಿಗೆ ತಲವಾರದಿಂದ ಹೊಡೆದು ಹಾಗೂ  ಪಿರ್ಯಾದಿಗೆ ಹಾಗೂ ಪಿರ್ಯಾದಿಯ ಸ್ನೇಹಿತರಿಗೆ ಅವಾಚ್ಯವಾಗಿ ಬೈದಾಡಿ ವೀರುಪಾಕ್ಷ ಜೋಡಳ್ಳಿ ಹಾಗೂ ಲಕ್ಷ್ಮಣ ಹೂಗಾರ ಇವರಿಗೆ ಹೊಡೆದು ಜೀವದ ದಮಕಿ ಹಾಕಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 28/2018 ಕಲಂ ARMS ACT, 1959 (U/s-27); IPC 1860 (U/s-506,148,147,143,504,324,149) ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:  ನರೇಂದ್ರ ಟೋಲ ಹತ್ತಿರ ಯಾರೋ 10 ರಿಂದ 15 ಜನ ಆರೋಪಿತರು ಕೂಡಿಕೊಂಡು ಪಿರ್ಯಾದಿ ಜುಬೇರಾ ತಂದೆ ಸಮಶುದ್ದಿನ ಬೇಪಾರಿ ಸಾಃಬೆಳಗಾಂವ ಇವನಿಗೆ ಅವಾಚ್ಯವಾಗಿ ಬೈದಾಡಿ ಕಟ್ಟಿಗೆಯಿಂದ  ಕೈಯಿಂದ ಹೊಡೆದು ಕಾಲಿನಿಂದ ಒದ್ದು ಜೀವದ ದಮಕಿ ಹಾಕಿದ್ದು ಇರುತ್ತದೆ ಈ ಕುರಿತು  ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 282/2018 ಕಲಂ 506.504.148.143.149.147.323.324.ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Wednesday, November 28, 2018

CRIME INCIDENTS 28-11-2018


ದಿನಾಂಕ. 28-11-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 28-11-2018 ರಂದು 1415 ಗಂಟೆಗೆ ಕುಂದಗೋಳ ಹೊರವಲಯದ ಬೆಟದೂರ ಕ್ರಾಸ್ ಹತ್ತಿರ ಪೀರಪ್ಪ ಯಲ್ಲಪ್ಪ ಮಾನಪ್ಪನವರ, ಸಾ: ಅಗಸಿಹೊಂಡ ಕುಂದಗೋಳ ಈತನು ತನ್ನ ಪಾಯ್ದೆಗೋಸ್ಕರ ಸಾರ್ವಜನಿಕರಿಂದ ಓ.ಸಿ ಅಂಕಿ ಸಂಖ್ಯೆಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿಸಿಕೊಂಡು ಓ.ಸಿ ಆಟ ಆಡುತ್ತಿರುವಾಗ ದಾಳಿ ಕಾಲಕ್ಕೆ ಸಿಕ್ಕಿದ್ದು, ಸದರಿಯವನು ಬರೆದ ಓ.ಸಿ ಪಟ್ಟಿಯನ್ನು ಹನಮಂತಪ್ಪ ದೊಡ್ಡಮನಿ, ಸಾ: ಅಂಬೇಡ್ಕರನಗರ ಕುಂದಗೋಳ ಈತನ ಬಳಿಗೆ ಕೊಡುವುದಾಗಿ ತಿಳಿಸಿದ ಅಪರಾಧ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2) ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 28-11-2018 ರಂದು 1730 ಗಂಟೆಗೆ ಯಲಿವಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ 1) ರಾಜೇಸಾಬ ಹಸನಸಾಬ ನದಾಪ, 2) ಇಮಾಮಸಾಬ ರಾಜೇಸಾಬ ನದಾಫ, ಸಾ: ಇಬ್ಬರೂ ಯಲಿವಾಳ ತಾ: ಕುಂದಗೋಳ ಇವರು ತಮ್ಮ ಪಾಯ್ದೆಗೋಸ್ಕರ ಓ.ಸಿ ಅಂಕಿಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಹಚ್ಚಿಸಿಕೊಂಡು ಓ.ಸಿ ಆಟ ಆಡುತ್ತಿದ್ದಾಗ ಸಿಕ್ಕಿದ್ದು ಸದರಿಯವರು ಬರೆದ ಓ.ಸಿ ಪಟ್ಟಿಯನ್ನು ಹನಮಂತಪ್ಪ ದೊಡ್ಡಮನಿ, ಸಾ: ಕುಂದಗೋಳ ಅಂಬೇಡ್ಕರನಗರ ಇವನ ಬಳಿಗೆ ಕೊಡುವುದಾಗಿ ತಿಳಿಸಿದ ಅಪರಾಧ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 07-11-2018 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಫಿರ್ಯಾದಿ ಎಮ್.ಎಮ್. ಸುಂಕದ ಇವರ ಮಗಳಾದ ಶಾಹೀದಾ ಮಹ್ಮದಅಲಿ ಸುಂಕದ ವಯ:19 ವರ್ಷ ಸಾ:ಬಸವೇಶ್ವರ ನಗರ ನವಲಗುಂದ ಈತಳು ತನ್ನ ಮನೆಯಿಂದ ಬಹಿರ್ದೇಸಿಗೆ ಹೋಗುತ್ತೇನೆ ಅಂತಾ ಹೇಳಿ ಹೋದವಳು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕಃ 26/11/2018 ರಂದು ಸಾಯಂಕಾಲ 04-00 ಗಂಟೆಗೆ ಬ್ಯಾಹಟ್ಟಿ ಗ್ರಾಮದ ಪಿರ್ಯಾದಿಯ ಮನೆಯಿಂದ ಪಿರ್ಯಾದಿಯ ಹೆಂಡ್ತಿ ನಿಂಗವ್ವ ಕೋಂ ಹನಮಂತ ದೊಡ್ಡಮ್ಮನವರ ವಯಸ್ಸು 19 ವರ್ಷ ಸಾಃ ಬ್ಯಾಹಟ್ಟಿ ಇವಳು ಮನೆಯಲ್ಲಿ ಬಹಿರ್ದೇಸೆಗೆ ಹೋಗುತ್ತೇನೆ ಅಂತಾ ಹೇಳಿ ಹೋದವಳು, ಯಾರದೊ ಅಪರಿಚಿತರ ಮೋಟರ ಸೈಕಲ್ ಮೇಲೆ ಹತ್ತಿಕೊಂಡು ಹೇಳದೆ ಕೇಳದೆ ನವಲಗುಂದ ಕಡೆಗೆ ಹೋದವಳು, ಇಲ್ಲಿಯವರೆಗೆ ಮನೆಗೆ ಬಾರದೇ, ಎಲ್ಲ ಕಡೆ ಹುಡುಕಾಡಿದರೂ ಸಿಗದೇ ಕಾಣೆಯಾಗಿರುತ್ತಾಳೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.Tuesday, November 27, 2018

CRIME INCIDENTS 27-11-2018


ದಿನಾಂಕ. 27-11-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ-19-11-2018 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ಗಂಬ್ಯಾಪೂರ ಗ್ರಾಮದ ಆರೋಪಿ ಬಸಪ್ಪ ತಡಸದ ಇತನ ಪಿರ್ಯಾಧಿ ಮಹಾದೇವಿ ತಡಸದ ಇವಳ ಗಂಡನಿದ್ದು ಪಿರ್ಯಾಧಿಯು ತನ್ನ ಮಕ್ಕಳಿಗೆ ಜಮೀನದಲ್ಲಿ ಪಾಲು ಕೊಡು ಅಂತಾ ಕೇಳಲು ಪಿರ್ಯಾಧಿಯ ಮನೆಗೆ ಕೇಳಲು ಹೋದಾಗ ಆರೋಫಿತನು ಯಾವ ಜಮೀನು ಎಲ್ಲಾ ಜಮೀನನ್ನು ನಾನೆ ದುಡಿದು ಹಿಡಿದಿರುತ್ತೇನೆ ನೀವು ಎಲ್ಲಿಯಾದರೂ ದುಡಿದು ಹಿಡಿರಿ ಅಂತಾ ಅಂದಾಗ ಸದರ ಜಮೀನದಲ್ಲಿ ನಮಗೂ ಹಕ್ಕು ಇದೆ ಜಮೀನು ಯಾಕೆ ಕೊಡುವದಿಲ್ಲಾ ಅಂತಾ ಅಂದಾಗ ಆರೋಪಿ 2 ಮಲ್ಲಪ್ಪ ನವಲೂರ ನೇದವನ ಪ್ರಚೋಚದನೆಯಿಂದಾ ಆರೋಪಿ ನಂ 1 ನೇದವನು ಪಿರ್ಯಾದಿಗೆ ಬಡಿಗೆಯಿಂದಾ ಮೈಕೈಗೆ ಹೊಡೆದಾಗ ಪಿರ್ಯಾಧಿಯು ಜೋಲಿ ಹೋಗಿ ಸಿಮೆಂಟ್ ಕಟ್ಟಿಗೆ ಬಿದ್ದು ಬಲಗಾಲ ಮೊಣಕಾಲ ಕೆಳಗೆ ಗಾಯಪಡಿಸಿ ಇನ್ನೊಮ್ಮೆ ಜಮೀನದಾಗ ಪಾಲು ಕೇಳಲು ಬಂದರೆ ನಿಮ್ಮನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕತಣ ದಾಖಲಾಗಿದ್ದು ಇರುತ್ತದೆ.

2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಮೃತ ಪ್ರಭು ಸಿದ್ದಪ್ಪ ಸಾ: ಕಿರೇಸೂರ ಇತನು ತಾವು ಮಾಡಿದ ಬ್ಯಾಂಕ ಸಾಲ ಹಾಗೂ ಟ್ರ್ಯಾಕ್ಟರ್ ಸಾಲ ಮಾಡಿದ್ದು 3 ವರ್ಷದಿಂದ ಸರಿಯಾಗಿ ಮಳೆ ಬಾರದ್ದರಿಂದ ಸಾಲ ಹೇಗೆ ತೀರಿಸುವದು ಅಂತಾ ಮನಸ್ಸಿಗೆ ಬೇಜಾರ ಮಾಡಿಕೊಂಡು ದಿನಾಂಕ 27/11/2018 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಉರುಳು ಹಾಕಿಕೊಂಡಿದ್ದು ಉಪಚಾರಕ್ಕೆ ಕರೆದುಕೊಂಡು ಹೋಗುತ್ತಿರುವಾಗ ದಾರಿ ಮಧ್ಯದಲ್ಲಿ ಮೃತ ಪಟ್ಟಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

CRIME INCIDENTS 26-11-2018ದಿನಾಂಕ. 26-11-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಗರಗ ಪೊಲೀಸ ಠಾಣೆ ಹದ್ದಿ ಪೈಕಿ ಕುರಬಗಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ರಸ್ತೆಯ ಬದಿಗೆ ದಿನಾಂಕಃ 25-11-2018 ರಂದು 22-40 ಅವರ್ಸಕ್ಕೆ ಆರೋಪಿತರು 1) ಬಸಪ್ಪ ಭೀಮಪ್ಪ ಗೋವನಕೋಪ್ಪ. 2) ಈಶ್ವರ ಕೂಬಪ್ಪ ಕುಬಿಹಾಳ, 3) ಚನ್ನಪ್ಪ ಬಾಳಪ್ಪ ಪುಂಡಪ್ಪನವರ ಸಾ: ಕುರುಬಗಟ್ಟಿ ಇವರು ತಮ್ಮ ತಮ್ಮ ಫಾಯ್ದಗೋಸ್ಕರ ಇಸ್ಪೇಟ ಎಲೆಗಳ ಸಹಾಯದಿಂದಾ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಅಂಬುವ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕ ಅಪರಾಧ. ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿ..25-11-2018 ರಾತ್ರಿ 9-00 ಗಂಟೆಯಿಂದಾ ದಿ..26-11-2018 ಬೆಳಗಿನ 09-30 ಗಂಟೆಯ ನಡುವಿನ ಅವಧಿಯಲ್ಲಿ ದಾಸ್ತಿಕೊಪ್ಪ ಗ್ರಾಮದ ಹತ್ತಿರ ಇರುವ ನೂರ ಮೇಸ್ತ್ರಿಯ ಗ್ಯಾರೇಜಿನಲ್ಲಿ ರಿಪೇರಿಗೆ ಅಂತಾ ಬಿಟ್ಟ ಪಿರ್ಯಾದಿ ಬಸವರಾಜ ಹಡಪದ ಇವರ ಬಾಭತ್ ಗೂಡ್ಸ ಲಾರಿ ನಂ KA-25-B-9301 ನೇದ್ದರ ಬಲಗಡೆಯ 4 ಟೈಯರಗಳನ್ನು [ಡಿಸ್ಕ ಸಮೇತ] ..ಕಿ..40,000/- ಮತ್ತು ಒಂದು ಬ್ಯಾಟರಿ ಒಟ್ಟು 7,000/- ಕಿಮ್ಮತ್ತಿನೇದವುಗಳನ್ನು ಯಾರೋ ಕಳ್ಳರು ಕಳವು ಕಳುವು ಮಾಡಿದ್ದು ಇರುತ್ತದೆ. ಈ  ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.