ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, November 7, 2018

CRIME INCIDENTS 06-11-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:06-11-2018 ರಂದು ವರದಿಯಾದ ಪ್ರಕರಣಗಳು

1.ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 06-11-2018 ರಂದು ಮುಂಜಾನೆ 6-40 ಗಂಟೆಗೆ ಕುಂಬಾರಕೊಪ್ಪ ಗ್ರಾಮದ ಬಸ್ಟ್ಯಾಂಡ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆಪಾದಿತರಾದ 1) ಕ್ರಿಷ್ಣಾ ತಂದೆ ಹನಮಂತಪ್ಪ ಮೂಲಿಮನಿ 2) ಪ್ರಕಾಶ ತಂದೆ ಅರ್ಜುನ ಮೂಲಿಮನಿ 3) ಮಡಿವಾಳಪ್ಪ ತಂದೆ ಆನಂದಪ್ಪ ಕಳಸಣ್ಣವರ 4) ಸಂಬಾಜಿ ತಂದೆ ಹನಮಂತಪ್ಪ ಒಕ್ಕುಂದ ಸಾ|| ಎಲ್ಲರೂ ಕುಂಬಾರಕೊಪ್ಪ ತಾ|| ಅಳ್ನಾವರ ಜಿ|| ದಾರವಾಡ ಇವರುಗಳು ತಮ್ಮ ತಮ್ಮ ಪಾಯಿದೆಗೋಸ್ಕರ 52 ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬುವ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ.2390-00 ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಆಳ್ನಾವರ್ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 106/2018 ಕಲಂ 87 ಕೆ.ಪಿ.ಅ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2. ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 06-11-2018ರಂದು ಮುಂಜಾನೆ 9-50 ಗಂಟೆಗೆ ದೇವೆರಹುಬ್ಬಳ್ಳೀ ಗ್ರಾಮದ ಬಸ್ಟ್ಯಾಂಡ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಇದರಲ್ಲಿಯ ಆಪಾದಿತರಾದ 1) ರಾಜು ಹೂವಪ್ಪ ಹರಿಜನ 2) ಮಂಜುನಾಥ ತಂದೆ ತಿರಕಪ್ಪ ಪಾರಿಶವಾಡ 3) ಮಹದೇವಪ್ಪ ತಂದೆ ಪಕ್ಕೀರಪ್ಪ ಬಾಚಗುಂಡಿ 4) ನಿಂಗಪ್ಪ ತಂದೆ ನೀಲಕಂಠಪ್ಪ ಬಡಿಗೇರ 5) ಮೈಲಾರಗೌಡಾ ತಂದೆ ರಂಗನಗೌಡಾ ಪಾಟೀಲ 6) ಚನಬಸಯ್ಯಾ ತಂದೆ ಚಂದ್ರಯ್ಯಾ ಹಿರೇಮಠ ಸಾ|| ಎಲ್ಲರೂ ದೇವರ ಹುಬ್ಬಳ್ಳಿ ತಾ||ಜಿ|| ದಾರವಾಡ ಇವರುಗಳು ತಮ್ಮ ತಮ್ಮ ಪಾಯಿದೆಗೋಸ್ಕರ 52 ಎಸ್ಪೀಟ ಎಲೆಗಳ ಸಹಾಯದಿಮದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ.2300-00 ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಆಳ್ನಾವರ್ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 107/2018 ಕಲಂ 87 ಕೆ.ಪಿ.ಅ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 06-11-2018 ರಂದು ಬೆಳಗ್ಗಿನ 03-00 ಗಂಟೆಗೆ ತೆಗೂರ ಸೆವೆನ್ ಲೌಸ್ ದಾಬ  ಹತ್ತಿರ ಅರೋಪಿತರಾದ ಇಲಿಯಾಸ ಪೋಕರ ಹಾಗೂ 9 ಜನರು ಕೂಡಿಕೊಂಡು ಸಾರ್ವಜನಿಕ ಸ್ಥಳದಲ್ಲಿ ತಮ್ಮ ಸ್ವಂತ ಪಾಯದೆಗೊಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೆಟ ಎಲೆಗಳ ಸಾಹಯದಿಂದ ಅಂದರ ಬಾಹರ ಅಂಬವ ಜೂಜಾಟದಲ್ಲಿ ತೊಡಗಿದಾಗ ಸಿಕ್ಕಿದ್ದು ಅವರಿಂದ ರೂ.6900-00 ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 175/2018 ಕಲಂ 87 ಕೆ.ಪಿ.ಅ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 06-11-2018 ರಂದು 17-10 ಗಂಟೆಗೆ ಆರೋಪಿತರಾದ ಪುಂಡಲೀಕ ಬಂಗೇನವರ ಹಾಗೂ 5 ಜನರು ಕೂಡಿಕೊಂಡು ಗುಳೇದಕೊಪ್ಪ ಗ್ರಾಮದ ಮೇಗಿನ ಓಣಿಯ ಮಸೀದಿ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ  ಕುಳಿತುಕೊಂಡು ತಮ್ಮ ತಮ್ಮ ಪಾಯ್ದೆಗೊಸ್ಕರ ಇಸ್ಪಿಟ ಎಲೆಗಳ ಸಹಾಯದಿಂದಾ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಅಂಬುವ ಜೂಜಾಟವನ್ನು  ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ.830-00 ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 176/2018 ಕಲಂ 87 ಕೆ.ಪಿ.ಅ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

5. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಗರಗ ಪೊಲೀಸ ಠಾಣೆ ಹದ್ದಿ ಪೈಕಿ ಕೋಟೂರ ಗ್ರಾಮದ ಉಡಚಮ್ಮನ ಗುಡಿ ಹತ್ತಿರ ರಸ್ತೆಯ ಬದಿಗೆ ದಿನಾಂಕಃ 06-11-2018 ರಂದು 18-40 ಅವರ್ಸಕ್ಕೆ ಆರೋಪಿತರಾದ ಫಕ್ರುಸಾಬ ಉಸ್ತಾದ ಹಾಗೂ 3 ಜನರು ಕೂಡಿಕೊಂಡು ತಮ್ಮ ತಮ್ಮ ಫಾಯಿದೇಗೋಸ್ಕರ ಇಸ್ಪೇಟ ಎಲೆಗಳ ಸಹಾಯದಿಂದಾ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಅಂಬುವ ನಶೀಬದ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ.1850-00 ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 177/2018 ಕಲಂ 87 ಕೆ.ಪಿ.ಅ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

6. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿಃ06-11-2018 ರಂದು ಬೆಳಗಿನ ಜಾವ 04-30 ಗಂಟೆ ಸುಮಾರಿಗೆ ಹುಬ್ಬಳ್ಳಿ ಧಾರವಾಡ ಬೈಪಾಸರಸ್ತೆ ಇಟ್ಟಿಗಟ್ಟಿ ಗ್ರಾಮದ ಮೈಕ್ರೊಪಿನಿಷ ಪ್ಯಾಕ್ಟರಿ ಹತ್ತಿರ ಲಾರಿ ನಂ MH 46 H 7659 ನೇದ್ದರ ಚಾಲಕ ಹುಬ್ಬಳ್ಳಿ ಕಡೆಯಿಂದ ಧಾರವಡ ಕಡೆಗೆ ಅತೀವೆಗ ವಾಗಿ ಅಜಾಕರುಕತೆಯಿಂದ ಮಾನವೀಯ ಪ್ರಾಣಕ್ಕೆ  ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಒಮ್ಮೆಲೆ ರಾಂಗ ಸೈಡಿಗೆ ತೆಗೆದು ಕೊಂಡು ಲಾರಿಯ ವೇಗ ನಿಯಂತ್ರಣ ಮಾಡಲಾಗದೇ ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ರಸ್ತೆ ಎಡಸೈಡಿನಲ್ಲಿ ಸಾವಕಾಶವಾಗಿ ಹೋಗುತ್ತಿದ್ದ ಕಾರ ನಂ KA 25 MA 9984  ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಮಾಡಿ ಅಪಘಾತದಲ್ಲಿ ಕಾರಿನಲ್ಲಿದ್ದ ಕಾರ ಚಾಲಕ ಸಿದ್ದಲಿಂಗಪ್ಪ ಗುರಲಿಂಗಪ್ಪ ಗೋಳಸಂಗಿ ವಯಾಃ34ವರ್ಷ ಜಾತಿಃಹಿಂದೂ ಗಾಣಿಗ ಉದ್ಯೋಗಃಸರಕಾರಿ ನೌಕರ  ಹಾಗೂ ಮಹೇಶ ಗುರಲಿಂಗಪ್ಪ ಗೋಳಸಂಗಿ ವಯಾಃ30ವರ್ಷ ಜಾತಿಃಹಿಂದೂ ಗಾಣಿಗ ಉದ್ಯೋಗಃಖಾಸಗಿ ನೌಕರ  ಇವರಿಗೆ ತೀವೃ ಗಾಯ ಪಡಿಸಿ ಸ್ಥಳದಲ್ಲಿ ಮರಣ ಪಡಿಸಿದ್ದಲ್ಲದೆ ತನಗೂ ಸಹ ಗಾಯ  ಪಡಿಸಿಕೊಂಡಿದ್ದು ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 262/2018 ಕಲಂ IPC 1860 (U/s-279,338,304(A)) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.