ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, November 7, 2018

CRIME INCIDENTS 07-11-2018


ದಿನಾಂಕ. 07-11-2018 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಗರಗ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 06-11-2018 ರಂದು 15-00 ಗಂಟೆಗೆ ಯಾವದೋ ಒಂದು ಲಾರಿಯ ಚಾಲಕನು ತನ್ನ ಲಾರಿಯನು ಧಾರವಾಡ ಕಡೆಯಿಂದಾ ಬೆಳಗಾವಿ ಕಡೆಗೆ ಅತೀ ಜೋರಿನಿಂದಾ  ವ ನಿಷ್ಕಾಳಜೀತನದಿಂಧಾ ಚಲಾಯಿಸಿಕೊಂಡು ಬಂದು ರಾಸ್ಟ್ರೀಯ ಹೆದ್ದಾರಿ ನಂ 4 ರ ಮೇಲೆ ಕೋಟೂರ ಕ್ರಾಸ್ ಮುಂದೆ ಕೆರಿ ಮುಲ್ಲಾ ದಾಬಾ ಹತ್ತಿರ ಮುಂದೆ ಹೋಗುತ್ತಿದ ಪಿರ್ಯಾದಿ ಸಂತೋಷ ಯಲಗೌಡ ರ ಕಾರ ನಂಬರ ಕೆಎ28-ಎಮ್-7249 ನೇದಕ್ಕೆ ಹಿಂದಿನಿಂದಾ ಡಿಕ್ಕಿಮಾಢಿ ಅಪಘಾತಪಡಿಸಿ ಪಿರ್ಯಾದಿಗೆ ಹಾಗೂ ಕಾರಿನಲ್ಲಿ ಇದ್ದ ಮಾಲತಿ ಪಾಟೀಲ್ ಅನ್ನುವವರಿಗೆ ಸಾದಾ ಸ್ವರೂಪದ ಗಾಯಪಡಿಸಿ ಲಾರಿ ಸಮೇತ ಹೋಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-07-11-2018 ರಂದು ಮುಂಜಾನೆ 09-00 ಗಂಟೆಯ ಸುಮಾರಿಗೆ ಕಲಘಟಗಿ ಶಹರದ ತಡಸ ಕ್ರಾಸ್ ಹತ್ತಿರ  ಆರೋಫಿತರು  ಸಹದೇವ ಬಸಪ್ಪ ತಮ್ಮನ್ನವರ  ಮತ್ತು ನಿಜಗೂಣಿ ಬಿ.ಗೂಡಿಹಾಳ ಸಾ: ಕಲಘಟಗಿ ಇವರು ತಮ್ಮ ಬಳಿ ಯಾವುದೆ ಪಾಸು ವ ಪರ್ಮೀಟ ಇಲ್ಲದೆ ಅನಧೀಕೃತವಾಗಿ 1]Old Taven whiskey 180 ML 34 Tetra Pockets ಒಟ್ಟು ಅ..ಕಿ..2520/- ಕಿಮ್ಮತ್ತಿನವುಗಳನ್ನು ಎರಡು ಚೀಲದಲ್ಲಿ ತಮ್ಮ ತಮ್ಮ ಕೈಯಿಯಲ್ಲಿ ಹಿಡಿದುಕೊಂಡು ಮಾರಾಟ ಮಾಡುವ ಉದ್ದೆಶದಿಂದ ಸಾಗಾಟ ಮಾಡುತ್ತಿದ್ದಾಗ ಮಾಲ ಸಮೇತ ಸಿಕ್ಕ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-07-11-2018 ರಂದು 11-50 ಗಂಟೆಯ ಸುಮಾರಿಗೆ ಕಲಘಟಗಿ ಶಹರದ ಬಮ್ಮಿಗಟ್ಟಿ ಕ್ರಾಸ್ ಹತ್ತಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಹನಮಂತ ತಂದೆ ಫಕ್ಕಿರಪ್ಪ ನಡುವಿನಮನಿ ವಯಾ 30 ವರ್ಷ ಸಾ..ಬೀರವಳ್ಳಿ ತಾ..ಕಲಘಟಗಿ ಇವನು ತನ್ನ ಬಳಿ ಯಾವುದೆ ಪಾಸು ವ ಪರ್ಮಿಟ ಇಲ್ಲದೆ ಅನಧಿಕೃತವಾಗಿ ಒಟ್ಟು 1091/- ರೂ ಕಿಮ್ಮತ್ತಿನ 1]Original choice deluxe whiskey 90 ML.ದ 36 Tetra pockets ನೇದವುಗಳನ್ನು ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುವ ಕುರಿತು ಸಾಗಾಟ ಮಾಡುತ್ತಿದ್ದಾಗ ಮಾಲ ಸಮೇತ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.