ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, November 5, 2018

CRIME INCIDENTS 05-11-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:05-11-2018 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಚಳಮಟ್ಟಿ ಗ್ರಾಮದ ಹದ್ದಿ ಜೆಬಿಎಮ್ ಫ್ಯಾಕ್ಟರಿ ಹತ್ತೀರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಇಮ್ತಾಜ ಪಠಾಣ ಹಾಗೂ ಇನ್ನೂ 05 ಜನರು  ಕೂಡಿಕೊಂಡು ತಮ್ಮ ತಮ್ಮ ಸ್ವಂತ ಪಾಯ್ದೆಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾರ ಎಂಬ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 5380-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ ಠಾಣೆಯಲ್ಲಿ ಗುನ್ನಾನಂ 247/2018 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಮುತ್ತಗಿ ಗ್ರಾಮದ ಮೃತನಾದ ಮಾನಪ್ಪ ತಂದೆ ಪರಮೇಶಪ್ಪ ಹವಳಕೊಂಡ ವ: 72 ವರ್ಷ ಸಾ: ಮುತ್ತಗಿ ಇವನು ಬಿ.ಪಿ ದಮ್ಮಿನ ಕಾಯಿಲೆಯಿಂದ ಬಳಲುತ್ತಿದ್ದು ವಯಸ್ಸಾಗಿದ್ದರಿಂದ ತ್ರಾಸ್ ಮಾಡಿಕೊಳ್ಳುತ್ತಿದ್ದವನು, ಮನೆಯವರಿಗೆ ನಾನು ಭಾರವಾಗಿದ್ದೇನೆ ಜೀವನ ಇಡಬಾರದು ಅಂತ ಅನ್ನುತ್ತಿದ್ದವನು ತನಗಿದ್ದ ಕಾಯಿಲೆಗಳ ತ್ರಾಸಿನಿಂದ ಜೀವದಲ್ಲಿ ಬೇಸರಗೊಂಡು ದಿನಾಂಕ; 04/11/2018 ರಂದು ರಾತ್ರಿ 11.00 ಗಂಟೆಯಿಂದ ದಿನಾಂಕ; 05/11/2018 ರಂದು ಮುಂಜಾನೆ 06.00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಎಲ್ಲರೂ ಮಲಗಿದಾಗ ತಾನಾಗಿಯೇ ತನ್ನ ಮನೆಯ ಮುಂದಿನ ಚಾವಣಿಯ ಜಂತಿಗೆ ಹಗ್ಗ ಕಟ್ಟಿ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಅವನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತನ ಮಗ ವರದಿಕೊಟ್ಟಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ ಠಾಣೆಯಲ್ಲಿ ಗುನ್ನಾನಂ 248/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಧುಮ್ಮವಾಡ ಗ್ರಾಮದ ಮೃತ ಮಂಜುನಾಥ ತಂದೆ ಭಿಂಪ್ಪ ಲಕಮಾಪೂರ ವಯಾ 45 ವರ್ಷ ಸಾ: ದುಮ್ಮವಾಡ ಈತನು ರಾತ್ರಿ ಊಟ ಮಾಡಿದ ನಂತರ ಒಮ್ಮೇಲೆ ಎದೆ ನೋವು ಅಂತಾ ಒದ್ದಾಡುತ್ತಿರುವವನಿಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರಕ್ಕೆ ಎಸ್ ಡಿ ಎಮ್ ಆಸ್ಪತ್ರೆ ಸತ್ತೂರ ಧಾರವಾಡದಲ್ಲಿ ದಾಖಲಿಸಿದಾಗ ಉಪಚಾರಪಲಿಸದೇ ಹೃದಯಾಘಾತವಾಗಿ ಮರಣಹೊಂದಿದ್ದು ಇರುತ್ತದೆ  ಅವನ ಮರಣದಲ್ಲಿ ತನಗೆ ಹಾಗೂ ತನ್ನ ಮನೆಯ ಜನರಿಗೆ  ಯಾವದೇ ಸಂಶಯವಿರುವದಿಲ್ಲ ಅಂತ ವರದಿಕೊಟ್ಟಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ ಠಾಣೆಯಲ್ಲಿ ಗುನ್ನಾನಂ 249/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.