ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, November 3, 2018

CRIME INCIDENTS 03-11-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:03-11-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ:ಬಸವ್ವ ಇವರ  ಮೊಮ್ಮಗಳು ಕುಮಾರಿ ನಿರ್ಮಲಾ ತಂದೆ ಫಕ್ಕೀರಪ್ಪ ಅಮಟೂರ, ವಯಾ 19 ವರ್ಷ ಇವಳು ದಿನಾಂಕ: 31-10-2018 ರಂದು ರಾತ್ರಿ 9-30 ಗಂಟೆ ಸುಮಾರಿಗೆ ದೇವರ ಕೋಣೆಯಲ್ಲಿ ಓದುತ್ತಾ ಕುಳಿತಿದ್ದವಳು ಹಿತ್ತಲಕ್ಕೆ ಹೋಗಿ ನಂತರ ಯಾವುದೋ ಕಾರಣಕ್ಕಾಗಿ ಮನೆಯಲ್ಲಿ ಯಾರಿಗೂ ಏನೂ ಹೇಳದೇ ಕೇಳದೇ ಎಲ್ಲಿಯೋ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 20/2018 ಕಲಂ  ಮಹಿಳೆ ಕಾಣೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಬಸಾಫುರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಆರೋಪಿತರಾದ ನಿಂಗಪ್ಪಾ ಇತನು ಸಾರ್ವಜನಿಕ ರಸ್ತೆಯ ಮೇಲೆ ತನ್ನ ಫಾಯದೇಗೋಸ್ಕರ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಅಂಕಿ ಸಂಖ್ಯೆಗಳ ಸಹಾಯದಿಂದ ಓ.ಸಿ ಮಟಕಾ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 260-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ  106/2018 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕೋಳಿವಾಡ ಗ್ರಾಮದ ಆರೋಪಿತರಾದ ಮಾಬುಸಾಬ ದಸ್ತಗೀರಸಾಬ ಕಳ್ಳಿಮನಿ ಸಾಃ ಕೊಳಿವಾಡ ಮತ್ತು ಹನಮಂತಪ್ಪ ದ್ಯಾಮಣ್ಣಾ ಮಜ್ಜಿಗುಡ್ಡ ಸಾಃ ಮಲ್ಲಿಗವಾಡ ಇವರಿಬ್ಬರು ತಮ್ಮ ಫಾಯ್ದೇಗೋಸ್ಕರ ಕೊಳಿವಾಡ ಗ್ರಾಮದ ಬಸ್ಸ್ ಸ್ಟ್ಯಾಂಡ ಹತ್ತಿರ ಯಾವುದೇ ಪಾಸ ವ ಪರ್ಮಿಟ್ ಇಲ್ಲದೇ ಆರೋಪಿ ಸೇಜ್ ನಂಬರ 1 ನೇದವನು 1)  ಒಟ್ಟು 78 ಹೈವರ್ಡ್ಸ 90 ಎಂ.ಎಲ್.ದ ವಿಸ್ಕಿ ಪೌಚಗಳ ಅ.ಕಿ.= 2364 ರೂಪಾಯಿ 2) ಒಟ್ಟು 2 ಓರಿಜನಲ್ ಚಾಯ್ಸ್ 180 ಎಂ.ಎಲ್.ದ ವಿಸ್ಕಿ ಪೌಚಗಳ ಅ.ಕಿ = 121 ರೂಪಾಯಿಗಳು 3) ಒಟ್ಟು 2, 8ಪಿ.ಎಂ ಗಳು 180 ಎಂ.ಎಲ್.ದ ವಿಸ್ಕಿ ಪೌಚಗಳ ಅ.ಕಿ = 148 ರೂಪಾಯಿ 4) ಒಟ್ಟು 10 ಹೈವರ್ಡ್ಸ 180 ಎಂ.ಎಲ್.ದ ವಿಸ್ಕಿ ಪೌಚಗಳ ಅ.ಕಿ= 606 ರೂಪಾಯಿ ಕಿಮ್ಮತ್ತಿನೇದ್ದವುಗಳನ್ನು ಮತ್ತು  ಆರೋಪಿ ಸೇಜ್ ನಂಬರ 2 ನೇದವನು ಒಟ್ಟು 45 ಓಲ್ಡ್ ಟಾರ್ವಿನ್ ವಿಸ್ಕಿ 180 ಎಂ.ಎಲ್. ನೇದ್ದವುಗಳ ಅ.ಕಿ = 3335 ರೂಪಾಯಿ 2) ಒಟ್ಟು 2 ಬ್ಯಾಗ್ ಪೇಪರ ವಿಸ್ಕಿ 180 ಎಂ.ಎಲ್.ದ ಪೌಚಗಳ ಅ.ಕಿ.= 180 ರೂಪಾಯಿ 3) ಒಟ್ಟು 29 ಓರಿಜನಲ್ ಚಾಯ್ಸ್ ವಿಸ್ಕಿ 90 ಎಂ.ಎಲ್.ವಿಸ್ಕಿ ಪೌಚಗಳ ಅ.ಕಿ. = 879 ರೂಪಾಯಿ ಕಿಮ್ಮತ್ತಿನೇದ್ದವುಗಳನ್ನು ಮಾರಾಟ ಮಾಡುತ್ತಿದ್ದಾಗ ಟೇಟ್ರಾ ಪೌಚಗಳ ಸಮೇತ ಸಿಕ್ಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 290/2018 ಕಲಂ 34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಮಕ್ತುಮಸಾಬ ತಂದೆ ರುಸ್ತುಮಸಾಬ ಆಶಮ್ಮನವರ ವಯಾ: 25 ವರ್ಷ ಸಾ: ಬಾನಗಿತ್ತಿಗುಡಿಹಾಳ ಇವನು ದಿನಾಂಕ: 03/11/2018 ರಂದು ಮುಂಜಾನೆ ಬಾನಗಿತ್ತಿಗುಡಿಹಾಳ ಹದ್ದಿಯ ತನ್ನ ಬಾಬತ್ ಹೊಲದಲ್ಲಿಯ ಟೊಮ್ಯಾಟೋ ಬೆಳೆಗೆ ಕ್ರಿಮಿನಾಶಕ ಔಷಧಿ ಹೊಡೆಯಲು ಹೋಗಿ ಹೊಲದಲ್ಲಿರುವ ಬೋರ್ ಚಾಲು ಮಾಡಲು ಹೋದಾಗ ಮುಂಜಾನೆ 10.30 ಗಂಟೆ ಸುಮಾರಿಗೆ ಕರೆಂಟ್ ಶಾಕ್ ಹೊಡೆದು ತ್ರಾಸ್ ಮಾಡಿಕೊಳ್ಳುತ್ತಿದ್ದವನಿಗೆ ಉಪಚಾರಕ್ಕೆ ಮಿಶ್ರೀಕೋಟಿ ಸರಕಾರಿ ದವಾಖಾನೆಗೆ ತೆದುಕೊಂಡು ಹೋಗುವಾಗ ದವಾಖಾನೆ ಸಮೀಪ ಮುಂಜಾನೆ 11.30 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಅವನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತನ ತಂದೆ ಫಿಯಾಱಧೀ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ ಠಾಣೆಯಲ್ಲಿ ಯುಡಿನಂ 63/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. . ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ :ಕಲಘಟಗಿ ಗ್ರಾಮದ ಮೃತ ದೀಪಕ ತಂದೆ ಯಲ್ಲಪ್ಪ ಗೌಡರ ವಯಾ: 33 ವರ್ಷ, ಸಾ: ಮಚಿಗೇರ ಓಣಿ ಕಲಘಟಗಿ ಇವನು ಅಜಮಾಸ 04 ವರ್ಷದಿಂದ ಕುಡಿಯುವ ಚಟ ಕಲಿತಿದ್ದು ಮನೆಯ ಜನರು ಎಷ್ಟೇ ಬುದ್ಧಿ ಹೇಳಿದರೂ ಸಹ ಕುಡಿಯುವದನ್ನು ಬಿಡದೇ ಸರಿಯಾಗಿ ದುಡಿದು ಹಣ ತರದೇ ಇಡುವದರಿಂದ ಅವನ ಹೆಂಡತಿಯು ಅವನಿಗೆ ಕುಡಿಯುವದನ್ನು ಬಿಡುವ ತನಕ ಮನೆಗೆ ಬರುವದಿಲ್ಲಾ ಅಂತ ಹೇಳಿ ತನ್ನ ತವರೂರು ಮುಳಗುಂದಕ್ಕೆ ಹೋಗಿದ್ದು ಆಗಲೂ ಸಹ ಮೃತನು ಕುಡಿಯುವದನ್ನು ಬಿಟ್ಟಿರುವದಿಲ್ಲಾ, ಮೃತನು ಸರಿಯಾಗಿ ದುಡಿಯದೇ ಕುಡಿಯುವ ಚಟಕ್ಕೆ ಬಿದ್ದು ತನ್ನ ಜೀವನದಲ್ಲಿ ಬೇಸರಗೊಂಡು ದಿ: 02/11/2018 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ; 03/11/2018 ರಂದು ಮುಂಜಾನೆ 08.30 ಗಂಟೆಯ ನಡುವಿನ ಅವಧಿಯಲ್ಲಿ ತಾನಾಗಿಯೇ ತನ್ನ ವಾಸದ ಮನೆಯ ಜಂತಿಗೆ ವಾಯರ ಹಗ್ಗ ಕಟ್ಟಿ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಅವನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತನ ಹೆಂಡತಿ ವರದಿ  ಕೊಟ್ಟಿದ್ದು ಈ ಕುರಿತು ಕಲಘಟಗಿ ಪೊಲೀಸ ಠಾಣೆಯಲ್ಲಿ ಯುಡಿನಂ 64/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.