ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, November 2, 2018

CRIME INCIDENTS 02-11-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:02-11-2018 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಟದೂರ ಗ್ರಾಮದ ಆರೋಪಿತರಾದ ಮೊದಿನಸಾಬ ಹಳ್ಳಿಯಾಳ ಹಾಗೂ ಇನ್ನೂ 05 ಜನರ ಮನೆ ಮುಂದೆ ಫಕ್ಕಿರಪ್ಪಾ ಮಾದರ ರವರ ಎಮ್ಮೆಯು ಹೋಗಿದ್ದಕ್ಕೆ ಅದನ್ನು ಪಿರ್ಯಾದಿಯ ಸೊಸೆಯು ಹೊಡೆದುಕೊಂಡು ಬರಲು ಹೋದಾಗ ಪಿರ್ಯಾದಿಯ ಹೆಂಡತಿಗೆ ನಮ್ಮ ಮನೆ ಮುಂದೆ ಹಾಯ್ದಾಡಬೇಡಿರಿ ಅಂತಾ ಹೇಳಿದರೂ ಇಲ್ಲೇಕೆ ಹಾಯ್ದಾಡುತ್ತಿರಿ ಅವಾಚ್ಯ ಬೈದಾಡಿ ನೀವು ಹೊಲ್ಯಾರ ಅದಿರಿ ನಮ್ಮ ಮನಿ ಮುಂದ ಬರಾಕ ಹೋಗಬ್ಯಾಡರಿ ಅಂತಾ ಅಂದಿದ್ದು, ಹೊಲ್ಯಾ ಮಕ್ಕಳು ಅಂತಾ ಅಂದು ಜಾತಿ ನಿಂದನೆ ಮಾಡಿ ಇದೊಮ್ಮೆ ಉಳಕೊಂಡಿರಿ ಇನ್ನೊಮ್ಮೆ ನಮ್ಮ ಮನೆ ಮುಂದೆ ಹಾಯ್ದಾಡಿದರ ನಿಮ್ಮನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 166/2018 ಕಲಂ IPC 1860 (U/s-143,147,504,506,149); The SC & ST (Prevention of Atrocities) Amendment Act 2015 (U/s-3(1)(r),3(1)(s)) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಇಂಬ್ರಾಹಿಪುರ ಗ್ರಾಮದ ಸಾವಕ್ಕ ವಯಾ:36 ವರ್ಷ ಈತಳ ಸಂಬಂಧಿಕನಾದ ಆನಂದ ಶಿವಪ್ಪ ಮಾಳಗಿಮನಿ ವಯಾ:26 ವರ್ಷ ಸಾ!! ಬುಡರಸಿಂಗಿ ಹಾಲಿ ವಸ್ತಿ ನಾವಳ್ಳಿ ಈತನು ಪಿರ್ಯಾದಿ ಹೆಂಡತಿಗೆ ಸಲುಗೆಯಿಂದ ಮಾತನಾಡುತ್ತಿದ್ದು ಪೋನ ಮಾಡಿ ಕರೆಯಿಸಿಕೊಂಡು ಅವಳಿಗೆ ಏನೆನೋ ಹೇಳಿ ಪುಸಲಾಯಿಸಿ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಉದ್ದೇಶದಿಂದ ಆರೋಪಿ ಆನಂದ ಶಿವಪ್ಪ ಮಾಳಗಿಮನಿ ಈತನು ಸಾವಕ್ಕ ಹಾಗೂ ಮಗಳಾದ ವಿದ್ಯಾ ವಯಾ:08 ವರ್ಷ ಇವರನ್ನು ಅಪಹರಣ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ ಠಾಣೆಯಲ್ಲಿ ಗುನ್ನಾನಂ 171/2018 ಕಲಂ 363 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕಬ್ಬೆನೂರ  ಗ್ರಾಮದ ಕಲ್ಮೇಶ್ವರ ಗುಡಿ ಹತ್ತಿರ  ಸಾರ್ವಜನಿಕ ಖೂಲ್ಲಾ ಜಾಗೆಯಲ್ಲಿ ಆರೋಪಿತರಾದ ಶಂಕರಪ್ಪಾ ಕಡಿಗುಡ್ಡ ಹಾಗೂ ಇನ್ನೂ 09 ಜನರು ಕೊಡಿಕೊಂಡು ತಮ್ಮ ತಮ್ಮ ಸ್ವಂತ ಪಾಯ್ದೆಗೋಸ್ಕರ ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂಬುವ ಜೂಜಾಟವನ್ನು ಆಡುತಿದ್ದಾಗ ಸಿಕ್ಕಿದ್ದು ಅವರಿಂದ ರೂ 1590-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 255/2018 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ :ಧಾರವಾಡ ಹಳಿಯಾಳ ರೋಡ ಮೇಲೆ ಡೋರವೇಲ್ ಪ್ಯಾಕ್ಟರಿ ಹತ್ತಿರ ಟಿ ವಿ ಎಸ್ ಮೋಟರ ಸೈಕಲ ನಂಬರ ಕೆ ಎ 25 ಯು 7655 ನೇದ್ದನ್ನು ಅದರ ಸವಾರ ಅಶೋಕ ತಂದೆ ಶಂಕ್ರಪ್ಪ ಮನಸೂರ ವಯಾ 60 ವರ್ಷ  ಸಾ:ಮನಸೂರ ಇತನು ಧಾರವಾಡ ಕಡೆಯಿಂದ ಮನಸೂರ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗ ನಿಯಂತ್ರಣ ಮಾಡಲಾಗದೆ  ಸ್ಕೀಡ್ ಮಾಡಿ ಕೆಡವಿ ತನ್ನ ತಲೆಗೆ ಭಾರಿ ಸ್ವರೂಪದ ರಕ್ತ ಘಾಯ ಪಡಿಸಿಕೊಂಡಿದ್ದು  ಉಪಚಾರ ಕುರಿತು ಜಿಲ್ಲಾ ಆಸ್ಪತ್ರೆ ಧಾಖಲ ಮಾಡಿದ್ದು ಹೆಚ್ಚಿನ ಉಪಚಾರಕ್ಕೆ ಎಸ್ ಡಿ ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳಗೆ ಹೊಗುವಷ್ಠರಲ್ಲಿ ಮುಂಜಾನೆ 08-45 ಘಂಟೆಯ ಸುಮಾರಿಗೆ ಮೃತ ಪಟ್ಟಿದ್ದು ಇರುತ್ತದೆ,ಮೃತನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ಮಗನು ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 256/2018 ಕಲಂ 279/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.